ಬೆಳಗಾವಿ: ಗ್ರಾಹಕರ ಶ್ರಮದಿಂದ ಯಶಸ್ವಿಯಾಗಿ 15 ವರ್ಷಗಳಿಂದ ಸಂಯುಕ್ತ ಸಹಕಾರಿ ತರಬೇತಿಗಳನ್ನು ಆಯೋಜಿಸುತ್ತಿದೆ. ರಾಜ್ಯಾದ್ಯಂತ ಸಹಕಾರಿ ಸಂಸ್ಥೆ ಲಕ್ಷಾಂತರ ಗ್ರಾಹಕರ ಹೊಂದಿದೆ. ಸಹಕಾರಿಗಳು ಪ್ರತಿ ವರ್ಷ ತಮ್ಮ ಲಾಭದಿಂದ ಶಿಕ್ಷಣ ನಿಧಿಯನ್ನು ಸಂಯುಕ್ತ ಸಹಕಾರಿಗೆ ಸಲ್ಲಿಸುತ್ತಿದ್ದು ಅದು ಸಹಕಾರಿಗಳಿಗೆ ಒದಗಿಸುವ ತರಬೇತಿ ಸದುಪಯೋಗವಾಗಿದೆ ಎಂದು ಹಿರಿಯ ಸನ್ನದು ಲೆಕ್ಕ ಪರಿಶೋಧಕರಾದ ಎಸ್.ಜಿ. ಹೆಗಡೆ ಹೇಳಿದರು.
ಇಲ್ಲಿನ ಖಾಸಗಿ ಸಭಾಭವನದಲ್ಲಿ ಗುರುವಾರ 09 ರಂದು ಆಯೋಜಿಸಿದ ಸೌಹಾರ್ದ ಸಹಕಾರಿ ಸಂಸ್ಥೆಗಳಿಗೆ ಸಂಯುಕ್ತ ಸಹಕಾರಿ ವಾಷರ್ಿಕ ಸಭೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ,
ಸೌಹಾರ್ದ ಸಹಕಾರಿ ಸಂಸ್ಥೆಗಳಿಗೆ ಸಂಯುಕ್ತ ಸಹಕಾರಿಯ ಒದಗಿಸುತ್ತಿರುವ ತರಬೇತಿಗಳು ಶ್ಲಾಘನೀಯ ಎಂದು ಬೆಳಗಾವಿ ಜಿಲ್ಲೆಯಲ್ಲಿಯ ಬೈಲಹೊಂಗಲ, ಸವದತ್ತಿ, ರಾಮದುರ್ಗ ಹಾಗೂ ಕಿತ್ತೂರು ತಾಲೂಕುಗಳಲ್ಲಿಯ ಸೌಹಾರ್ದ ಸಹಕಾರಿಗಳ ಮುಖ್ಯ ಕಾರ್ಯನಿವರ್ಾಹಕರಿಗೆ ಕನರ್ಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ
ಸಂಯುಕ್ತ ಸಹಕಾರಿಯು ಇನ್ನೂ ಸಹಕಾರಿಗಳ ಸದಸ್ಯರ ಹಲವು ಆಶೋತ್ತರಗಳಿಗೆ ಸ್ಪಂದಿಸಬೇಕಾಗಿದೆ ಎಂದು ಸಹ ನುಡಿದರು. ಸಹಕಾರಿಗಳು ಮಾರುಕಟ್ಟೆಯ ಠೇವು ಮತ್ತು ಸಾಲಗಳ ಮೇಲೆ ಆಕರಿಸುವ ಬಡ್ಡಿದರಗಳನ್ನು ಅಭ್ಯಸಿಸಿ ತಾವು ಸ್ವೀಕರಿಸುವ ಠೇವುಗಳ ಮೇಲೆ ಹಾಗೂ ವಿತರಿಸುವ ಸಾಲಗಳ ಮೇಲೆ ಯೋಗ್ಯ ಬಡ್ಡಿ ದರಗಳನ್ನು ನಿಗದಿಪಡಿಸಿ, ಠೇವು ಮತ್ತು ಸಾಲ ವ್ಯವಹಾರಗಳನ್ನು ಸುರಕ್ಷಿತ ಮತ್ತು ಉತ್ಕ್ರಷ್ಟಗೊಳಿಸಬೇಕಾಗಿದೆ.
ಸಹಕಾರಿಗಳು ತಾನು ಹೊಂದಿದ ನಿಧಿಗಳನ್ನು ಕಾನೂನು ಮಿತಿಯೊಳಗೆ ಸಾಲ ವ್ಯವಹಾರಗಳನ್ನು ವಿನಿಯೋಗಿಸಿ ಸಾಲ ವ್ಯವಹಾರಗಳನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಸಾಲ ವಸೂಲಿಗಳನ್ನು ಸರಿಯಾಗಿ ಮಾಡಬೇಕಾಗಿದೆ. ತಾನು ಈಗಾಗಲೇ ಹೊಂದಿದ ಸುಸ್ಥಿ ಬಾಕಿಗಳ ಮೇಲೆ ಕಾನೂನು ಕ್ರಮಗಳನ್ನು ಕೈಕೊಂಡು ಸುಸ್ಥಿ ಬಾಕಿಯನ್ನು ವಸೂಲಿ ಮಾಡಬೇಕಾಗಿದೆ ಎಂದು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸಂಯುಕ್ತ ಸಹಕಾರಿ ಬೆಳಗಾವಿ ವಿಭಾದ ಪರವೀಕ್ಷಣಾಧಿಕಾರಿಯಾದ ಜಿ.ಎಸ ಟೋಪಣ್ಣವರ ಇವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಸಲಹೆ ಮಾಡಿದರು. ಅದಲ್ಲದೇ ಸಹಕಾರಿಗಳು ಠೇವುಗಳ ಸುರಕ್ಷತೆಗಾಗಿ ಅವುಗಳ ಮೇಲೆ ದ್ರವ್ಯಾಸ್ಥಿಗಳನ್ನು ಕಾನೂನು ಅನ್ವಯ ಇಡಬೇಕು.
ಸಹಕಾರಿಯ ಅಭಿವೃದ್ಧಿಗೆ ಸಹಕರಿಸಿದ ಸದಸ್ಯರಿಗೆ ಚುನಾವಣೆ ವೇಳೆಗೆ ಮತ ಹಾಕುವ ಅರ್ಹತೆಯನ್ನು ಪಡೆಯಲು ಯೋಗ್ಯ ಮಾಹಿತಿಗಳನ್ನು ಯೋಗ್ಯ ರೀತಿಯಲ್ಲಿ ಕಾಲ ಕಾಲಕ್ಕೆ ಕೊಡಬೇಕು ಮತ್ತು ಸಹಕಾರಿಯ ಆಡಳಿತ ಮಂಡಳಿಯ ಚುನಾವಣೆಗಳು ತಾಂತ್ರಿಕ ತೊಂದರೆಗಳಿಲ್ಲದೆ ವೇಳೆಗೆ ಸರಿಯಾಗಿ ಜರುಗಿ ಹೊಸ ಆಡಳಿತ ಮಂಡಳಿ ರಚನೆಯಾಗಲು ಚುನಾವಣಾಧಿಕಾರಿಗಳಿಗೆ ಕಾಲ ಕಾಲಕ್ಕೆ ಮಾಹಿತಿಗಳನ್ನು ಸಮರ್ಪಕವಾಗಿ ಸಲ್ಲಿಸಿ ಸಹಕಾರಿ ಸಂಸ್ಥೆಗಳ ಆಡಳಿತವನ್ನು ಸುಗಮಗೊಳಿಸಬೇಕು ಎಂದು ಸಹಕಾರಿಗಳ ವ್ಯವಸ್ಥಾಪಕರುಗಳಿಗೆ ಎಂದು ಸಹ ಸಲಹೆ ಮಾಡಿದರು.
ಮಂಜುಳಾ ಹಾಗೂ ಸಂಗಡಿಗರಿಂದ ಪ್ರಾರ್ಥನೆ. ನಂತರ ಸಂಯುಕ್ತ ಸಹಕಾರಿಯ ನ್ಯಾಯಾಲಯದ ಅಧಿಕಾರಿ ರಾಚಯ್ಯಾ ಹಿರೇಮಠ ಇವರು ಎಲ್ಲ ಅಥಿತಿಗಳನ್ನು ಸ್ವಾಗತಿಸಿದರು. ಸಂಯುಕ್ತ ಸಹಕಾರಿಯ ಅಭಿವೃದ್ಧಿ ಅಧಿಕಾರಿಗಬಸವರಾಜ ಹೊಂಗಲ ಇವರ ಪ್ರಾಸ್ತಾವಿಕ ಭಾಷಣ ಮಾಡಿದರು.
ಸಮಾರಂಭದಲ್ಲಿ ಸಂಯುಕ್ತ ಸಹಕಾರಿಯ ಅಭಿವೃದ್ಧಿ ಅಧಿಕಾರಿಗಳಾದ ವೃಷಭನಾಥ ಪರಪ್ಪನ್ನವರ ಇವರು ವಂದನಾರ್ಪನೆ ಮಾಡಿದರೇ ಇನ್ನೋರ್ವ ಅಭಿವೃದ್ಧಿ ಅಧಿಕಾರಿಗಳಾದ ಗಂಗಾರಾಮ ಕೋಳಾಪಟ್ಟಿ ಇವರು ಸಮಾರಂಭದ ನಿರೂಪಣೆ ಮಾಡಿದರು.