ಕರೋನ ಭೀತಿ : ಖೈದಿಗಳ ಬಿಡುಗಡೆಗೆ ತೀರ್ಮಾನ

ಕಾಬೂಲ್, ಮಾರ್ಚ್ 23,ದೇಶದಲ್ಲಿ ಕರೋನ ಸೋಂಕು  ಹರಡುವುದನ್ನು ತಡೆಯುವ ಹಲವು ಕ್ರಮಗಳ ಭಾಗಿವಾಗಿ ಜೈಲಿನ  ಹಲವು ಖೈದಿಗಳನ್ನು ಬಿಡುಗಡೆ ಮಾಡಲು ಅಫಘಾನ್ ಅಧಿಕಾರಿಗಳು ನಿರ್ಧರಿಸಿದ್ದಾರೆ. ಶಾಂತಿ ಪ್ರಕ್ರಿಯೆಯಲ್ಲಿ ಒಪ್ಪಿದಂತೆ ಸೆರೆಹಿಡಿದ ಕೈದಿಗಳನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಅಫ್ಘಾನಿಸ್ತಾನದ ಅಮೆರಿಕ  ವಿಶೇಷ ಪ್ರತಿನಿಧಿ ಜಲ್ಮೇ ಖಲೀಲ್ಜಾದ್ ತಾಲಿಬಾನ್ ಚಳುವಳಿ ಮತ್ತು ಅಫಘಾನ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಭಾನುವಾರ ನಡೆದ ನಾಲ್ಕು ಪಕ್ಷಗಳ ವಿಡಿಯೋ-ಸಮ್ಮೇಳನದಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ ಎಂದು ಅವರು ಹೇಳಿದರು.
ಕರೋನಸೋಂಕು  ಹರಡುವುದನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ಹಲವು  ಬಂಧಿತರನ್ನು ಬಿಡುಗಡೆ ಮಾಡಲಾಗುತ್ತಿದೆ  ಎಂದೂ  ಹೇಳಿಕೆಯಲ್ಲಿ ತಿಳಿಸಲಾಗಿದೆ.ಹೇಳಿಕೆಯ ಪ್ರಕಾರ, ಜೈಲುಗಳ ನಿಯಂತ್ರಣ ಪ್ರಾಧಿಕಾರದ ಆಡಳಿತ ಮತ್ತು ದೇಶದ ನ್ಯಾಯಾಂಗ ಸಂಸ್ಥೆಗಳ ಅಧಿಕಾರಿಗಳು ಮುಂದಿನ 48 ಗಂಟೆಗಳ ಒಳಗೆ ಕೈದಿಗಳನ್ನು ಬಿಡುಗಡೆ ಮಾಡುವ ಬಗ್ಗೆ ನಿರ್ದಿಷ್ಟ ಯೋಜನೆ ರೂಪಿಸಲು ಸಿದ್ಧರಾಗಿದ್ದಾರೆ.ಇಲ್ಲಿಯವರೆಗೆ, ಅಫ್ಘಾನಿಸ್ತಾನದಲ್ಲಿ 34 ಕೋವಿಡ್ ಸೋಂಕಿನ ಪ್ರಕರಣಗಳು  ದೃಢಪಟ್ಟಿವೆ.