ತಂದೆ, ಮಗ ಕಾಣೆ

Father and son are missing

ತಂದೆ, ಮಗ ಕಾಣೆ

ಬಳ್ಳಾರಿ 06: ನಗರದ ಬಸವೇಶ್ವರ ನಗರ ಬಡಾವಣೆಯ ದಿವಾಕರ ಬಾಬು ಲೇಓಟ್‌ನ ವಾರ್ಡ್‌ ನಂ.20 ರ ನಿವಾಸಿಯಾದ ನಾಡಗೌಡ ವಿನೋದ ಕುಮಾರ್ ಎನ್ನುವ 39 ವರ್ಷದ ವ್ಯಕ್ತಿ ಮತ್ತು ಮಗನಾದ ಅಥರ್ವ ಎನ್ನುವ 03 ವರ್ಷದ ಬಾಲಕ, ಇಬ್ಬರೂ ಫೆ.03 ರಂದು ಕಾಣೆಯಾಗಿರುವ ಕುರಿತು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ. 

ನಾಡಗೌಡ ವಿನೋದ್ ಕುಮಾರ್ ಚಹರೆ: ಎತ್ತರ 5.8 ಅಡಿ, ಸದೃಢ ಮೈಕಟ್ಟು, ಕೆಂಪು ಮೈ ಬಣ್ಣ ಹೊಂದಿದ್ದು, ಕಪ್ಪು-ಬಿಳಿ ಕೂದಲು ಹೊಂದಿರುತ್ತಾನೆ. 

ಕಾಣೆಯಾದ ಸಂದರ್ಭದಲ್ಲಿ ಕಂದು ಬಣ್ಣದ ಅಂಗಿ, ಕ್ರೀಂ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಎಡ ಕೈಯಲ್ಲಿ ‘ವಿನೋದ್‌’ ಎಂದು ಇಂಗ್ಲೀಷ್‌ನಲ್ಲಿ ಅಚ್ಚೆ ಹಾಕಿಸಿರುತ್ತಾನೆ.ವ್ಯಕ್ತಿಯು ಕನ್ನಡ, ತೆಲುಗು, ಹಿಂದಿ ಮತ್ತು ಇಂಗ್ಲೀಷ್ ಭಾಷೆ ಮಾತನಾಡುತ್ತಾನೆ.ಮಗ ಅಥರ್ವ ಚಹರೆ: 3 ಅಡಿ ಎತ್ತರ, ಕೆಂಪು ಮೈಬಣ್ಣ, ತೆಳುವಾದ ಮೈಕಟ್ಟು, ಕಪ್ಪು ಕೂದಲು ಹೊಂದಿದ್ದು, ಎಡ ತೊಡೆಯ ಮೇಲೆ ಸಣ್ಣ ಮಚ್ಛೆ ಇರುತ್ತದೆ. 

ಕನ್ನಡ ಭಾಷೆ ಮಾತನಾಡುತ್ತಾನೆ. ಕಾಣೆಯಾದ ಸಂದರ್ಭದಲ್ಲಿ ಹಳದಿ ಬಣ್ಣದ ಟೀ-ಶರ್ಟ್‌, ಕಂದು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.ಕಾಣೆಯಾದ ವ್ಯಕ್ತಿ ಮತ್ತು ಬಾಲಕನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಗಾಂಧಿನಗರ ಪೊಲೀಸ್ ಠಾಣೆಯ ಮೊ.9900981474 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.