ತಂದೆ, ಮಗ ಕಾಣೆ
Father and son are missing
ತಂದೆ, ಮಗ ಕಾಣೆ
ಬಳ್ಳಾರಿ 06: ನಗರದ ಬಸವೇಶ್ವರ ನಗರ ಬಡಾವಣೆಯ ದಿವಾಕರ ಬಾಬು ಲೇಓಟ್‌ನ ವಾರ್ಡ್ ನಂ.20 ರ ನಿವಾಸಿಯಾದ ನಾಡಗೌಡ ವಿನೋದ ಕುಮಾರ್ ಎನ್ನುವ 39 ವರ್ಷದ ವ್ಯಕ್ತಿ ಮತ್ತು ಮಗನಾದ ಅಥರ್ವ ಎನ್ನುವ 03 ವರ್ಷದ ಬಾಲಕ, ಇಬ್ಬರೂ ಫೆ.03 ರಂದು ಕಾಣೆಯಾಗಿರುವ ಕುರಿತು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.
ನಾಡಗೌಡ ವಿನೋದ್ ಕುಮಾರ್ ಚಹರೆ: ಎತ್ತರ 5.8 ಅಡಿ, ಸದೃಢ ಮೈಕಟ್ಟು, ಕೆಂಪು ಮೈ ಬಣ್ಣ ಹೊಂದಿದ್ದು, ಕಪ್ಪು-ಬಿಳಿ ಕೂದಲು ಹೊಂದಿರುತ್ತಾನೆ.
ಕಾಣೆಯಾದ ಸಂದರ್ಭದಲ್ಲಿ ಕಂದು ಬಣ್ಣದ ಅಂಗಿ, ಕ್ರೀಂ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಎಡ ಕೈಯಲ್ಲಿ ‘ವಿನೋದ್’ ಎಂದು ಇಂಗ್ಲೀಷ್‌ನಲ್ಲಿ ಅಚ್ಚೆ ಹಾಕಿಸಿರುತ್ತಾನೆ.ವ್ಯಕ್ತಿಯು ಕನ್ನಡ, ತೆಲುಗು, ಹಿಂದಿ ಮತ್ತು ಇಂಗ್ಲೀಷ್ ಭಾಷೆ ಮಾತನಾಡುತ್ತಾನೆ.ಮಗ ಅಥರ್ವ ಚಹರೆ: 3 ಅಡಿ ಎತ್ತರ, ಕೆಂಪು ಮೈಬಣ್ಣ, ತೆಳುವಾದ ಮೈಕಟ್ಟು, ಕಪ್ಪು ಕೂದಲು ಹೊಂದಿದ್ದು, ಎಡ ತೊಡೆಯ ಮೇಲೆ ಸಣ್ಣ ಮಚ್ಛೆ ಇರುತ್ತದೆ.
ಕನ್ನಡ ಭಾಷೆ ಮಾತನಾಡುತ್ತಾನೆ. ಕಾಣೆಯಾದ ಸಂದರ್ಭದಲ್ಲಿ ಹಳದಿ ಬಣ್ಣದ ಟೀ-ಶರ್ಟ್, ಕಂದು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.ಕಾಣೆಯಾದ ವ್ಯಕ್ತಿ ಮತ್ತು ಬಾಲಕನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಗಾಂಧಿನಗರ ಪೊಲೀಸ್ ಠಾಣೆಯ ಮೊ.9900981474 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ 