ಮೈಸೂರು, ನ 19 ಕಾಂಗ್ರೆಸ್ ಮುಖಂಡ ಹಾಗೂ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರ ಮೇಲೆ ನೆಡೆದಿರುವ ಮಾರಣಾಂತಿಕ ಹಲ್ಲೆ ಪ್ರಕರಣದ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ- ಎಸ್ ಐ ಟಿ ರಚಿಸಲಾಗಿದೆ.
ಹಲ್ಲೆಯಿಂದಾಗಿ ತೀವ್ರಗಾಯಗೊಂಡಿರುವ ಮಾಜಿ ಸಚಿವರೂ ಆಗಿರುವ ತನ್ವೀರ್ ಸೇಠ್, ಅವರನ್ನು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕಲ್ಪಿಸಲಾಗುತ್ತಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಮಂದುವರಿದೆ ಎಂದು ಹೇಳಲಾಗಿದೆ.
ಕಾನೂನು ಮತ್ತು ಸುವ್ಯವಸ್ಥೆ ಉಪ ಪೊಲೀಸ್ ಆಯುಕ್ತ ಎಂ. ಮುತ್ತುರಾಜ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದೆ.
ಸಂಬಂಧಿಕರ ವಿವಾಹ ಸಮಾರಂಭದ ಅರತಕ್ಷತೆಯಲ್ಲಿ ಪಾಲ್ಗೊಂಡಿದ್ದ ತನ್ವೀರ್ ಸೇಠ್ ಅವರ ಮೇಲೆ ಡ್ರಾಗರ್ ನಿಂದ ಮಾರಾಣಾಂತಿಕ ಹಲ್ಲೆ ನಡೆಸಿದ್ದ 24 ವರ್ಷದ ಫಹರ್ಾನ್ ಪಾಷಾ ಎಂಬುವನನ್ನು ಘಟನೆ ನಡೆದ ಕೂಡಲೇ ಪೊಲೀಸರು ಬಂಧಿಸದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಇನ್ನೂ ಐವರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಕೆಲಸ ಕೊಡಿಸಲಿಲ್ಲ ಎಂಬ ಅಸಮಧಾನ ದಾಳಿಕೋರ ಶಾಸಕರ ಮೇಲೆ ಹಲ್ಲೆ ನಡೆಸಲು ಕಾರಣವೇ ಎಂಬ ಪ್ರಶ್ನೆಗೆ, ಉತ್ತರಿಸಿರುವ ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಪೊಲೀಸರಿಗೆ ಕೆಲ ಮಹತ್ವ ಸುಳಿವುಗಳು ಲಭ್ಯವಾಗಿದ್ದು, ಹಲವು ಕೋನಗಳಲ್ಲಿ ತನಿಖೆ ನಡೆಯುತ್ತಿದ್ದು, ಆ ಪೈಕಿ ಈ ಅಂಶವೂ ಒಂದು ಎಂದು ಹೇಳಿದರು.
ತನ್ವೀರ್ ಸೇಠ್ ಅವರ ಮೇಲಿನ ಹಲ್ಲೆ ಸಂಬಂಧ ಸಮಗ್ರ ತನಿಖೆ ನಡೆಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿನ್ನೆ ಆಗ್ರಹಿಸಿದ್ದಾರೆ.
ಕಳೆದ ರಾತ್ರಿ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಭೇಟಿ ನೀಡಿ ತನ್ವೀರ್ ಸೇಠ್ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಅಪರಾಧಿಗಳಿಗೆ ಕಾನೂನು ಮತ್ತು ಸುವ್ಯವಸ್ಥೆಯ ಭಯ ಇಲ್ಲವಾಗಿದೆ. ಆರೋಪಿಗಳ ವಿರುದ್ದ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.
ಘಟನೆಯ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಒತ್ತಾಯಿಸಿದೆ. ಈ ನಡುವೆ ಎಸ್ ಡಿ ಪಿಐ ರಾಜ್ಯಾಧ್ಯಕ್ಷ ಇಲಿಯಾಸ್ ತುಂಬೆ, ತನ್ವೀರ್ ಸೇಠ್ ಮೇಲೆ ನಡೆದಿರುವ ಹಲ್ಲೆ ಪ್ರಕರಣಕ್ಕೂ ತಮ್ಮ ಪಕ್ಷಕ್ಕೂ ಸಂಪರ್ಕ ಕಲ್ಪಿಸುವ ಪ್ರಯತ್ನಗಳನ್ನು ಅವರು ಖಂಡಿಸಿದ್ದಾರೆ.
ಜನರನ್ನು ಟೆಸ್ಟ್ ನತ್ತ ಆಕಷರ್ಿಸಲು ಹಗಲು ರಾತ್ರಿ ಪಂದ್ಯ ಸ್ವಾಗತಾರ್ಹ: ದ್ರಾವಿಡ್