ಉಪವಾಸ ಆಚರಣೆಯಿಂದ ಆರೋಗ್ಯ ಶುದ್ಧೀಕರಣ ಗೊಳ್ಳುತ್ತದೆ: ಪಟೇಲ್
ಕೊಪ್ಪಳ 21: ರಮಜಾನ್ ಉಪವಾಸ ಆಚರಣೆಯಲ್ಲಿ ಅಪಾರ ವಾದಂತಹ ಶಕ್ತಿ ಅಡಗಿದೆ ಉಪವಾಸ ಆರೋಗ್ಯದಲ್ಲಿ ಶುದ್ಧೀಕರಣ ಗೊಳ್ಳುತ್ತದೆ ಎಂದು ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು.
ಅವರು ಗುರುವಾರ ಸಂಜೆ ನಗರದ ಭಾಗ್ಯನಗರ ರಸ್ತೆ ಹತ್ತಿರವಿರುವ ಶಿವಗಂಗಾ ಲೇಓಟ್ ಬಡಾವಣೆಯ ಲ್ಲಿ ಪಠಾನೀಯ ಮಸೀದಿ ಯ ರೋಜದಾರ್ ಮುಸ್ಲಿಂ ಬಾಂಧವರಿಗೆ ಏರಿ್ಡಸಿದ ಇಫ್ತಾರ ಕೂಟ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು, ಶಿವಗಂಗಾ ಲೇಓಟ್ ಬಡಾವಣೆಯ ಹಿಂದೂ ಸಮಾಜ ಬಾಂಧವರು ಈಏರಿ್ಡಸಿರುವ ಈ ಇಫ್ತಾರ್ ಕೂಟ ಭಾವೈಕ್ಯತೆಯ ಪ್ರತೀಕವಾಗಿದೆ ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಪರಸ್ಪರ ಸೌಹಾರ್ದತೆಯ ಬದುಕು ಕಟ್ಟಿಕೊಳ್ಳಬೇಕು ಎಂದರು, ಮುಂದುವರೆದು ಮಾತನಾಡಿ ಹೊಸದಾಗಿ ಆರಂಭಗೊಂಡಿರುವ ನಗರದ ಶಿವಗಂಗಾ ಲೇಓಟ್ ಬಡಾವಣೆಗೆ ನಗರಸಭೆ ವತಿಯಿಂದ ಸಿಗಬಹುದಾದ ಸೌಲಭ್ಯಗಳನ್ನು ಕುಡಿಯುವ ನೀರು ಚರಂಡಿ ವ್ಯವಸ್ಥೆ ಸೇರಿದಂತೆ ಇಲ್ಲಿನ ಉದ್ಯಾನವನ ವನ್ನು ನಿರ್ಮಾಣ ಮಾಡುವ ಕೆಲಸಕ್ಕೆ ಆದ್ಯತೆ ನೀಡಲಾಗುವುದು ಎಂದು ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು.
ಸಮಾರಂಭದಲ್ಲಿ ಶಿವಗಂಗಾ ಬಡಾವಣಿಯ ಪಠಾನೀಯ ಮಸೀದಿ ಪೇಶ ಇಮಾಮ್ ಹಾಫೀಸ್ ಸಾಹೇಬ್, ಬಾಬುಸಾಬ್ ಕೊತ್ವಾಲ್ ಅನ್ಸರ್ ಸಾಬ್ ,ಮುನೀರ್ ಸಿದ್ದಿಕಿ ಹಿರಿಯ ಪತ್ರಕರ್ತ ಸಾಧಿಕ್ ಅಲಿ ಸೇರಿದಂತೆ ಶಿವಗಂಗಾ ಲೇಓಟ್ ಬಡಾವಣೆಯ ಈಶಣ್ಣ ಅಗಡಿ ಕಿಶನ್ ರಾವ್ ಕೋನಾಪುರ ಸುಬ್ಬಣ್ಣ ಮಗಜಿ ಬಸವರಾಜ್ ಮುತ್ತಾಳ ದೇವೇಂದ್ರ್ಪ ಉತ್ತಂಗಿ ಶೀತಲ್ ಪಾಟೀಲ್ ಸದ್ದಾಮ್ ಮಕದ್ದೂಮಿಯ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.