ಲೋಕದರ್ಶನ ವರದಿ
ಮುಗಳಖೋಡ 16: ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಸರಕಾರಿ ಗಾಯರಾಣ ಅತಿಕ್ರಮಣವಾಗಿದ್ದು ಒಟ್ಟು 148.29 ಎಕರೆ ಆಸ್ತಿ ಇದ್ದು ಇದನ್ನು ಸವರ್ೇ ಮಾಡಿ ಅತಿಕ್ರಮಣದಾರರನ್ನು ತೆರವುಗೋಳಿಸಬೇಕೆಂದು ಈ ಹಿಂದೆ ಸಂಭಂದಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಸಾರಿ ಮನವಿ ಸಲ್ಲಿಸಿದರು ಕೇವಲ ಭರವಸೆಯನ್ನು ಮಾತ್ರ ನೀಡುತ್ತೀದ್ದು, ಬೇಡಿಕೆಯು ಈಡೇರದ ಕಾರಣ ದಿ-16ರಂದು ಮು, 10 ಗಂ ಮುಗಳಖೋಡ ಪುರಸಭೆಯ ಆವರಣದ ಮುಂದೆ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದು ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಇನ್ನೂ ಸತ್ಯಾಗ್ರಹವನ್ನು ಮುಂದುವರೆಸುವುದಾಗಿ ಮುಖಂಡರಾದ ಸುರೇಶ ಹೊಸಪೇಟಿ, ಭೀಮಪ್ಪ ಬನಶಂಕರಿ ಹೇಳಿದರು.
ಉಪವಾಸ ಸತ್ಯಾಗ್ರಹ ನಿರತರ ಸ್ಥಳಕ್ಕೆ ಆಗಮಿಸಿದ ಕುಡಚಿ ಕಂದಾಯ ನಿರೀಕ್ಷಕ ಬಿ.ಜಿ.ದಾನೋಳಿ ಮತ್ತು ಗ್ರಾಮ ಲೇಕ್ಕಾಧಿಕಾರಿ ಎಸ.ಎಸ.ಹತ್ತರಕಿ ಅವರು ಭೇಟಿ ನೀಡಿ ಈಗಾಗಲೇ ಭೂಮಾಪನ ಇಲಾಖೆಯವರಿಗೆ ಮುಗಳಖೋಡ ಪುರಸಭೆ ವ್ಯಾಪ್ತಿಯಲ್ಲಿ ಬರುವ ಗಾಯರಾಣ ಜಮೀನು ಸವರ್ೇ ಮಾಡಿ ಕೊಡಬೇಕೆಂದು ಕಂದಾಯ ಇಲಾಖೆ ವತಿಯಿಂದ ಲಿಖಿತ ಅಜರ್ಿಯನ್ನು ಸಲ್ಲಿಸಲಾಗಿತ್ತು ಆದರೆ ವಿಳಂಬವಾಗಿದೆ. ಸೊಮವಾರ ಭೂಮಾಪನ ಇಲಾಖೆಯ ಅಗತ್ಯ ಸಿಬ್ಬಂದಿಯನ್ನು ಕರೆತಂದು ಗಾಯರಾಣ ಜಮೀನು ಸವರ್ೇ ಕಾರ್ಯ ಪ್ರಾರಂಬಿಸುವದಾಗಿ ಹೇಳಿ ಉಪವಾಸನಿರತರನ್ನು ಮನವಲಿಸಲು ಪ್ರಯತ್ನಿಸಿದರೂ ಕೂಡಾ ಧರಣಿ ಕೈ ಬಿಡುವದಿಲ್ಲವೆಂದು ಸ್ಥಳೀಯ ಮುಖಂಡರು ಅಧಿಕಾರಿಗಳಿಗೆ ಸಮಜಾಯಿಸಿದರು. ಹಾರೂಗೇರಿ ಪುರಸಭೆ 5 ಎಕರೆ ಹಾಗೂ ಕಂಕಣವಾಡಿ ಪಟ್ಟಣ ಪಂಚಾಯಿತಿಗೆ 5 ಎಕರೆ ಗಣತ್ಯಾಜ್ಯ ವಿಲೇವಾರಿ ಘಟಕ ನಿಮರ್ಾಣ ಮಾಡಲು ಒಟ್ಟು 10 ಎಕರೆ ಭೂಮಿಯನ್ನು ಮುಗಳಖೋಡ ಪಟ್ಟಣದಿಂದ ಕೊಟ್ಟದ್ದು ಯಾವ ನ್ಯಾಯ? ಅದನ್ನು ಮರಳಿ ಪಡೆಯಲು ಕೂಡಲೆ ಭೂಮಾಪನ ಇಲಾಖೆ, ಕಂಧಾಯ ಇಲಾಖೆಯವರು ಸವರ್ೇ ಮಾಡಿಸಿ ಗುರುತು ಕಾರ್ಯ ಮಾಡಬೇಕು ಒತ್ತ್ತುವರಿದಾರರನ್ನು ತೆರವುಗೋಳಿಸುವವರೆಗೆ ಉಪವಾಸ ಸತ್ಯಾಗ್ರಹವನ್ನು ಕೈಬಿಡುವುದಿಲ್ಲವೆಂದು ಹೇಳಿದರು.
ಈ ಸತ್ಯಾಗ್ರಹದಲ್ಲಿ ಭೀಮಪ್ಪ ಜಾಗನೂರ, ಸುಖದೇವ ಕರಿಭೀಮಗೋಳ, ಹಣಮಂತ ಬಾಬಣ್ಣವರ, ಭಗವಂತ ಹಿಪ್ಪರಗಿ,ಚಂದ್ರಕಾಂತ ಗೌಲತ್ತಿನವರ, ಗಿರಮಲ್ಲ ನಡವಿನಕೇರಿ, ಕಲ್ಲಪ್ಪ ಗೌಲತ್ತಿನವರ, ಚೇತನ ನಡವಿನಕೇರಿ, ಕಪಿಲ ಕರಭೀಮಗೋಳ, ಸುಭಾಸ ಮುನ್ಯಾಳ, ಮಹಾಂತೇಶ ಬಳಿಗಾರ, ಹಾಗೂ ಇತರ ಗ್ರಾಮಸ್ಥರು ಪಾಲ್ಗೋಂಡಿದ್ದಾರೆ.