ಉಪವಾಸ ಸತ್ಯಾಗ್ರಹನಿರತ ಬಿಜೆಪಿ ನಾಯಕ ಪಂಕಜಾ ಮುಂಡೆ

ಔರಂಗಬಾದ್, ಜ 27: ಔರಂಗಾಬಾದ್ ಪ್ರದೇಶದಲ್ಲಿ ಉಂಟಾಗಿರುವ ನೀರಿನ ತೀವ್ರ ಕೊರತೆಯ ಕುರಿತು ಸರ್ಕಾರದ ಗಮನ ಸೆಳೆಯುವ ಸಲುವಾಗಿ ಬಿಜೆಪಿ ನಾಯಕ ಪಂಕಜಾ ಮುಂಡೆ ಸೋಮವಾರ ಒಂದು ದಿನದ ಉಪವಾಸ ಸತ್ಯಾಗ್ರ‌ಹ ನಡೆಸುತ್ತಿದ್ದಾರೆ. 

ಮಹಾರಾಷ್ಟ್ರದ 1990ರ ಅವಧಿಯ ಉಪಮುಖ್ಯಮಂತ್ರಿಯ ಪುತ್ರಿ ಪಂಕಜಾ, ರಾಜ್ಯದ ನೈಋತ್ಯ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ಕುರಿತು ಕೂಡ ಆತಂಕ ವ್ಯಕ್ತಪಡಿಸಿದ್ದಾರೆ. 

ಈ ಸಂಬಂಧ ತಾವು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡುವುದಾಗಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. 

ಬಿಜೆಪಿಯ ಪ್ರಾದೇಶಿಕ ಕಾರ್ಯದರ್ಶಿ ಸುರ್ಜಿತ್ ಸಿಂಗ್ ಠಾಕೂರ್ ಅವರು, ರಾಜ್ಯ ಸರ್ಕಾರವನ್ನು ಎಲ್ಲಾ ಯೋಜನೆಳಿಗೆ ತಡೆ ನೀಡುವ ‘ಸ್ಥಗಿತಿ ಸರ್ಕಾರ್‘ ಎಂದು ಕರೆದಿದ್ದಾರೆ. 

ಈ ಸಂದರ್ಭದಲ್ಲಿ ಕೇಂದ್ರದ ರಾಜ್ಯ ಸಚಿವ ರಾವ್ ಸಾಹೇಬ್ ದಾನ್ವೆ, ಮಾಜಿ ಸ್ಪೀಕರ್ ಹರಿಬಾವು ಬಗಾಡೆ, ಮಹಾದೇವ್ ಜಂಕರ್, ಬೀಡ್ ಸಂಸದ ಪ್ರೀತಮ್ ಮುಂಡೆ ಮತ್ತಿತರರು ಉಪಸ್ಥಿತರಿದ್ದರು. 

ಈ ಉಪವಾಸ ಸತ್ಯಾಗ್ರಹದಲ್ಲಿ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ವಿಧಾನಸಭೆಯ ವಿಪಕ್ಷ ನಾಯಕ ಪ್ರವೀಣ್ ದಾರೇಕರ್ ಕೂಡ ಪಾಲ್ಗೊಳ್ಳುವ ನಿರೀಕ್ಷೆಯಿದೆ.