ಹುಕ್ಕೇರಿ 27: ರೈತರಿಗೆ ನೂತನ ಕೃಷಿ ತಂತ್ರಜ್ಞಾನ ಪರಿಚಯಿಸುವ ಒಂದು ದಿನದ ಕಾಯರ್ಾಗಾರ ಜರುಗಿತು. ಹುಕ್ಕೇರಿ ವಿರಕ್ತ ಮಠದ ಶಿವಬಸವ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಇಂಚಗೇರಿಯ ಅಭಿನವ ಮಂಜುನಾಥ ಸ್ವಾಮಿಗಳ ನೇತೃತ್ವದಲ್ಲಿ ಜರುಗಿದ ಕೃಷಿ ಅಭಿಯಾನ ಕಾರ್ಯಕ್ರಮವನ್ನು ತಾಲೂಕಾ ಪಂಚಾಯತ ಅದ್ಯಕ್ಷ ದಸ್ತಗೀರ ಬಸ್ಸಾಪೂರೆ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು.
ಕೃಷಿ ಇಲಾಖೆ ಸಹಾಯಕ ನಿದರ್ೆಶಕ ಮಹಾದೇವ ಪಟಗುಂದಿ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆ ಮೇಲೆ ಪ್ರಜಾಪಿತ ಬ್ರಹ್ಮಕುಮಾರಿ ಕೆ ಶಾಂತಾ, ಜಿಲ್ಲಾ ಪಂಚಾಯತ ಸದಸ್ಯೆ ಅನಸೂಯಾ ಪಾಟೀಲ,ತಾಲೂಕು ಪಂಚಾಯತ ಸದಸ್ಯರಾದ ಬಾಳಗೌಡ ಪಾಟೀಲ, ಬಸವರಾಜ ನಾಯಿಕ, ಎನ್ ಎಸ್ ಪಾಟೀಲ, ಲಿಂಬೆವ್ವಾ ಮಾದರ,ಇಂದುಮತಿ ಮಾಳಗೆ, ಸುಖದೇವ ಗುಡೆದ , ಗ್ರೇಡ 2 ತಹಸಿಲ್ದಾರ ಕೀರಣ ಬೆಳಗಾವಿ ಉಪಸ್ಥಿತರಿದ್ದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕೃಷಿ ಸಹಾಯಕ ನಿದರ್ೆಶಕ ಎಮ್ ಎಸ್ ಪಟಗುಂದಿ ಕೃಷಿ ಇಲಾಖೆ ಮತ್ತು ಕೃಷಿ ಸಂಭಂದಿತ ಇಲಾಖೆಗಳ ಸೌಲಭ್ಯಗಳ ಪರಿಚಯ ಹಾಗೂ ಕೃಷಿಯಲ್ಲಿ ಇತ್ತಿಚಿನ ದಿನಗಳಲ್ಲಿ ಪ್ರಚಲಿತಕ್ಕೆ ಬಂದ ಸಾವಯವ ಕೃಷಿ, ಶೂನ್ಯ ಬಂಡವಾಳ ಕೃಷಿ, ಕಬ್ಬು ಬೆಳೆಯ ವಿವಿಧ ತಳಿಗಳ ಪರಿಚಯ, ರೈತ ಉತ್ಪಾದನಾ ಗುಂಪು ರಚನೆ ಇವುಗಳ ತಂತ್ರಜ್ಞಾನ ಕುರಿತು ಕೃಷಿ ವಿಜ್ಞಾನಿಗಳಿಂದ ವಿಚಾರ ಗೋಷ್ಟಿ ಹಾಗೂ ಕೃಷಿಯಲ್ಲಿ ಹೊಸತನವನ್ನು ಅಳವಡಿಸಿಕೊಂಡು ಕಾಲ ಕಾಲಕ್ಕೆ ಹವಾಗುಣ ಅನುಗುಣವಾಗಿ ಕೃಷಿ ಬೇಸಾಯ ಮಾಡಲು ಹುಕ್ಕೇರಿ ತಾಲೂಕಿನ ರೈತರಿಗೆ ಮಾಹಿತಿ ನೀಡುವ ಉದ್ದೇಶದಿಂದ ಕೃಷಿ ಅಭಿಯಾನ ಕಾಯರ್ಾಗಾರವನ್ನು ಹಮ್ಮಿಕೋಳ್ಳಲಾಗಿದೆ ಎಂದರು ಇದೆ ಸಂದರ್ಭದಲ್ಲಿ ರಾಸುಗಳು ಮತ್ತು ಕೃಷಿ ಉಪಕರಣಗಳ ಪ್ರದರ್ಶನ ಹಾಗೂ ಅವುಗಳ ಉಪಯೋಗಿಸುವ ಕುರಿತು ಮಾಹಿತಿ ನೀಡಲಾಯಿತು. ಕಾಯರ್ಾಗಾರದಲ್ಲಿ ಹುಕ್ಕೇರಿ ತಾಲೂಕಿನ ವಿವಿಧ ಗ್ರಾಮಗಳ ರೈತ ಮಹಿಳೆಯರು, ರೈತರು ಉಪಸ್ಥಿತರಿದ್ದರು.