ಶಾಶ್ವತವಾಗಿ ಭತ್ತ ಜೋಳ ಖರೀದಿಗೆ ಸರ್ಕಾರಕ್ಕೆ ರೈತರು ಒತ್ತಾಯ
ಕಂಪ್ಲಿ 03: ರೈತರು ಬೆಳದ ಬೆಳೆಗೆ ಸರಿಯಾಗಿ ಬೆಂಬಲ ಬೆಲೆ ಸಿಕ್ಕರೆ ಮಾತ್ರ ಅವರ ಶ್ರಮ ಸಾರ್ಥಕವಾಗುತ್ತದೆ ಶಾಶ್ವತವಾಗಿ ಖರೀದಿ ಕೇಂದ್ರ ತೆರೆಯಬೇಕು ಎಂದು ಎಮೀಗನೂರು ಗ್ರಾ.ಪಂ ಅಧ್ಯಕ್ಷೆ ವಿ.ಶಾರದ ಹೇಳಿದರು ತಾಲೂಕಿನ ಎಮೀಗನೂರು ಗ್ರಾಮದ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಜೋಳ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ ರೈತರು ಅನುಕೂಲಕ್ಕಾಗಿ ಭತ್ತ ಜೋಳ ಶಾಶ್ವತವಾಗಿ ಖರೀದಿ ಕೇಂದ್ರವಾಗಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು ಆಹಾರ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಜಿಲ್ಲಾ ಕೇಂದ್ರ ವ್ಯವಸ್ಥಾಪಕ ಶಿವ ಬಸವರಾಜ ಮಾತನಾಡಿ ಜೋಳವನ್ನು ಖರೀದಿ ಕೇಂದ್ರಗಳ ಮೂಲಕ ಮಾರಾಟ ಮಾಡಿ ಬೆಂಬಲ ಬೆಲೆ ಪಡೆಯಿರಿ ರೈತರು ಖುದ್ದಾಗಿ ಕೇಂದ್ರಕ್ಕೆ ಭೇಟಿ ನೀಡಿ ಕಡ್ಡಾಯವಾಗಿ ನೋಂದಣಿ ಮಾಡಿಸಿ ಮಧ್ಯವರ್ತಿಗಳ ಜೋಳವನ್ನು ಖರೀದಿ ಕೇಂದ್ರಕೇ ತಂದರೆ ಅಂತವರ ವಿರುದ್ದ್ ಕಾನೂನು ಕ್ರಮ ಜರುಗಿಸಲಾಗುವುದು ಎಪ್.ಎ.ಕ್ಯೊ.ಜೋಳಕ್ಕೆ 1ಕ್ವಿಂಟಾಲ್.ಗೆ 3371ರೂ ಇರುತ್ತದೆ ರೈತರು ಬ್ಯಾಂಕ್ ಖಾತೆಗೆ ಹಣ ಸಂದಾಯವಾಗಲಿದೆ ಉತ್ತಮವಾದ ಜೋಳ ತೆಗೆದುಕೊಂಡು ಬರಬೇಕು ಸಲಹೆ ನೀಡಿದರುಈಗಾಗಲೇ ಬಳ್ಳಾರಿ ಜಿಲ್ಲೆಯ ಎಮೀಗನೂರು .ಕಂಪ್ಲಿ.ಶಿರುಗುಪ್ಪ ಅಚ್ಚುಳಿ ಕರೂರು ಬಳ್ಳಾರಿ ಸಂಡೂರು ಜೋಳ ಖರೀದಿ ಕ್ರೇಂದ್ರ ತರೆಯಲಾಗಿದೆ ಸೊಸೈಟಿಗಳಿಗೆ ಜೋಳ ಖರೀದಿ ವಹಿಸಲಾಗಿದೆ ಎಂದರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬೂದಗುಂಪಿ ಖಾಸಿಂಸಾಬ್ ಮುಖ್ಯ ಕಾರ್ಯನಿರ್ವಾಹಕ ಇ.ಜಡೇಶ ಶಿರೇಸ್ತೆದ್ದಾರ ರವೀಂದ್ರ ರಾಥೋಡ್ ಆಹಾರ ನೀರಿಕ್ಷಕರು ವಿ.ವಿರುಪಾಕ್ಷೀಗೌಡರು ರೈತರಾದ ಬಿ.ಸದಾಶಿವಪ್ಪ ಕಾಶೀಂಸಾಬ್ ಖಗಲ್ ಖಾಸೀಮಸಾಬ್ ರಾಘವೇೆಂದ್ರರೆಡ್ಡಿ ಸೂಗುರ್ಪ ಮಹೇಶಗೌಡ ಸೇರಿ ಅನೇಕ ರೈತರಿದ್ದರು ಮಾ001ಎಮೀಗನೂರು ಗ್ರಾಮದ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಜೋಳ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು