ಜಾನುವಾರುಗಳ ಆರೈಕೆ ಬಗ್ಗೆ ರೈತರು ನಿರ್ಲಕ್ಷ್ಯ ತೋರಬಾರದು : ರಾಜೇಂದ್ರ
ಶಿಗ್ಗಾವಿ: ಜಾನುವಾರುಗಳ ಯೋಗಕ್ಷೇಮ ಕಾಪಾಡುವುದು ಮಾನವೀಯ ಮೌಲ್ಯಗಳಲ್ಲಿ ಒಂದಾಗಿದ್ದು, ಜಾನುವಾರುಗಳ ಆರೈಕೆ ಬಗ್ಗೆ ರೈತರು ನಿರ್ಲಕ್ಷ್ಯ ತೋರಬಾರದು ಎಂದು ಪಶು ವೈದ್ಯ ಡಾ. ರಾಜೇಂದ್ರ ಅರಳೇಶ್ವರ ಹೇಳಿದರು. ತಾಲೂಕಿನ ಚಿಕ್ಕಮಲ್ಲೂರ ಗ್ರಾಮದಲ್ಲಿ, ಜಿಲ್ಲಾ ಪಂಚಾಯತ ಹಾವೇರಿ, ಸತ್ಯ ಸಾಯಿ ಸೇವಾ ಸಮಿತಿ ಶಿಗ್ಗಾವಿ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಪಶು ಆಸ್ಪತ್ರೆ ಶಿಗ್ಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಭಗವಾನ ಸತ್ಯ ಸಾಯಿಬಾಬಾರವರ ಜನ್ಮ ಶತಮಾನೋತ್ಸವ ವರ್ಷ 2025 ಮತ್ತು ಸತ್ಯಸಾಯಿ ಸೇವಾ ಸಂಸ್ಥೆ, ಸೇವಾ ವರ್ಷ ಅಂಗವಾಗಿ ಸೋಮವಾರ ಚಿಕ್ಕಮಲ್ಲೂರ ಗ್ರಾಮದ ಬೀರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದಜಾನುವಾರುಗಳ ಆರೋಗ್ಯ ತಪಾಸಣೆ ಮತ್ತು ಬರಡು ರಾಸುಗಳ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿ. ಗ್ರಾಮೀಣ ಪ್ರದೇಶದ ರೈತರ ಜೀವನಾಡಿಯಾಗಿರುವ ಜಾನುವಾರುಗಳಿಗಾಗಿ ಏರಿ್ಡಸುವ ಪಶು ಆರೋಗ್ಯ ತಪಾಸಣಾ ಶಿಬಿರಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಜಾನುವಾರು ಅಧಿಕಾರಿ ಸಿಡಿ ಯತ್ನಳ್ಳಿ, ರಾಜು ಸಾವಕ್ಕನವರ, ಗ್ರಾಮ ಪಂಚಾಯತಿ ಸದಸ್ಯರಾದ ಸಹದೇವಪ್ಪ ಗಂಜೀಗಟ್ಟಿ, ಪ್ರಕಾಶ ಸಾವಕ್ಕನವರ, ಅಶೋಕ ಕಾಳೆ, ಪಕ್ಕಿರಗೌಡ ಪಾಟೀಲ, ಬಿ ಡಿ ಪಾಟೀಲ, ಮಹಾನಿಂಗಪ್ಪ ಸಾವಕ್ಕನವರ, ವಿರೂಪಾಕ್ಷ ಸಂಜೀವಪ್ಪನವರ, ಸುರೇಶ ಹರಿಜನ, ನೀಲಕಂಠಪ್ಪ ಕಂಕಣವಾಡ ಸೇರಿದಂತೆ ಸತ್ಯಸಾಯಿ ಸೇವಾ ಸಂಸ್ಥೆ ಸದಸ್ಯರು, ಗ್ರಾಮದ ಪ್ರಮುಖರು ಇದ್ದರು.