ಲೋಕದರ್ಶನ ವರದಿ
ರಾಯಬಾಗ 24: ರೈತರಿಗೆ ಅತ್ಯುತ್ತಮ ಮಾಹಿತಿ ನೀಡುವ ಕೃಷಿ ಕೇಂದ್ರವು, ಇಂದು ಹೆಚ್ಚು ಹೆಚ್ಚು ಸಾವಯುವ ಕೃಷಿ ಬಗ್ಗೆ ಕೃಷಿ ಇಲಾಖೆ ಪ್ರಚಾರ ಕೈಗೊಂಡು, ದೇಶದಲ್ಲಿನ ರೈತರಿಗೆ ಸಾವಯುವ ಕೃಷಿ ಮಹತ್ವವನ್ನುಮುಟ್ಟಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹಾರೂಗೇರಿ ಶರಣ ವಿಚಾರ ವಾಹಿನಿಯ ಅಧ್ಯಕ್ಷ ಆಯ್.ಆರ್.ಮಠಪತಿ ಹೇಳಿದರು.
ರವಿವಾರ ಪಟ್ಟಣದ ಜಗಜೀವನರಾಂ ಭವನದಲ್ಲಿ ತಾಲೂಕಾ ಸಾವಯುವ ಕೃಷಿ ಪರಿವಾರದವರಿಂದ ಹಮ್ಮಿಕೊಂಡಿದ್ದ ಸಹಾಯಕ ಕೃಷಿ ನಿದರ್ೇಶಕ ಎಮ್.ಸಿ.ಮನ್ನಿಕೇರಿ ಅವರ ಷಷ್ಠ್ಯಬ್ದಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೈತರು ಹೆಚ್ಚು ಉತ್ಪನ್ನ ಪಡೆಯಲು ರಸಾಯನಿಕ ಬಳಸುತ್ತಿರುವುದರಿಂದ ಭೂಮಿ ವಿಷಕಾರವಾಗುತ್ತಿದ್ದು, ಮನುಷ್ಯರು ನಿತ್ಯ ವಿಷ ಸೇವಿಸುವಂತಾಗಿದೆ. ಭೂಮಿ ಮತ್ತು ಮನುಷ್ಯ ಉಳಿಯಬೇಕಾದರೆ ರೈತರು ಆರೋಗ್ಯಯುತ ಸಾವಯುವ ಕೃಷಿಯತ್ತ ಗಮನ ಹರಿಸಬೇಕೆಂದರು. ತೋಟದಲ್ಲಿನ ಕಸ ತೆಗೆಯುವಂತೆ, ಮನುಷ್ಯನು ತನ್ನ ಶರೀರದಲ್ಲಿನ ಕೆಟ್ಟ ಗುಣಗಳನ್ನು ತೆಗೆದು ಹಾಕಿ, ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡು ಉತ್ತಮ ಜೀವನ ನಡೆಸಬೇಕೆಂದರು.
ಸಾನಿಧ್ಯವನ್ನು ವಹಿಸಿದ್ದ ಬಾಗಲಕೋಟೆ ಜಿಲ್ಲೆಯ ಶಿರೂರದ ವಿಜಯ ಮಹಾಂತ ಶಿವಯೋಗ ಹಾಗೂ ನಿಸರ್ಗ ಚಿಕಿತ್ಸಾ ಕೇಂದ್ರದ ಡಾ.ಬಸಲಿಂಗ ಸ್ವಾಮೀಜಿಯವರು ಮಾತನಾಡಿ, ಬಿತ್ತಿದನ್ನು ಬೆಳೆಯುವ ಹಾಗೇ ಸಮಾಜಕ್ಕೆ ಒಳ್ಳೆ ಸೇವೆ ಮಾಡಿದರೆ, ಸಮಾಜವು ಕೂಡ ನಮಗೆ ಒಳ್ಳೆ ಉಡುಗರೆ ನೀಡುತ್ತದೆ. ಅತ್ಯಂತ ಶ್ರೇಷ್ಠವಾದ ಈ ಮಾನವ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಕು. ರೈತರು ಅತ್ಯಂತ ಸುಖಿ ಜೀವಿಗಳು, ಸಿರಿ, ಸಮೃದ್ಧಿ, ಸಂತೃಪ್ತಿ ಇರುವುದು ಕೇವಲ ರೈತರ ಮನೆಯಲ್ಲಿ ಮಾತ್ರ ಎಂದು ಹೇಳಿದರು. ಬೈಲಹೊಂಗಲದ ನಿವೃತ್ತ ಸಹಾಯಕ ಕೃಷಿ ನಿದರ್ೇಶಕ ಮಹಾಬಳೇಶ್ವರ ಹೊಸಮನಿ ಸಾವಯುವ ಕೃಷಿ ಬಗ್ಗೆ ವಿಸ್ತಾರವಾಗಿ ತಿಳಿಸಿದರು. ಸಿರಿ ಧಾನ್ಯಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು.ಕಾರ್ಯಕ್ರಮದಲ್ಲಿ ಭಾಗವಹಿಸಿದ ರೈತರು ಮತ್ತು ಅತಿಥಿಗಳು ಸಾವಯುವ ಸಿರಿ ಧಾನ್ಯಗಳಿಂದ ತಯಾರಿಸಿದ ಅಡುಗೆಯ ರುಚಿಯನ್ನು ಸವಿದರು. ನ.30 ರಂದು ನಿವೃತ್ತ ಹೊಂದಲಿರುವ ಸಹಾಯಕ ಕೃಷಿ ನಿದರ್ೇಶಕ ಎಮ್.ಸಿ.ಮನ್ನಿಕೇರಿ ದಂಪತಿಗಳನ್ನು ಸತ್ಕರಿಸಲಾಯಿತು. ಎಸ್.ಎಸ್.ಪಾಟೀಲ, ಅಜರ್ುನ ನಾಯಿಕವಾಡಿ, ಸಿ.ಆರ್.ಮನ್ನಿಕೇರಿ, ಸದಾನಂದ ಹಳಿಂಗಳಿ, ಶೈಲೇಂದ್ರ ಪಾಟೀಲ, ಬಸವರಾಜತಿಗಡಿ ಹಾಗೂ ರೈತರು, ಕೃಷಿ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
ಸಂಗಮೇಶ ಹಿರೇಹಾಳ ಸ್ವಾಗತಿಸಿದರು, ಶಿವಕುಮಾರ ಕುಂಬಾರ ನಿರೂಪಿಸಿ, ವಂದಿಸಿದರು.