ರೈತರು ಸ್ವಾವಲಂಬಿಗಳಾಗಬೇಕು: ಶಾಸಕ ಅಮೃತ ದೇಸಾಯಿ

ಧಾರವಾಡ .26: ರಾಜ್ಯ ಸಕರ್ಾರವು ಕೃಷಿಗೆ ಉತ್ತೇಜನ ಹಾಗೂ ಕೃಷಿಕರ ಸಂರಕ್ಷಣೆಗಾಗಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಕೃಷಿ ಇಲಾಖೆ ಸೇರಿದಂತೆ ವಿವಿಧ ಸಕರ್ಾರಿ ಇಲಾಖೆಗಳಿಂದ  ರೈತರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ದೊರಕಿಸಿಕೊಡಲು ಬದ್ದರಾಗಿರುವುದಾಗಿ ಶಾಸಕ ಅಮೃತ ದೇಸಾಯಿ ಹೇಳಿದರು. 

ಅವರು ಇಂದು ಬೆಳಿಗ್ಗೆ, ಧಾರವಾಡ ತಾಲೂಕಿನ ಮುಳಮುತ್ತಲ ಹಾಗೂ ತಡಕೋಡ ಗ್ರಾಮಕ್ಕೆ ಭೇಟಿ ನೀಡಿ, ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಕೃಷಿ ಇಲಾಖೆಯಿಂದ ನೀಡುವ 5 ಲಕ್ಷ ರೂ. ಗಳ ಪರಿಹಾರಧನದ ಆದೇಶ ಪ್ರತಿ ವಿತರಿಸಿ, ಮಾತನಾಡಿದರು. 

ಎಲ್ಲರಿಗೂ ಸಮಸ್ಯೆಗಳು ಬರುವುದು ಸಹಜ. ವಿಶೇಷವಾಗಿ ರೈತರು ಅತಿವೃಷ್ಟಿ, ಅನಾವೃಷ್ಟಿ, ಕೃಷಿಸಾಲ ಮತ್ತು ಸರಿಯಾದ ಸಮಯಕ್ಕೆ ಪರಿಹಾರ ದೊರೆಯದೇ ಸಂಕಷ್ಟಕ್ಕೆ ಇಡಾಗುತ್ತಾರೆ. ಆದರೆ ಇದಕ್ಕೆ ಆತ್ಮಹತ್ಯೆ ಪರಿಹಾರವಲ್ಲ. ಕೃಷಿಕರ ಸಮಸ್ಯೆಗಳ ನಿವಾರಣೆಗಾಗಿ ಕೃಷಿ ಇಲಾಖೆಯ ಯೋಜನೆಗಳನ್ನು ಬಳಸಿಕೊಂಡು ರೈತರು ಸ್ವಾವಲಂಬಿಗಳಾಗಬೇಕೆಂದು ಹೇಳಿದರು.

ಸಹಾಯಕ ಕೃಷಿ ನಿದರ್ೇಶಕ ಸಿ.ಜಿ.ಮೇತ್ರಿ ಮಾತನಾಡಿ, ಮೃತ ರೈತರ ಪತ್ನಿಗೆ ಮಾಸಿಕ 2000 ರೂ. ಮಾಶಾಸನ ನೀಡಲಾಗುತ್ತದೆ. ಮತ್ತು ಮೃತ ರೈತನ ಮಕ್ಕಳಿಗೆ ಪದವಿ ಶಿಕ್ಷಣದವರೆಗೂ ಉಚಿತ ಶಿಕ್ಷಣ  ಮತ್ತು ಮೃತ ರೈತನ ಕುಟುಂಬ ಸದಸ್ಯರಿಗೆ ಆರೋಗ್ಯ ಸಂಜೀವಿನಿ ಯೋಜನೆಯಡಿ ಉಚಿತವಾಗಿ ವೈದ್ಯಕೀಯ ತಪಾಸಣೆ, ಚಿಕಿತ್ಸೆಯನ್ನು ಸಕರ್ಾರದಿಂದ ನೀಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಅಮೃತ ದೇಸಾಯಿ ಅವರು ಮುಳಮುತ್ತಲ ಗ್ರಾಮದ, ಆತ್ಮಹತ್ಯೆ ಮಾಡಿಕೊಂಡ ಮೃತ ರೈತ ಬಸಯ್ಯ ರುದ್ರಯ್ಯ ಹಳ್ಳಿಗೇರಿಮಠ ಇವರ ಪತ್ನಿ ಪಾರ್ವತಿ ಬಸಯ್ಯ ಹಳ್ಳಿಗೇರಿಮಠ ಅವರಿಗೆ ಕೃಷಿ ಇಲಾಖೆಯಿಂದ ಮಂಜೂರಾದ 5 ಲಕ್ಷ ರೂ.ಗಳ ಪರಿಹಾರ ಧನದ ಮಂಜೂರಾತಿ ಆದೇಶ ಪ್ರತಿಯನ್ನು ವಿತರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಪ್ರಕಾಶ ಮಣಿಗೇರಿ, ಮಲ್ಲಯ್ಯ ಹಿರೇಮಠ, ಸುರೇಶ ಜಾದವ, ಸೋಮಯ್ಯ ಪೂಜಾರ ಹಾಗೂ ಸಹಾಯಕ ಕೃಷಿ ನಿದರ್ೇಶಕ ಸಿ.ಜಿ.ಮೇತ್ರಿ ಉಪಸ್ಥಿತರಿದ್ದರು. 

ನಂತರ ಶಾಸಕರು ತಡಕೋಡ ಗ್ರಾಮದ ಮೃತ ರೈತ ಮಲ್ಲನಗೌಡ ಸಣ್ಣಲಿಂಗನಗೌಡ ಪಾಟೀಲ ಇವರ ಮನೆಗೆ ಭೇಟಿ ನೀಡಿ, ಮೃತ ರೈತನ ಪತ್ನಿ ರೂಪ ಮಲ್ಲನಗೌಡ ಪಾಟೀಲ ಅವರಿಗೆ ಕೃಷಿ ಇಲಾಖೆಯಿಂದ ಮಂಜೂರಾದ 5 ಲಕ್ಷ ರೂ.ಗಳ ಪರಿಹಾರ ಧನದ ಮಂಜೂರಾತಿ ಆದೇಶ ಪ್ರತಿಯನ್ನು ನೀಡಿದರು. ಗ್ರಾಮ ಪಂಚಾಯತ ಸದಸ್ಯರಾದ ಶಂಕ್ರಪ್ಪ ಸೊಪಿನ, ವೀರಣ್ಣ ಫಕೀರಪ್ಪನವರ, ಜಗದೀಶ ಯರಗಂಬಳಿಮಠ, ರಾಯಪ್ಪ ತಾವರೆನವರ ಹಾಗೂ ಸಹಾಯಕ ಕೃಷಿ ನಿದರ್ೇಶಕ ಸಿ.ಜಿ.ಮೇತ್ರಿ ಪಾಲ್ಗೋಂಡಿದ್ದರು. 

ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ಅಧಿಕಾರಿಗಳಾದ ಕಾಂಬ್ಳೇ, ಮಾಸ್ತಿ, ಶಿವಕುಮಾರ ಹಾಗೂ ರೈತ ಮುಖಂಡರು, ಗ್ರಾಮಸ್ಥರು ಭಾಗವಹಿಸಿದ್ದರು.