ರೈತರು ಕೃಷಿಯಲ್ಲಿ ವಿವಿಧ ಬಗೆಯ ತಂತ್ರಜ್ಞಾನ ಅಳವಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು
ರಾಯಬಾಗ 24: ರೈತರು ವಿವಿಧ ಬಗೆಯ ತಂತ್ರಜ್ಞಾನ ಅಳವಡಿಸಿಕೊಂಡು ಕೃಷಿ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು. ತಾಲೂಕಿನ ಭಿರಡಿ ಗ್ರಾಮದ ಮಹಾದೇವ ದೇವಸ್ಥಾನ ಸಭಾಭವನದಲಿ ವೀರಭದ್ರೇಶ್ವರ ಪರ್ಟಿಲೈಸರ್ ವತಿಯಿಂದ ಆಯೋಜಿಸಿದ್ದ ಜೈ ಕಿಸಾನ್ ದಿವಸ (ರೈತರ ದಿನಾಚರಣೆ)ಯನ್ನು ಭೂಮಿ ಪೂಜೆ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರೈತರಾದವರು ತಮ್ಮ ಭೂಮಿಯನ್ನು ಫಲವತ್ತತೆ ಮಾಡಿಕೊಂಡು ಸಾವಯುವಕ್ಕೆ ಒತ್ತು ನೀಡಬೇಕು. ಕೃಷಿ ವಿಜ್ಞಾನಿಗಳ ಸಲಹೆ ಪಡೆದುಕೊಂಡು ಉತ್ತಮ ಲಾಭ ಮಾಡಿಕೊಳ್ಳಿ ಎಂದರು.ನಂತರ ಕೆ ಎಲ್ ಉಮಾಶಂಕರ ಉಪನ್ಯಾಸ ನೀಡಿ, ದೇಶದಲ್ಲಿ ಶೇ. 70 ರಷ್ಟು ಜನರು ಕೃಷಿಗೆ ಒತ್ತುಕೊಟ್ಟಿದ್ದಾರೆ. ಕೋಟಿ ರೂಪಾಯಿ ಇದ್ದರೆ ಏನೂ ತಿನ್ನಲು ಸಾಧ್ಯವಿಲ್ಲ. ಹಾಗಾಗಿ ಆಹಾರ ಬಹಳ ಮುಖ್ಯ. ರೈತರಿಗೆ ಪ್ರೋತ್ಸಾಹ ನೀಡುವ ಕೆಲಸ ನಮ್ಮಿಂದಾಗಬೇಕು ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಮಂಗಳೂರು ಕೆಮಿಕಲ್ಸ್ ಪರ್ಟಿಲೈಸರ್ಸ ಅವರು ರೈತ ಮಕ್ಕಳಿಗೆ ಸ್ಕೂಲ್ ಬ್ಯಾಗ್, ಶೌಚಾಲಯ, ತಡೆಗೋಡೆ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ತೆಗೆದುಕೊಳ್ಳಲು ಸುಮಾರು 10 ಲಕ್ಷರೂ ದೇಣಿಗೆ ನೀಡಿದ್ದಾರೆ. ಕೇವಲ ವ್ಯಾಪಾರ ಅಲ್ಲದೇ ಶೈಕ್ಷಣಿಕ ಕ್ರಾಂತಿ ಮೂಡಿಸಿದ್ದಾರೆ ಎಂದರು.ಈ ವೇಳೆ ಜಮೀನಿನಲ್ಲಿ ಹೆಚ್ಚು ಕಬ್ಬು ಬೆಳೆದ ರೈತರಿಗೆ ಗಣ್ಯರಿಂದ ಸನ್ಮಾನಿಸಿ ಗೌರವಿಸಲಾಯಿತು.
ಮಹಾದೇವ ಬೋರಗಾವೆ ಡಾ. ಸುನೀಲಕುಮಾರ ನೂಲಿ, ಸ್ವಯಂ ಚೌಧರಿ, ಸತೀಶ್ ಆರ್, ತಾತ್ಯಾಸಾಹೇಬ್ ಕಾಟೆ, ಮಲ್ಲಪ್ಪ ಮೈಶಾಳೆ, ಗಣೇಶ ಹೆಗಡೆ, ಅಣ್ಣಾಸಾಹೇಬ್ ಖೆಮಲಾಪುರೆ, ಸದಾಶಿವ ಘೋರೆ್ಡ, ಮುರುಗೆಪ್ಪ ನಿಡವಣಿ, ಸಂದು ನಿಡವಣಿ, ರಾಮು ಲಂಗೋಟೆ, ಮಲ್ಲಪ್ಪ ಕಮತೆ, ಸುಭಾಷ ಕೋರೆ, ಶಂಕರ ಶಿರಗಾಂವೆ, ಗಂಗಪ್ಪ ಮೈಶಾಳೆ ಸೇರಿದಂತೆ ಅನೇಕರು ರೈತರು ಉಪಸ್ಥಿತರಿದ್ದರು.
24 ರಾಯಬಾಗ 3 ಪೋಟೋ ಶಿರ್ಷಿಕೆ ; ಭಿರಡಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಪರ್ಟಿಲೈಸರ್ ವತಿಯಿಂದ ಸೊಮವಾರ ಆಯೋಜಿಸಿದ್ದ ಜೈ ಕಿಸಾನ್ ದಿವಸ (ರೈತರ ದಿನಾಚರಣೆ)ಯನ್ನು ಭೂಮಿ ಪೂಜೆ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿರುವ ಗಣ್ಯರು.