ಲೋಕದರ್ಶನ ವರದಿ
ಶಿಗ್ಗಾವಿ 19ಃ ರೈತರು ಸತ್ಯವನ್ನು ಹುಡುಕುತ್ತಿದ್ದಾರೆ ಆ ನಿಟ್ಟಿನಲ್ಲಿ ರೈತ ಸಂಘಟನೆಗಳು ಗೌರಯುತವಾಗಿ ಸಂಘಟನೆಯನ್ನು ಮಾಡಿ ರೈತರಲ್ಲಿ ಜಾಗೃತಿಯನ್ನು ಮೂಡಿಸುವಂತೆ ಕಾರ್ಯಗಳನ್ನು ಮಾಡಬೇಕು ಎಂದು ಕನರ್ಾಟಕ ರಾಜ್ಯ ರೈತ ಸಂಘದ ಹಾವೇರಿ ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ತಾಲೂಕಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರು ಕಛೇರಿಗಳಿಗೆ ಅಲೆಯುವದನ್ನು ನಿಲ್ಲಿಸಿಬೇಕು, ಅಧಿಕಾರಿಗಳನ್ನು ಎಚ್ಚರಿಸುವ ಮೂಲಕ ಅಧಿಕಾರಿಗಳೊಂದಿಗೆ ಉತ್ತಮ ಭಾಂಧವ್ಯದಿಂದ ರೈತರ ಸಮಸ್ಯಗಳನ್ನು ಬಗೆಹರಿಸಬೇಕು ಮತ್ತು ಸಕರ್ಾರ ಜಿಲ್ಲೆಗೆ ಕೇಳಿದಂತೆ ಬಾರ್ ಗಳನ್ನು ನೀಡುತ್ತಿದೆ ಆದರೆ ಖರೀದಿ ಕೇಂದ್ರಗಳ ಸ್ಥಾಪನೆಗೆ ಹಿಂದೆಟು ಹಾಕುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶಿಗ್ಗಾವಿ ತಾಲೂಕಾ ನೂತನ ಅಧ್ಯಕ್ಷ ಬಸವಲಿಂಗಪ್ಪ ಬಸವಣ್ಯೆಪ್ಪ ನರಗುಂದ ನಿಕಟ ಪೂರ್ವ ಅಧ್ಯಕ್ಷ ಶಂಭುಲಿಂಗಪ್ಪ ಕುರಗೋಡಿ, ಮುಖಂಡರಾದ ಸುರೇಶ ಮಾಕಾಪೂರ, ದೇವೆಂದ್ರಪ್ಪ ಹಳವಳ್ಳಿ, ಮಾಲತೇಶ ಕೋರಿ, ರೇವಣಶಿದ್ದಪ್ಪ ಕುರಗೋಡಿ, ಶಂಭು ಕತ್ತಿ, ಬಸವರಾಜ ವಾಲ್ಮೀಕಿ, ಬಸಲಿಂಗಪ್ಪ ಮಲ್ಲೂರ, ರಮೇಶ ಧರ್ಮಣ್ಣವರ, ಎಮ್ ಜಿ ಕಂಬಾಳಿಮಠ, ಚನ್ನಬಸಣ್ಣ ಮುದಕಣ್ಣವರ, ಭರಮಜ್ಜ ದೊಡ್ಡಮನಿ, ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.