ನಡುರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ರೈತರು

ಬೆಳಗಾವಿ : ತಮ್ಮ ಕೆಲವು ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಾಗುತ್ತಿದ್ದ ಮಾರ್ಗ ಮಧ್ಯದಲ್ಲಿ ಕುಳಿತು ರೈತರು ಪ್ರತಿಭಟನೆ ನಡೆಸಲು ಮುಂದಾದ ಘಟನೆ ಇಂದು ನಗರದಲ್ಲಿ ನಡೆಯಿತು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಗರದ ಸಕರ್ಿಟ್ ಹೌಸಕ್ಕೆ ಆಗಮಿಸಿರುವ ಮಾಹಿತಿ ತಿಳಿದ ಹಲವಾರು ರೈತರು ಮುಖ್ಯಮಂತ್ರಿಯವರನ್ನು ಬೇಟ್ಟಿಯಾಗಿ ತಮ್ಮ ಬೇಡಿಕೆಗಳನ್ನು ಅವರ ಮುಂದೆ ಹೇಳಿಕೊಳ್ಳುವ ನಿಟ್ಟಿನಲ್ಲಿ ಮನವಿಯೊಂದನ್ನು ನೀಡಲು ಮುಂದಾಗಿದ್ದರು. ಆದರೆ ಅವರಿಗೆ ಮನವಿ ನೀಡಲು ಅವಕಾಶ ದೊರೆಯದ ಹಿನ್ನೆಲೆಯಲ್ಲಿ ಸಕರ್ಿಟ್ ಹೌಸ್ ಮುಂದಿನ ಗೇಟ ಬಳಿಯಲ್ಲಿ ರಸ್ತೆ ಮದ್ಯದಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. 

ಬಳಿಕ ಸ್ಥಳದಲ್ಲಿದ್ದ ಪೊಲೀಸ ಅಧಿಕಾರಿಗಳು ರೈತರನ್ನು ಸಮಧಾನಪಡಿಸುವ ಮೂಲಕ ಅವರನ್ನು ಪ್ರತಿಭಟನೆ ಕೈಬಿಡುವಂತೆ ಕೋರಿದರು ಎನ್ನಲಾಗಿದೆ. ಆದರೆ ಪೊಲೀಸರ ಮಾತನ್ನು ಕೇಳದ ರೈತರು ಪ್ರತಿಭಟನೆಯನ್ನು ಕೆಲಹೊತ್ತು ಮುಂದೆವರೆಸಿದ್ದರು ಎನ್ನಲಾಗಿದೆ. ಕೊನೆಯಲ್ಲಿ ಸಕರ್ಿಟ್ ಹೌಸನಲ್ಲಿ ಕೆಲವು ರೈತ ಮುಖಂಡರಿಗೆ ಮಾತ್ರ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬೇಟಿ ಮಾಡಿ ಮನವಿ ನೀಡಲು ಅವಕಾಶ ನೀಡಲಾಯಿತು.