ಕಬ್ಬು ಬೆಳೆಗೆ ನ್ಯಾಯುಯತ ಬೆಲೆ ನೀಡುವಂತೆ ಒತ್ತಾಯಿಸಿ ರೈತರ ಪ್ರತಿಭಟನೆ

ಲೋಕದರ್ಶನವರದಿ

ಮುಧೋಳ: ಜಿಲ್ಲೆಯ ಸಕ್ಕರೆಕಾಖರ್ಾನೆ ಮಾಲೀಕರು 2018-19ರ ಬಾಕಿ ನೀಡಿ ಈ ವರ್ಷದದರ ನಿಗದಿ ಮಾಡಬೇಕು. ಮಂಗಳವಾರದೊಳಗೆ ಸಕರ್ಾರ ಮಧ್ಯಸ್ತಿಕೆವಹಿಸಿ ಸಮಸ್ಯೆ ಸರಿಪಡಿಸದಿದ್ದರೆ ನಾಳೆಯಿಂದ ಎಲ್ಲ ರೈತರು ಕಬ್ಬುಕಟಾವು ಬಂದ್ ಮಾಡಿ ಪ್ರತಿಭಟನೆಗೆ ಇಳಿಯಲಿದ್ದಾರೆ ಎಂದು ಕಬ್ಬು ಬೆಳೆಗಾರರ ಮುಖಂಡರಾದಸುಭಾಷ ಶಿರಬೂರ, ವಿಶ್ವನಾಥ ಉದಗಟ್ಟಿ ಎಚ್ಚರಿಕೆ ನೀಡಿದರು.

      ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕಬ್ಬು ಬೆಳೆಗಾರರು ನಡೆಸಿದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಸಕ್ಕರೆ ಕಾಖರ್ಾನೆಗಳು ಆರಂಭಗೊಂಡು ತಿಂಗಳು ಗತಿಸಿದರೂ ದರ ನಿಗದಿಯಲ್ಲಿ ಸ್ಪಷ್ಟ ನಿಲುವು ತಾಳುತ್ತಿಲ್ಲ. ವರ್ಷವಿಡೀ ದುಡಿದು ಬೆಳೆಸಿದ ಬೆಳೆಗೆ ನ್ಯಾಯುಯುತ ಬೆಲೆ ಪಡೆಯುವ ಸಲುವಾಗಿ ಮಾಡುವ ಹೋರಾಟಕ್ಕೆ ಎಲ್ಲರೂ ಒಗ್ಗಟ್ಟಾಗಿ ಬೆಂಬಲ ನೀಡುವ ಅವಶ್ಯಕತೆ ಇದೆ ಎಂದು ಹೇಳಿದರು.

ಕಾಖರ್ಾನೆಗಳ ಮಾಲೀಕರು2018-19 ಸಾಲಿನಲ್ಲಿ ಎಪ್ಆರ್ಪಿ ದರ ನೀಡುವುದಾಗಿ ಹೇಳಿ ಮಾತು ತಪ್ಪಿವೆ.  ತಮ್ಮ ಮನಬಂದಂತೆ ಪ್ರತಿಟನ್ಗೆ 650 ರಿಂದ 730 ರವರೆಗೆ ಕಟಾವು ಸಾಗಾಣಿಕೆದರ ವಜಾಗೊಳಿಸಿ, ಕಬ್ಬು ಕಳುಹಿಸಿದ ಮೂರ್ನಾಲ್ಕು ತಿಂಗಳ ನಂತರದರವನ್ನು ನೀಡಿವೆ. ಇದರಿಂದ ರೈತರಿಗೆ ಅನ್ಯಾಯವಾಗಿದ್ದು ನ್ಯಾಯಯುತವಾಗಿ ಇನ್ನೂ ಪ್ರತಿಟನಗೆ 200 ರಿಂದ 300 ರೂಪಾಯಿ  ರೈತರಿಗೆ ಬರಬೇಕು ಎಂದರು. ಅದರಂಥೆ 2500 ದರ ನೀಡಬೇಕು ಎಂದರು.