ಬಾಗಲಕೋಟೆ: ವಿಜ್ಞಾನದ ಬೆಳವಣಿಗೆಯಿಂದ ದಿನದಿಂದ ದಿನಕ್ಕೆ ಸುಧಾರಿತ ತಂತ್ರಜ್ಞಾನಗಳು ಬರುತ್ತಿದ್ದು, ರೈತರು ವಿಜ್ಞಾನಿಗಳ ಸಲಹೆ, ಸೂಚನೆಗಳನ್ನು ಪಡೆದುಕೊಂಡು ಆದಾಯ ವೃದ್ದಿಸಿಕೊಳ್ಳುವಂತೆ ವಸತಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಸಚಿವರಾದ ವಿ.ಸೋಮಣ್ಣ ಹೇಳಿದರು.
ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಇಂಡೋ-ಅಮೇರಿಕನ್ ಹೈಬ್ರಿಡ್ ಸೀಡ್ಸ್(ಭಾರತ) ಪ್ರೈ.ಲಿ. ಅವರ ಸಂಯುಕ್ತ ಆಶ್ರಯದಲ್ಲಿ ತೋವಿವಿಯ ಸಭಾಭವನದಲ್ಲಿಂದು ಪದ್ಮಶ್ರೀ ಡಾ.ಮನಮೋಹನ ಅತ್ತಾವರ್ ಅವರು ಕೃಷಿ ಕ್ಷೇತ್ರಕ್ಕೆ ಗಣನೀಯವಾಗಿ ಸಲ್ಲಿಸಿದ ಸಾಧನೆಯ ಸ್ಮರಣಾರ್ಥವಾಗಿ ತೋಟಗಾರಿಕೆ ಬೆಳೆಗಳ ಗುಣಮಟ್ಟದ ಬೀಜ ಮತ್ತು ಸಸಿಗಳ ಉತ್ಪಾದನೆಯಲ್ಲಿ ಆಗಿರುವ ಇತ್ತೀಚಿನ ಸಂಶೋಧನೆಗಳು ಮತ್ತು ಭವಿಷತ್ತಿನ ಅವಕಾಶಗಳು ಎಂಬ ವಿಷಯ ಕುರಿತು ಎರಡು ದಿನಗಳವರೆಗೆ ಹಮ್ಮಿಕೊಂಡ ಪದ್ಮಶ್ರೀ ಡಾ. ಮನಮೋಹನ ಅತ್ತಾವರ್ ಮೆಮೊರಿಯಲ್ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶಕ್ಕೆ ಯಾವುದೂ ಕೊರತೆ ಇಲ್ಲ. ಕೆಲಸ ಮಾಡುವ ಇಚ್ಛಾಶಕ್ತಿ ಇದ್ದಾಗ ಮಾತ್ರ ಪ್ರತಿಯೊಬ್ಬರ ಕೆಲಸಕ್ಕೆ ಮಾನ್ಯತೆ ಬರುತ್ತದೆ. ಇಲ್ಲಿಯ ರೈತರಿಗೆ ಒಳ್ಳೆಯ ಅವಕಾಶಗಳನ್ನು ನೀಡುವ ಸದುದ್ದೇಶದಿಂದ ತೋವಿವಿ ಕಟ್ಟಿದ್ದು, ಇದು ಇಡೀ ದೇಶಕ್ಕೆ ಸಮರ್ಪಕ ಕೊಡುಗೆಯನ್ನು ನೀಡಬೇಕಾಗುತ್ತದೆ.
ಈ ಸಂಸ್ಥೆ ತಾನು ಬೆಳೆಯುವುದರ ಜೊತೆಗೆ ಎಲ್ಲರನ್ನೂ ಬೆಳೆಸಿ ತಾನು ಬೆಳೆಯುವ ಅವಶ್ಯಕತೆ ಇದೆ. ಇತ್ತೀಚೆಗೆ ನಡೆದ ಪ್ರಕೃತಿವಿಕೋಪಕ್ಕೆ ರೈತರು ನಲುಗಿ ಹೋಗಿದ್ದಾರೆ. ಅವರನ್ನು ಕೈ ಹಿಡಿಯಬೇಕಾಗಿದೆ ಎಂದರು.
ತಾಂತ್ರಿಕ ವಿಷಯಗಳ ಕೈಪಿಡಿ ಮತ್ತು ಬೀಜಗಳನ್ನು ಗಣ್ಯಮಾನ್ಯರು ಮತ್ತು ಸ್ಮರಣಸಂಚಿಕೆಯನ್ನು ಬೆಂಗಳೂರಿನ ಇಂಡೋ-ಅಮೇರಿಕನ್ ಹೈಬ್ರಿಡ್ ಸೀಡ್ಸ್(ಭಾರತ) ಪ್ರೈ. ಲಿ. ಸಂಸ್ಥೆಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕರಾದ ಅತರ್ೂರ ಸಂತೋಷ ಅತ್ತಾವರ್ ಅವರು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿಗಳಾಧ ಗೋವಿಂದ ಕಾರಜೋಳ, ಶಾಸಕ ವೀರಣ್ಣ ಚರಂತಿಮಠ, ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಬೆಂಗಳೂರು ಹೆಬ್ಬಾಳದ ಕನರ್ಾಟಕ ರಾಜ್ಯ ಬೀಜ ಪ್ರಮಾಣೀಕರಣ ಸಂಸ್ಥೆಯ ಏಜೆನ್ಸಿಯ ವ್ಯವಸ್ಥಾಪಕ ನಿದರ್ೆಶಕ ಎಮ್.ಎಚ್.ಬಂಥನಾಳ, ತೋವಿವಿ ನಿವೃತ್ತ ಕುಲಪತಿ ಡಾ.ಎಸ್.ಬಿ.ದಂಡಿನ ಸೇರಿದಂತೆ ಸಹ ಅಧ್ಯಕ್ಷ್ಯ ಡಾ.ಎನ್. ಬಸವರಾಜ ಸಹ ಸಯೋಜನಾ ಕಾರ್ಯದಶರ್ಿಗಳಾಗಿ ಡಾ.ಶಿವಯೋಗಿ ರ್ಯಾವಳದ ಮತ್ತು ಡಾ.ಬಾಪುರಾಯನಗೌಡ ಪಾಟೀಲ ಉಪಸ್ಥಿತರಿದ್ದರು.
ವಿವಿಧ ವಿಶ್ವವಿದ್ಯಾಲಯಗಳಿಂದ ಭಾಗವಹಿಸಿದ ಅಭ್ಯಥರ್ಿಗಳು ಸಂಶೋಧನಾಪರ ಭಿತ್ತಿಚಿತ್ರಗಳನ್ನು ಪ್ರದಶರ್ಿಸಿದರು. ತೋವಿವಿಯ ಕುಲಪತಿ ಡಾ.ಇಂದಿರೇಶ ಸ್ವಾಗತಿಸಿದರು. ಸಂಯೋಜನಾ ಕಾರ್ಯದಶರ್ಿ ಮತ್ತು ಬೀಜ ಘಟಕ ವಿಭಾಗದ ವಿಶೇಷ ಅಧಿಕಾರಿ ಡಾ.ಡಿ.ಆರ್.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ದ್ವಿತಿಯ ವರ್ಷದ ತೋಟಗಾರಿಕೆ ವಿದ್ಯಾಥರ್ಿಗಳು ಪ್ರಾಥರ್ಿಸಿದರು. ಡಾ. ಪಲ್ಲವಿ ಎಚ್. ಎಮ್ ನಿರೂಪಿಸಿದರು.