ಲೋಕದರ್ಶನವರದಿ
ಕುರುಗೋಡು. 11 :ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತೋಟಗಾರಿಕೆ ರೈತರು ಹಾಗೂ ಚಾಲಕರ ಸಭೆ ನಡೆಯಿತು.
ತಹಶೀಲ್ದಾರ್ ಮಲ್ಲೇಶಪ್ಪ ಸಭೆ ಉದ್ದೇಶಿಸಿ ಮಾತನಾಡಿ, ಕೊರೋನಾ ವೈರಸ್ ಬೀತಿಯಿಂದ ದೇಶವೇ ಲಾಕಡೌನ್ ಆಗಿದ್ದರೂ, ಸಕರ್ಾರದ ಆದೇಶ ಮೇರೆಗೆ ತೋಟಗಾರಿಕೆ ರೈತರು ಬೆಳೆದಿರುವ ಹಣ್ಣುಗಳನ್ನು ಹೊರ ರಾಜ್ಯ ಹಾಗೂ ಬೇರೆಡೆಗೆ ಮಾರಾಟ ಮಾಡಲು ಅನುಕೂಲ ಕಲ್ಪಿಸಿದೆ. ಕೊರೊನಾ ವೈರಸ್ಗೆ ತುತ್ತಾಗದಂತೆ ಮುಂಜಾಗೃತಿಯಾಗಿ ಮಾರಾಟ ಮಾಡಲು ಕಳುಹಿಸದ ಲಾರಿ, ಅಟೋ ಚಾಲಕರಿಗೆ ಸ್ವಚ್ಛತೆಯಿಂದರಬೇಕು. ಬ್ಲಿಚಿಂಗ್ ಪೌಡರ್ನಿಂದ ಆಟೋ, ಲಾರಿಗಳನ್ನು ಶುದ್ಧಿ ಮಾಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕನರ್ಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ವಿಎಸ್.ಶಿವಶಂಕರ್ ಮಾತನಾಡಿ, ತೋಟಗಾರಿಕೆ ರೈತರ ಬೆಳೆಗಳನ್ನು ಸಕರ್ಾರ ಎಪಿಎಂಸಿ ಆಪಕಾಮ್ಸ್ ವತಿಯಿಂದ ಖರೀದಿಸಬೇಕು ಆಗ ರೈತರಿಗೆ ಅನುಕೂಲವಾಗುತ್ತದೆ ಎಂದು ಒತ್ತಾಯಿಸಿದರು.
ಇದಕ್ಕೆ ಸ್ಪಂದಿಸಿದ ತೋಟಗಾರಿಕೆ ಇಲಾಖೆ ಸಹಾಯಕ ನಿದರ್ೇಶಕ ಬಿ.ಮುಕ್ಬುಲ್ ಹುಸೇನ್, ರೈತರ ವಾಸ್ತವ ಸ್ಥಿತಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು, ಅವರ ಆದೇಶದಂತೆ ಪಾಲಿಸುತ್ತೇವೆ ಎಂದರು.
ಶ್ರೀನಿವಾಸ್ ಕ್ಯಾಂಪ್, ಮುಷ್ಟಗಟ್ಟೆ, ಕೆರೆಕೆರೆ, ಲಕ್ಷ್ಮಿಪುರ, ಸೋಮಲಾಪುರ ಗ್ರಾಮಗಳ ತೋಟಗಾರಿಕೆ ರೈತರು, ಕನರ್ಾಟಕ ಪ್ರಾಂತ ರೈತ ಸಂಘದ ತಾಲೂಕು ಕಾರ್ಯದಶರ್ಿ ಗಾಳಿ ಬಸವರಾಜ್, ಸೋಮಪ್ಪ, ಹುಲೇಪ್ಪ ಹಾಗೂ ಇನ್ನಿತರರು ಇದ್ದರು.