ಕೋಟೂರ ಗ್ರಾಮದಲ್ಲಿ ಇಗಿರುವ 33 ಕೆ.ವಿ. ವಿದ್ಯುತ್ ಸರಬರಾಜ ಕೇಂದ್ರವನ್ನು 110 ಹೆಚ್ಚಿಸಬೇಕೆಂದು ರೈತರಿಂದ ದರಣಿ

Farmers demand that the existing 33 kV power supply station in Kotura village be increased to 110 kV

ಲೋಕದರ್ಶನ ವರದಿ 

ಕೋಟೂರ ಗ್ರಾಮದಲ್ಲಿ ಇಗಿರುವ 33 ಕೆ.ವಿ. ವಿದ್ಯುತ್ ಸರಬರಾಜ ಕೇಂದ್ರವನ್ನು 110 ಹೆಚ್ಚಿಸಬೇಕೆಂದು ರೈತರಿಂದ ದರಣಿ 

ಯರಗಟ್ಟಿ 20: ಸಮೀಪದ ಕೋಟೂರ ಗ್ರಾಮದಲ್ಲಿರುವ 33 ಕೆ ವಿ. ವಿದ್ಯುತ್ ಸರಬರಾಜು ಕೇಂದ್ರ ಇದ್ದು ಇದರಿಂದ ಸರಬರಾಜು ಮಾಡುತ್ತಿದ್ದ ವಿಧ್ಯುತ ಮೇಲಿಂದ ಮೇಲೆ ಕೈ ಕೋಡುತ್ತಿದೆ. ಕೋಟೂರ ಹೆಸ್ಕಾಂ ಕಛೇರಿಯ ಎಸ್‌ಓ ಅವರಿಗೆ ಹಲವಾರು ಭಾರಿ ಮನವಿ ಸಲ್ಲಿಸಿದ್ದಾರೆ ಯಾವುದೇ ಪ್ರಯೋಜನವಾಗಿಲ್ಲ ಇದರಿಂದ ತೊಂದರೆ ಒಳಗಾದ ಮಾಡಮಗೇರಿ, ಶಿವಾಪೂರ, ಕಡಬಿ, ಕೋಟೂರ ಮುಂತಾದ ಗ್ರಾಮಗಳ ನೋರಾರು ರೈತರು ದಿ.18 ರಂದು ಮಂಗಳವಾರ ಬೆಳಗಾವಿ ಕೆಪಿಟಿಸಿಎಲ್ ಕಛೇರಿ ರೈತರು ಬೃಹತ್ತ ಪ್ರತಿಬಟನೆ ನಡಸಿದರು. 

ಮಹಾಂತೇಶ ತೋಟಗಿ ಕೃಷೀಕ ಸಮಾಜ ನವದೆಹಲಿ ಯುವ ಘಟಕದ ರಾಜ್ಯಾಧ್ಯಕ್ಷ ಮಾತನಾಡಿ ಕೋಟೂರ ಗ್ರಾಮದಲ್ಲಿ ಇಗಿರುವ 33 ಕೆ.ವಿ. ವಿದ್ಯುತ್ ಸರಬರಾಜ ಕೇಂದ್ರವನ್ನು 110 ಹೆಚ್ಚಿಸಬೇಕು ಅಂದಾಗ ಮಾತ್ರ ವಿದ್ಯುತ್ ಸರಬರಾಜನಲ್ಲಿ ಯಾವುದೇ ತೋಂದರೆ ಆಗುವುದಿಲ್ಲ ಯರಗಟ್ಟಿ ಹೆಸ್ಕಾಂ ಕೇಂದ್ರದಿಂದ ಕೇವಲ ಹತ್ತು ಕಂಬಗಳು ನೆಟ್ಟು ವಿದ್ಯುತ್ ತಂತಿ ಜೋಡನೆ ಮಾಡಿದರೆ 110 ವಿದ್ಯುತ್ ಸರಬರಾಜು ವಾಗುತ್ತದೆ. ಇಗ ಸದ್ಯ ಬೇಸಿಗೆ ಇರುವುದರಿಂದ ಸರಿಯಾಗಿ ವಿದ್ಯುತ್ ನೀಡಬೇಕು ರೈತರ ಪಂಪಸೆಟ್ ಗಳಿಗೆ ಮೇಲಿಂದ ಮೇಲೆ ಕರೆಂಟ ಕೈಕೊಡುವುದರಿಂದ ರೈತರು ನಾಟಿ ಮಾಡಿದ ಬೆಳೆಗಳು ಒಣಗುತ್ತಿವೆ ಇದರಿಂದ ಬೀಜೋಪಚಾರ ಮಾಡಿದ ಕರ್ಚುಕೋಡಾ ಕೈಗೆ ಬರುವುದಿಲ್ಲ ಹಾಗೆನಾದರೂ ಕಾಮಗಾರಿ ಮಾಡಲು ವಿಳಂಭವಾದರೆ ರಾಜ್ಯಹೆದ್ದಾರಿಗಳನ್ನು ಬಂದ ಮಾಡಲು ಮುಂದಾಗಬೇಕಾಗುತ್ತದೆ ಎಂದರು. 

ಮನವಿ ಸ್ವಕರಿಸಿ ಮಹೇಂದ್ರ ವಿಶಾಲಪುರಕರ, ಮಾತನಾಡಿದ ಎರಡರಿಂದ ಮೂರು ತಿಂಗಳವಳಗೆ 110 ಕಾಮಗಾರಿಯನ್ನು ಮುಗಸಿ ವಿದ್ಯುತ ನೀಡುವುದಾಗಿ ಭರವಸೆ ನೀಡಿದರು. ಅದು ಅಲ್ಲದೆ ವಿದ್ಯುತ್ ಟ್ರೀಪ್ ನೋಡಿಕೊಳ್ಳುತ್ತೆವೆ ಅದರ ಜೋತೆಗೆ ನೀರಂತರ ವಿದ್ಯುತ್ ನೀಡುತ್ತೆವೆ ರೈತರಿಗೆ ಹಗಲು 5 ತಾಸು, ರಾತ್ರಿ 2 ತಾಸು ವಿದ್ಯುತ್ ನೀಡಲಾಗುವುದು ಎಂದು ಭರವಸೆ ನೀಡಿದರು. 

ರೈತರಾದ ಚಿದಾನಂದ ಹಮ್ಮನ್ನವರ, ಅಶೋಕ ಹುಂಡೆಕರ, ಮಡಿವಾಳಪ್ಪ ಗಡ್ಡಿ, ಬಾಳಪ್ಪ ಜಕ್ಕನ್ನವರ, ಸೈದುಸಾಬ ನದಾಫ, ಶ್ರೀದರ ಉದಗಟ್ಟಿ, ಮಹಾವೀರ ಹುಕ್ಕೇರಿ, ಮಂಜು ಗಡ್ಡಿ, ಬಸಪ್ಪ ತಿಮ್ಮೇಸಿ, ಶಂಕರ ಹೊಸೆಟ್ಟಿ, ಪರಮೇಶ ಚಂದರಗಿ, ರಾಯಪ್ಪ ಸೋಗದ, ಶಿವಾನಂದ ಕಟ್ಟಿಮನಿ, ಯಲ್ಲಪ್ಪ ಗೋಸಬಾಳ, ರಂಜಿತ ಹೊಸೆಟ್ಟಿ, ಈರಯ್ಯ ವಸ್ತ್ರದ, ಬಸವರಾಜ ಮಾಳಕನವರ ಮುಂತಾದವರು ಇದ್ದರು.