ಲೋಕದರ್ಶನ ವರದಿ
ತಾಳಿಕೋಟೆ,17: ಹೋಬಳಿ ವ್ಯಾಪ್ತಿಯ ರೈತಾಪಿ ಜನರಿಗೆ 2017-18 ನೇ ಸಾಲಿನ ಫಸಲ್ ಭೀಮಾ ಯೋಜನೆಯಡಿಯ ಮುಂಗಾರು ಮತ್ತು ಹಿಂಗಾರು ಹಂಗಾಮಿನ ಬೆಳೆವಿಮೆ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿ ರೈತಾಪಿ ಜನರು ತಹಶಿಲ್ದಾರರ ಮೂಲಕ ಯುನೈಟೆಡ್ ಇಂಡಿಯಾ ಇನ್ಸೂರೇನ್ಸ್ ಕಂಪನಿಯ ಪ್ರಾದೇಶಿಕ ವ್ಯವಸ್ಥಾಕರಿಗೆ ಶುಕ್ರವಾರರಂದು ಮನವಿ ಸಲ್ಲಿಸಿದರು.
ಈ ಸಮಯದಲ್ಲಿ ರೈತ ಸಂಘದ ಮುಖಂಡ ನಿಂಗನಗೌಡ ದೇಸಾಯಿ(ಹಡಗಿನಾಳ) ಮಾತನಾಡಿ ಈಭಾಗದ ರೈತರು ಸತತವಾದ ಬರಗಾಲಕ್ಕೆ ತುತ್ತಾಗುತ್ತಾ ಸಾಗಿದ್ದಾರೆ ಸರಿಯಾದ ಮಳೆ ಬೆಳೆ ಇಲ್ಲದಕ್ಕೆ ಎಲ್ಲ ರೈತರು ಕಂಗಾಲಾಗಿದ್ದಾರೆ 2017-18 ನೇ ಸಾಲಿಗೆ ಈ ಭಾಗದ ಎಲ್ಲ ರೈತಾಪಿ ಜನರು ಬೆಳೆವಿಮೆಯನ್ನು ಪಾವತಿಸಿದ್ದು ಮಳೆ ಇಲ್ಲದೇ ಬೆಳೆ ಹಾನಿಗೀಡಾಗಿದ್ದರೂ ಕೂಡಾ ಇನ್ನೂ ವಿಮಾ ಕಂಪನಿಯು ವಿಮೆ ಪರಿಹಾರ ಮೋತ್ತ ಪಾವತಿಸಿಲ್ಲಾ ರೈತರ ಜಮೀನುಗಳಲ್ಲಿ ತೊಗರಿಗಿಡಗಳು ಮಳೆ ಇಲ್ಲದ್ದಕ್ಕೆ ಒಣಗಿ ನಿಂತಿವೆ ಇದರಿಂದ ರೈತರು ಸಂಕಷ್ಟ ಪರಸ್ಥಿತಿಯನ್ನು ಎದುರಿಸುವಂತಾಗಿದೆ ಕೂಡಲೇ ಈ ಮನವಿ ತಲುಪಿದ 15 ದಿನಗಳ ಒಳಗೆ ಹೋಬಳಿ ಹಾಗೂ ಪಟ್ಟಣದ ವ್ಯಾಪ್ತಿಯ ಎಲ್ಲ ರೈತರಿಗೆ ವಿಮಾ ಮೊತ್ತವನ್ನು ತಲುಪುವಂತಾಗಬೇಕು ಇಲ್ಲದಿದ್ದರೆ ಎಲ್ಲ ರೈತರು ಒಗ್ಗೂಡಿ ವಿಮಾ ಪರಿಹಾರದ ಮೊತ್ತದ ಜೊತೆಗೆ ಮಾನಸಿಕ ನೋವಿನ ಪರಿಹಾರಕ್ಕಾಗಿ ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಲಾಗುವದೆಂದರು.
ಮನವಿ ಪತ್ರವನ್ನು ಉಪತಹಶಿಲ್ದಾರ ನಾಯಕ ಅವರಿಗೆ ರೈತ ಸಂಘದ ಮುಖಂಡರುಗಳು ಸಲ್ಲಿಸಿದರು.
ಈ ಸಮಯದಲ್ಲಿ ರೈತ ಮುಖಂಡರುಗಳಾದ ಮಲ್ಲನಗೌಡ ಪಾಟೀಲ, ಶಂಕರಸಿಂಗ್ ಹಜೇರಿ, ಲಕ್ಷ್ಮಣ ರಂಗಸುಭೆ, ಎಸ್.ಎಲ್.ಹಿಪ್ಪರಗಿ, ವ್ಹಿ.ಎ.ವಿಜಾಪೂರ, ಬಸ್ಸು ಕಶೆಟ್ಟಿ, ಎಸ್.ಎಚ್.ಪಾಟೀಲ, ಲಕ್ಷ್ಮಣ ವಿಜಾಪೂರ, ರಾಜಪ್ಪ ವಾಲಿಕಾರ, ಅಬುಬಕರ ಚೋರಗಸ್ತಿ, ಭಗತಸಿಂಗ್ ಹಜೇರಿ, ಮೈಬೂಬಸಾಬ ಕಟ್ಟಿ, ಲಕ್ಷ್ಮಣ ರಂಗಸುಭೆ, ಇಮಾಮಹುಸೇನ ಚೋರಗಸ್ತಿ, ಒಳಗೊಂಡು ನೂರಾರು ರೈತರು ಇದ್ದರು.