ತೂಕ ಬೆಲೆಯಲ್ಲಿ ರೈತನಿಗೆ ಮೋಸ: ಸೋಮಣ್ಣ

ಲೋಕದರ್ಶನ ವರದಿ

ಶಿಗ್ಗಾವಿ03: ರೈತರು ಇಂದು ಸಂಕಷ್ಟಕ್ಕೆ ಸಿಲುಕಲು ಸಕರ್ಾರ ಹಾಗೂ ರಾಜಕೀಯ ಕಾರಣ, ರೈತರಿಗೆ ಸಂಬಂಧಿಸಿದಂತೆ ಸರಿಯಾದ ನಿಯಮಗಳನ್ನು ರೂಪಿಸಿಲ್ಲ ಆದರಿಂದ ನಿಯಮಗಳನ್ನು ಬದಲಿಸಿ ಅವರಿಗೆ ಸಕರ್ಾರದ ಸಹಾಯ ಹಾಗೂ ನಮ್ಮೆಲ್ಲರ ಸಹಕಾರ ಅವಶ್ಯವಿದೆ ಎಂದು ವಿ.ಪ ಸದಸ್ಯ ಸೋಮಣ್ಣ ಬೇವಿನಮರದ ಹೇಳಿದರು.

ಪಟ್ಟಣದ ಹೊರವಲಯದಲ್ಲಿರುವ ಪ್ರಕಾಶ ಹುರಳಿಯವರ ಜಮೀನಿನಲ್ಲಿ ಗಂಗಾ ಕಾವೇರಿ ಸೀಡ್ಸ್ ಪ್ರೈವೇಟ್ ಲಿಮಿಟೆಡ್ ಹೈದ್ರಾಬಾದ ವತಿಯಿಂದ ಹಮ್ಮಿಕೊಂಡ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ರೈತನಿಗೆ ತೂಕ ಮತ್ತು ಬೆಲೆಯಲ್ಲಿ ನ್ಯಾಯ ಸಿಗುತಿಲ್ಲ ಆದ್ದರಿಂದ ರೈತ ತೊಂದರೆ ಅನುಭವಿಸುತ್ತಿದ್ದು  ಸರಕಾರ ಮಾಡಿದ ನಿಯಮಗಳ ಬದಲಾಗಿ ಪಯರ್ಾಯ ನಿಮಗಳನ್ನು ಅಳವಡಿಸಿ ರೈತ ಸಂತೃಪ್ತಿಯಿಂದ ಬೆಳೆ ಬೆಳೆಯಲು ಅವಕಾಶ ಮಾಡಿ ಕೊಡಬೇಕು, ರೈತನಿಗೆ ಸಾಲ ಸೌಲಭ್ಯ ಹಾಗೂ ಸಹಕಾರ ನೀಡುವ ನಿಟ್ಟಿನಲ್ಲಿ ಸರಕಾರ ರೈತನ ಖಾಳಜಿಗೆ ಮುಂದಾಗಬೇಕು, ರೈತ ಬೇಗ ಶ್ರೀಮಂತನಾಗುವ ಆಸೆಯಿಂದ ಬಿತ್ತುವ ಸಮಯದಲ್ಲಿ ತಾನೆ ಬೆಳೆದ ಕಾಳುಗಳನ್ನು ಸಂರಕ್ಷಿಸಿಟ್ಟು ಮುಕ್ಕು ಕಾಳುಗಳಂತೆ ಮೊದಲೇ ಐದು ಗುಂಪಿ ಮಾಡಿ ದೇವರ ಮುಂದೆ ಇಟ್ಟು  ಪೂಜೆ ಮಾಡಿ ಬಿತ್ತುವ ಸಂಪ್ರದಾಯ ಇಂದು ಬದಲಾಗಿದೆ, ಬಿತ್ತುವ ಸಮಯದಲ್ಲಿ ಹೋಗಿ ಬೀಜ ತಂದು ಬಿತ್ತುವ ಪದ್ಧತಿಯನ್ನು ನಾವು ಮೈಗೂಡಸಿಕೊಂಡು ಮೂಲ ಪದ್ದತಿಯನ್ನು ಮರೆತಿದ್ದೇವೆ ಎಂದು ವಿಷಾದಿಸಿದರು.

ಮಾಜಿ ಜಿಲ್ಲಾ ಪಂಚಾಯತಿ ಅದ್ಯಕ್ಷ ಮಲ್ಲೆಶಪ್ಪ ಹರಿಜನ ಮಾತನಾಡಿ ರೈತ ಆಥರ್ಿಕವಾಗಿ ಸ್ವಾವಲಂಬಿಯಾಗಲು ಮುಂದಾಗಬೇಕು, ಭೂಮಿಯ ತೇವಾಂಶ ಅರಿತು ರೈತರು ಬೆಳೆ ಬೆಳೆಯಬೇಕು ಅಂದಾಗ ರೈತ ಯಶಸ್ವಿಯಾಗಲು ಸಾಧ್ಯವಿದೆ, ಸರಕಾರವೂ ಸಹಿತ ರೈತನಿಗೆ ಅನುಕೂಲಕರ ನಿಯಮಗಳನ್ನು ತಂದಾಗ ರೈತ ಲಾಭದಾಯಕ ಬೆಳೆ ಬೆಳೆಯಲು ಸಾದ್ಯ ಎಂದರು.

ಕಾರ್ಯಕ್ರಮದಲ್ಲಿ ಪ್ರಗತಿ ಪರ ರೈತರನ್ನು ಸನ್ಮಾನಿಸಲಾಯಿತು, ಜಮೀನಿನ ಮಾಲೀಕ ಬಸವರಾಜ ಹುರುಳಿ, ಪ್ರಕಾಶ ಹುರುಳಿ, ಪಗರತಿಪರ ರೈತರಾದ ಸಿ ಡಿ ಪಾಟೀಲ, ಬಸವರಾಜ ಹಾವೇರಿ, ಈಶ್ವರ ವನಹಳ್ಳಿ, ರಮೇಶ ವನಹಳ್ಳಿ ಸೇರಿದಂತೆ ಗಂಗಾ ಕಾವೇರಿ ಸೀಡ್ಸ್ ಪ್ರೈವೇಟ್ ಲಿಮಿಟೆಡ್ ಹೈದ್ರಾಬಾದ ಕಂಪನಿಯ ಸಿಬ್ಬಂದಿಗಳಾದ ಮಹಲಿಂಗ ಎಮ್ ಚೌಕಿ, ಮಂಜುನಾಥ ಇಚ್ಚಂಗಿ, ಎಫ್ ಸಿ ಪಾಟೀಲ, ಬಿ ಎಮ್ ಪಾಟೀಲ ಸಹಾಯಕರಾದ ದೇವರಾಜ, ದಿಗ್ಗೆಪ್ಪ, ಪ್ರಕಾಶ, ಮಂಜುನಾಥ, ಈರಯ್ಯ ಹಾಗೂ ಇತರ ರೈತರು ಹಾಜರಿದ್ದರು.