ಲೋಕದರ್ಶನ ವರದಿ
ಬೆಳಗಾವಿ, 20: ರಾಜ್ಯ ಸಕರ್ಾರ ಮಹಾರಾಷ್ಟ್ರಕ್ಕೆ ಕಬ್ಬು ರಪ್ತು ಮಾಡುವುದನ್ನು ನಿಷೇಧಿಸಿದೆ. ತಕ್ಷಣ ಹಿಂದಕ್ಕೆ ಪಡೆದು ರೈತರಿಗೆ ನೀಡಬೇಕಾದ ಕಬ್ಬಿನ ಬಾಕಿ ಹಣ ನೀಡಬೇಕು ಎಂದು ಸ್ವಾಭಿಮಾನಿ ರೈತ ಸಂಘದ ಅಧ್ಯಕ್ಷ ರಾಜು ಸೆಟ್ಟಿ ಆಗ್ರಹಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದರು. ಕಳದೆ ಮೂರನಾಲ್ಕು ದಿನಗಳಿಂದ ಪರಿಸ್ಥಿತಿ ಬದಲಾಗಿದೆ. ಮಹಾರಾಷ್ಟ್ರದಲ್ಲಿ 107 ಟನ್ ಸಕ್ಕರೆ ಪ್ರತಿ ವರ್ಷ ಉತ್ಪಾದನೆ ಆಗುತ್ತಿತ್ತು. ಆದರೆ ಅದು ಈಗ ಕಡಿಮೆ ಆಗಿದೆ. ಪ್ರವಾಹ ಮತ್ತು ಮಳೆಯಿಂದ ಕನಾಟಕದಲ್ಲಿ ಕಬ್ಬು ಕಡಿಮೆಯಾಗಿದೆ.
ಕಳೆದ ವರ್ಷ ಉತ್ಪಾದಿಸಿದ ಸಕ್ಕೆರೆ ರಪ್ತಾಗದೆ ಇನ್ನು ಹಾಗೆ ಉಳಿದಿದೆ. ನಮ್ಮ ರೈತರಿಗೆ ನ್ಯಾಯ ಬೇಕಾಗಿದೆ. ರಾಜ್ಯದಲ್ಲಿ ಸಕ್ಕೆರೆ ಕಾರಖಾನೆಗಳು ಎಫ್ಆರ್ಪಿ ಹಣ ನೀಡಬೇಕು. ಬಾಕಿ ಇರುವ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು. ಕಾನರ್ಾಟಕ ಸಕರ್ಾರ ಮಹಾರಾಷ್ಟ್ರಕ್ಕೆ ಕಬ್ಬು ರಪ್ಪು ಮಾಡಲು ನಿಷೇಧ ಮಾಡಿದೆ. ಅದನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು. ಕನರ್ಾಟಕ ಮತ್ತು ಮಹಾರಾಷ್ಟ್ರದ ರೈತರಿಗೆ ಅಧಿಕ ಕಬ್ಬಿನ ಹಣ ಪಡಯುವದು ಹಕ್ಕಿದೆ ಎಂದರು.
ಈ ಸಂದರ್ಭದಲ್ಲಿ ರಾಜೇಂದ್ರೆ ಗಡ್ಡೇನವರ್ , ಜಯಶ್ರೀ ಗುರನ್ನವರ, ಶಿವಲೀಲಾ ಮಿಸಾಳೆ, ಕಲ್ಲಪ್ಪಾ ಕೊಳೇಕರ ಮೊದಲಾದವರು ಉಪಸ್ಥಿತರಿದ್ದರು.