ನವದೆಹಲಿ, ಅ 26: ಸಂಸತ್ತಿನಿಂದ ಇಂಡಿಯಾ ಗೇಟ್ ವರೆಗಿನ ಪ್ರದೇಶದ ವೈಭವೀಕರಣಕ್ಕೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ 12,750 ಕೋಟಿ ರೂ ಗಳನ್ನು ನೀಡಲು ಮುಂದಾಗಿದೆ, ಆದರೆ ಕಬ್ಬು ಬೆಳೆಗಾರರ 7000 ರೂ ಬಾಕಿ ಪಾವತಿಸಲು ನಿರಾಕರಿಸಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾಗಾ ಗಾಂಧಿವಾದ್ರಾ ವಾಗ್ದಾಳಿ ನಡೆಸಿದ್ದಾರೆ.
ಸರಣಿ ಟ್ವೀಟ್ ಗಳಲ್ಲಿ ಅವರು, ದೆಹಲಿಯ ಐತಿಹಾಸಿಕ ಭವ್ಯ ಪ್ರದೇಶವಾದ ಸಂಸತ್ ನಿಂದ ಇಂಡಿಯಾ ಗೇಟ್ ವರೆಗಿನ ಪ್ರದೇಶದ ಅಂದ ಚೆಂದ ಹೆಚ್ಚಿಸಲು ಗುಜರಾತ್ ಕಂಪೆನಿಗೆ ಗುತ್ತುಗೆ ನೀಡಿದ್ದಾರೆ. ರೈತರ ಬಾಕಿ ಪಾವತಿಸಲು ಕ್ರಮ ಕೈಗೊಳ್ಳುವ ಬದಲು ಸೌಂದರೀಕರಣಕ್ಕೆ ಮುಂದಾಗಿರುವ ಕ್ರಮ ಸರಿಯಲ್ಲ ಎಂದು ಆರೋಪಿಸಿದ್ದಾರೆ.
ರೈತರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮುಂದೊಂದು ದಿನ ರೈತರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಅಹಮದಾಬಾದ್ ಮೂಲದ ಕಂಪೆನಿಗೆ ದೆಹಲಿಯ ಐತಿಹಾಸಿಕ ಪ್ರದೇಶಕ್ಕೆ ಹೊಸ ರೂಪ. ನೀಡುವ ಸಂಬಂಧ ಟೆಂಡರ್ ನೀಡಿರುವುದಾಗಿ ಶುಕ್ರವಾರವಷ್ಟೇ ಸರ್ಕಾರ ತಿಳಿಸಿತ್ತು.