ವಿದ್ಯುತ್ ಸರಬರಾಜು ಮಾಡುವಂತೆ ಆಗ್ರಹಿಸಿ ರೈತರ ಮನವಿ

ಶಿಗ್ಗಾವಿ05: ತಾಲೂಕಿನ ನೀರಲಗಿ, ಕಡಳ್ಳಿ, ತಿಮ್ಮಾಪೂರ ಸೇರಿದಂತೆ ವಿವಿಧ ಗ್ರಾಮಗಳ ನೀರಾವರಿ ಕೃಷಿ ಅವಲಂಬಿತ ರೈತರಿಗೆ ವಿದ್ಯುತ್ ಸರಬರಾಜಿನಲ್ಲಿ ತುಂಬಾ ತೊಂದರೆಯಾಗುತ್ತಿದ್ದು ರೈತರಿಗೆ ತೊಂದರೆಯಾಗದಂತೆ ವಿದ್ಯುತ್ ಸರಬರಾಜು ಮಾಡುವಂತೆ ಆಗ್ರಹಿಸಿ ಸಂಬಂಧಿಸಿದ ಹೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಗ್ರಾಮದ ರೈತರು ಮನವಿ ಅಪರ್ಿಸಿದ್ದಾರೆ. 

ರೈತರೇ ದೇಶದ ಬೆನ್ನೆಲುಬು ಎಂದು ಉದ್ದುದ್ದ ಭಾಷಣ ಮಾಡುವ ರಾಜಕಾರಿಣಿಗಳೂ ಸಹಿತ ರೈತರ ನೆರವಿಗೆ ಈಗಲಾದರೂ ಬರಬೇಕು, ಜೊತೆಗೆ ಕೃಷಿ ಭೂಮಿಯನ್ನು ಅವಲಂಬಿಸಿ ಬದುಕುತ್ತಿರುವ ರೈತರು ಹಲವಾರು ತಿಂಗಳುಗಳಿಂದ ಬೆಳೆಗೆ ನೀರನ್ನು ಹಾಯಿಸಲು ಹೆಸ್ಕಾಂ ಇಲಾಖೆ ವಿದ್ಯುತ್ ವ್ಯತ್ಯವನ್ನು ಮಾಡುತ್ತಿದ್ದು ಇದು ಆ ಭಾಗದ ರೈತರಿಗೆ ತುಂಬಾ ತೊಂದರೆಯಾಗಿದೆ ಅಲ್ಲದೇ ರೈತರ ಆರೋಗ್ಯ ಮತ್ತು ಜೀವನ ಶೈಲಿಯ ದೃಷ್ಟಿಯಿಂದ ಹಗಲಿನಲ್ಲಿಯೂ ವಿದ್ಯುತ್ ಪೂರೈಸಿ ಒಂದು ಬಲ್ಬ್ ನಿರಂತರವಾಗಿ ಬೋರಿನ ಮನೆ ಬಳಸಿಕೊಳ್ಳಲು ಅವಕಾಶ ಮಾಡಿ ಕೊಡುವಂತೆ ಮನವಿಯಲ್ಲಿ ತಿಳಿಸಲಾಗಿದೆ, ಇಲ್ಲವಾದರೆ ಉಗ್ರ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಮಂಜುನಾಥ ಹಂಚಿಮನಿ, ರುದ್ರಗೌಡ ಅತ್ತಿಮರ, ಶಂಕರಣ್ಣ ನೀರಲಗಿ, ಪ್ರಕಾಶ ಶಿಗ್ಗಾವಿ, ಗುರು ಧರಣೆಪ್ಪನವರ, ಪರಶುರಾಮ ವಾಲಿಕಾರ, ಶಂಕ್ರಪ್ಪ ಕುಂಬಾರ, ಸಿದ್ದಪ್ಪ ಮಿಜರ್ಿ, ಹೊನ್ನಪ್ಪ ಮಾನವಿ, ಚನ್ನಪ್ಪ ಕುಬಸದ, ತಿಪ್ಪಯ್ಯ ಬಳಗಲಿ, ಶಿದ್ದಪ್ಪ ಚಾಕಲಬ್ಬಿ, ಮಾದೆಗೌಡ ಪಾಟೀಲ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ರೈತರು ಇದ್ದರು.

ಫೋಟೋ ಪೈಲ್ : ತಾಲೂಕಿನ ವಿವಿಧ ಗ್ರಾಮಗಳ ನೀರಾವರಿ ಕೃಷಿ ಅವಲಂಬಿತ ರೈತರಿಗೆ ವಿದ್ಯುತ್ನಲ್ಲಿ ತೊಂದರೆಯಾಗುತ್ತಿದ್ದು ರೈತರಿಗೆ ತೊಂದರೆಯಾಗದಂತೆ ವಿದ್ಯುತ್ ಸರಬರಾಜು ಮಾಡುವಂತೆ ಅಗ್ರಹಿಸಿ ಸಂಬಂಧಿಸಿದ ಹೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ರೈತರು ಮನವಿ ಅಪರ್ಿಸಿದರು.

ಮತದಾರರ ಪಟ್ಟಿಯನ್ನು ಅಂತಿಮಗೊಳಿಸುವಂತೆ ಅಧಿಕಾರಿಗಳಿಗೆ ತ್ರಿಲೋಕಚಂದ್ರ ಸೂಚನೆ