ರೈತರ ಅಭ್ಯುದಯವೇ ಸಹಕಾರಿ ಬ್ಯಾಂಕುಗಳ ಗುರಿಯಾಗಲಿ: ಶಾಸಕ ಮನಗೂಳಿ

ರೈತರ ಅಭ್ಯುದಯವೇ ಸಹಕಾರಿ ಬ್ಯಾಂಕುಗಳ ಗುರಿಯಾಗಲಿ: ಶಾಸಕ ಮನಗೂಳಿ 

ದೇವರಹಿಪ್ಪರಗಿ 18: ಸಹಕಾರಿ ಬ್ಯಾಂಕಗಳು ಸೇವಾ ಮನೋಭಾವವನ್ನು ಹೊಂದುವ ಮೂಲಕ ರೈತರ ಅಭ್ಯುದಯದ ಗುರಿಯನ್ನು ಹೊಂದಬೇಕು. ಲಾಭಾಂಶಕ್ಕಿಂತ ಸೇವೆಯ ನಿಲುವು ಅಚಲವಾಗಬೇಕು ಎಂದು ಸಿಂದಗಿ ಕ್ಷೇತ್ರದ ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಪ್ರಗತಿ ಪಟ್ಟಣ ಸಹಕಾರಿ ಬ್ಯಾಂಕ ಸಭಾಭವನದಲ್ಲಿ ಶುಕ್ರವಾರದಂದು 71ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಹಕಾರಿ ಬ್ಯಾಂಕುಗಳು ರೈತರಿಗೆ, ಸಾರ್ವಜನಿಕರಿಗೆ ಸಹಕಾರಿಯಾಗಲೆಂದು ನಮ್ಮ ಹಿರಿಯರು ಸ್ಥಾಪಿಸಿದ್ದು, ಮುಂದೆಯೂ ಸಹಕಾರಿ ಕ್ಷೇತ್ರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನೂತನ ಸೌಲಭ್ಯಗಳನ್ನು ರೈತರಿಗೆ ಹಾಗೂ ಸಾರ್ವಜನಿಕರಿಗೆ ಒದಗಿಸುವತ್ತ ಚಿಂತನೆಗಳು ನಡೆಯಬೇಕು, ಸಿಂದಗಿ ಬಸವೇಶ್ವರ ಬ್ಯಾಂಕ್ ಹಾಗೂ ಸ್ಥಳೀಯ ಪ್ರಗತಿ ಪಟ್ಟಣ ಸಹಕಾರಿ ಬ್ಯಾಂಕಗಳು  ಪ್ರಾರಂಭವಾಗಿ 27 ವರ್ಷದಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಿವೆ ಇದಕ್ಕೆ ಪಟ್ಟಣ ಸಹಕಾರಿ ಬ್ಯಾಂಕ ಸಾಕ್ಷಿ. ಬರುವಂತ ದಿನಗಳಲ್ಲಿ ಸಿಂದಗಿ ನಗರದ ಹೊರವಲಯದಲ್ಲಿ ಸಹಕಾರಿ ಭವನ ನಿರ್ಮಾಣದ ಗುರಿ ಹೊಂದಲಾಗಿದೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.ಸಹಕಾರ ಪಿತಾಮಹ ಭಾವಚಿತ್ರಕ್ಕೆ ಪ್ರಗತಿ ಪಟ್ಟಣ ಸಹಕಾರಿ ಬ್ಯಾಂಕ ಅಧ್ಯಕ್ಷರಾದ ವಾಯ್‌.ಬಿ.ಪಾಟೀಲ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಅವರು, ನೂತನ ತಾಲೂಕಿನಲ್ಲಿ ಇದೆ ಮೊದಲ ಬಾರಿಗೆ 71ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ನಮ್ಮ ಬ್ಯಾಂಕಿನಲ್ಲಿ ನಡೆಯುತ್ತಿರುವುದು ಸಂತೋಷದ ಸಂಗತಿಯಾಗಿದೆ.  

ಬ್ಯಾಂಕ ಬೆಳವಣಿಗೆ ಹಿಂದಿನ ಅಧ್ಯಕ್ಷರ ಮಾರ್ಗದರ್ಶನದಲ್ಲಿ ಆಡಳಿತ ಮಂಡಳಿ ವರ್ಗ ಹಾಗೂ ಸಿಬ್ಬಂದಿ ವರ್ಗದ ಕಾರ್ಯ ಶ್ಲಾಘನೀಯ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯಪುರ ಜಿಲ್ಲಾ ಸಹಕಾರ ವಿನಿಯನ್ ಉಪಾಧ್ಯಕ್ಷರಾದ ಎಸ್‌.ಎಸ್‌. ತಳೆವಾಡ ವಹಿಸಿದ್ದರು.ಕಾರ್ಯಕ್ರಮದಲ್ಲಿ  ವ್ಹಿ.ಜಿ. ಜೋಶಿ ಉಪನ್ಯಾಸ ನೀಡಿದರು. 

ಮುಖ್ಯ ಅತಿಥಿಗಳಾಗಿ ಶಿವನಗೌಡ ಎಸ್‌. ಪಾಟೀಲ, ಉಪಾಧ್ಯಕ್ಷ ಡಾ. ಮಂಜುನಾಥ ಮಠ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಹಣಮಂತ್ರಾಯಗೌಡ ಪಾಟೀಲ, ಎಂ.ಎಸ್‌.ಪಾಟೀಲ, ಕೆ.ಎಚ್‌.ವಡ್ಡರ, ಲೀಲಾವತಿ ಗೌಡ, ದೇವರಹಿಪ್ಪರಗಿ ಕೋ- ಬ್ಯಾಂಕಿನ ಮಾಜಿ ಅಧ್ಯಕ್ಷ ಡಾ.ಆರ್‌.ಆರ್‌.ನಾಯಕ, ಕೋರವಾರ ಪಿಕೆಪಿಎಸ್ ಅಧ್ಯಕ್ಷ ಸಂಗಮೇಶ ಛಾಯಗೋಳ ಸೇರಿದಂತೆ ಪಟ್ಟಣದ ಪ್ರಮುಖರು, ಗಣ್ಯರು, ಗ್ರಾಹಕರು, ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು. 

ಪ್ರಗತಿ ಪಟ್ಟಣ ಸಹಕಾರಿ ಬ್ಯಾಂಕ್ ವ್ಯವಸ್ಥಾಪಕ ಕೆ.ಎಸ್‌.ಪಾಟೀಲ ಸ್ವಾಗತಿಸಿ, ವಂದಿಸಿದರು.