ರಾಯಬಾಗ 08: ರೈತರು ಬೆಳೆದ ಬೆಳೆ ಸಕಾಲಕ್ಕೆ ಮಾರುಕಟ್ಟೆಗೆ ತಲುಪಿಸಲು ರೈತರ ತೋಟಪಟ್ಟಿ ರಸ್ತೆಗಳನ್ನು ಸುಧಾರಿಸಲಾಗುತ್ತಿದೆ ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.
ಬುಧವಾರ ತಾಲೂಕಿನ ಬಾವನ ಸೌಂದತ್ತಿ ಗ್ರಾಮದಲ್ಲಿ ಕಾಡಾ ಯೋಜನೆ ಅಡಿಯಲ್ಲಿ ಮಂಜೂರಾದ 30 ಲಕ್ಷ ರೂ. ಅನುದಾನದಲ್ಲಿ ಹಳೆ ದಿಗ್ಗೆವಾಡಿ ಮುಖ್ಯ ರಸ್ತೆಯಿಂದ ಪೋಪಟ ಕೂಗೆ ತೋಟದ ವರೆಗೆ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿ ಕ್ಷೇತ್ರದ ಎಲ್ಲ ರಸ್ತೆಗಳು ಸುಧಾರಣೆ ಮಾಡಲಾಗುತ್ತಿದೆ ಎಂದರು.
ತಾತ್ಯಾಸಾಹೇಬ ಕಾಟೆ, ರಾಮಚಂದ್ರ ಕಾಟೆ, ಅನಿಲ ಹಂಜೆ, ಅಜಿತ ಖೇಮಲಾಪುರೆ, ಚಿದಾನಂದ ಮಂಗಸೂಳಿ, ದಶರಥ ಕಾಟೆ, ರಮಜಾನ ಮಕಾಂದಾರ, ಶಿವಾಜಿ ಕಾಟೆ, ಪೋಪಟ ಕೂಗೆ, ದೇವು ಮಾಂಗ, ರಾಜು ಖಾಂಡೇಕರ, ಸುನೀಲ ಶಿಂದೆ, ಶ್ರೀಕಾಂತ ಮಂಗಸೂಳೆ, ಅಜಿತ ಕುಂಬಾರ, ಸುಭಾಷ ಹಂಜೆ, ಮಹಾವೀರ ಹಂಜೆ, ಸತ್ಯಪ್ಪಾ ಚಂಪು, ಅಜೀತ ದೇಸಾಯಿ ಸೇರಿ ಅನೇಕರು ಇದ್ದರು.