ಆನೆ ದಾಳಿಗೆ ರೈತ ಬಲಿ

 ಮೈಸೂರು, ನ, 10:         ಜಿಲ್ಲೆಯ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಡು ಆನೆ ದಾಳಿಯಿಂದ ಗಾಯಗೊಂಡಿದ್ದ ರೈತನೊಬ್ಬ  ಮೃಪಟ್ಟಿದ್ದಾನೆ .  ಮೃತ ವ್ಯಕ್ತಿಯನ್ನು ಕುಮಾರ್ ಎಂದು ಗುರುತಿಸಲಾಗಿದೆ. ಶನಿವಾರ ರಾತ್ರಿ ತನ್ನ ಜಮೀನಿನಲ್ಲಿ ಕೆಲಸದಲ್ಲಿ ನಿರತವಾಗಿದ್ದ  ಸಮಯದಲ್ಲಿ  ಆನೆ ಆತನ ಮೇಲೆ ದಾಳಿ  ನಡೆಸಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಪ್ರಯೋಜವಾಗದೇ   ಅವರು ಸಾವನ್ನಪ್ಪಿದ್ದಾರೆ. ಈ ಕುರಿತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪಿ.ಶಂಕರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಿ,  ಮತ್ತು ಕುಮಾರ್ ಅವರ ಪತ್ನಿಗೆ ಸರಕಾರಿ  ಉದ್ಯೋಗ ನೀಡುವ ಭರವಸೆ ನೀಡಿದರು. ಈ ನಡುವೆ   ನಾಗರಹೊಳೆ  ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯ ಸೊಲ್ಲೆಪುರ ಅರಣ್ಯ ಶ್ರೇಣಿಯಲ್ಲಿ ಶನಿವಾರ 25 ವರ್ಷದ ಆನೆಯ  ಶವ ಪತ್ತೆಯಾಗಿದೆ. ನಾಗರಹೊಳೆ  ಹುಲಿ ಯೋಜನೆಯ  ನಿರ್ದೇಶಕ ನಾರಾಯಣಸ್ವಾಮಿ ಅವರು ಭಾನುವಾರ ಮತ್ತೊಂದು ಆನೆಯೊಂದಿಗಿನ ಜಗಳದಿಂದಾಗಿ ಈ ಸಾವು ಸಂಭವಿಸಿರಬಹದು ಎಂದು ಹೇಳಿದ್ದು,  ಮೃತದೇಹದ  ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ನಿಖರ ಕಾರಣ ಗೊತ್ತಾಗಬೇಕಿದೆ.