ನರೇಗಾ ಯೋಜನೆಯಡಿ ಹಳ್ಳವನ್ನು ಹೂಳೆತ್ತುವ ಬದಲು ರೈತನ ಭೂಮಿ ಅಗೆತ

ಬೈಲಹೊಂಗಲ,12- ನರೇಗಾ ಯೋಜನೆಯಡಿಯಲ್ಲಿ ಹಳ್ಳವನ್ನು ಹೂಳೆತ್ತುವ ಬದಲು ರೈತನ ಫಲವತ್ತಾದ ಭೂಮಿಯನ್ನು ಅಗೆದ ಘಟಣೆ ನಡೆದಿದೆ.

      ತಾಲೂಕಿನ ಸಂಪಗಾಂವ ಗ್ರಾಮದ ರೈತ ವಿಜಯ ಮಹದೇವಗೌಡ ಪಾಟೀಲ ಇವರ ಜಮೀನು ಸವರ್ೆ ನಂ. 142/2   4 ಏಕರೆ 22 ಗುಂಟೆ ಜಮೀನವು ಹಳ್ಳಕ್ಕೆ ಹೊಂದಿಕೊಂಡಿದ್ದು, ಹಳ್ಳವನ್ನು ಹೂಳೆತ್ತುವ ಕೆಲಸ ನಡೆದಿತ್ತು. ಅಧಿಕಾರಿಗಳ ನಿರ್ಲಕ್ಷದಿಂದ ಹಳ್ಳವನ್ನು ಹೂಳೆತ್ತುತ್ತಾ ಬಡ ರೈತನ ಸುಮಾರು 2 ಗುಂಟೆಗೂ ಅಧಿಕ ಜಮೀನನ್ನೆ ನರೇಗಾ ಕೂಲಿ ಕಾಮರ್ಿಕರು ಅಗೆದು ಹಾಳು ಮಾಡಿದ್ದರಿಂದ ಕರೊನಾ ಸಂಕಷ್ಟದಲ್ಲಿರುವ ಬಡ ರೈತನಿಗೆ ಗಾಯದ ಮೇಲೆ ಬರೆ ಏಳೆದಂತಾಗಿದೆ.

      ಪಿಡಿಓ ನಿರ್ಲಕ್ಷ- ಸರಕಾರ ಬಡ ಕೂಲಿ ಕಾಮರ್ಿಕರಿಗೆ ಉದ್ಯೋಗ ಕಲ್ಪಿಸುವ ಮಹಾತ್ವಾಕಾಂಕ್ಷಿ ಯೋಜನೆ ಇಟ್ಟುಕೊಂಡಿದ್ದರೆ ಇತ್ತ ಪಿಡಿಓ ಹಾಗೂ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ರೈತನ ಜಮೀನು ಅಗೆದಿದ್ದಾರೆ. ರೈತನು ಕಾಮರ್ಿಕರಿಗೆ ತಕರಾರು ಮಾಡಿ ಕಾಮಗಾರಿ ತಡೆದು, ಪಿಡಿಓ ಅವರನ್ನು ವಿಚಾರಿಸಿದಾಗ, ನನಗೆ ಎನು ಗೊತ್ತಿಲ್ಲ. ಅಭಿಯಂತರನನ್ನು ಕೇಳಿ ಎಂದು ಹಾರಿಕೆ ಉತ್ತರ ನೀಡಿ ರೈತನ ಜೊತೆ ಬೇಜವಾದ್ಬರಿಯಿಂದ ನಡೆದುಕೊಂಡಿದ್ದಾರೆ ಎಂದು ರೈತ

ಆಪಾದಿಸಿದ್ದಾನೆ.  

     ಇದೆ ಜಮೀನಿಗೆ ಹೊಂದಿಕೊಂಡು 6 ವರ್ಷ ಹಿಂದೆ ಬಂದರು ನಿಮರ್ಿಸಿದ್ದ್ದು, ಪರಿಹಾರ ನೀಡುವದಾಗಿ ಭರವಸೆ ನೀಡಿ ಹೊಗಿದ್ದು, ಇಲ್ಲಿಯವರೆಗೂ ಪರಿಹಾರ ಕೈ ಸಿಕ್ಕಿಲ್ಲ. ಪರಿಹಾರ ಹಣಕ್ಕಾಗಿ ಕಚೇರಿ ಅಲೆದಾಡಿದರು ಬೆಲೆ ಇಲ್ಲದಂತಾಗಿದೆ ಎಂದು ರೈತ ಪತ್ರಿಕೆ ಎದುರು ತನ್ನ ಅಳಲು ತೋಡಿಕೊಂಡಿದ್ದಾನೆ.

  ಬಗ್ಗೆ ಮೇಲಾಧಿಕಾರಿಗಳು ಪರಿಶೀಲಿಸಿ ಕ್ರಮ ಕೈಕೊಳ್ಳದಿದ್ದರೆ ಕುಟುಂಬ ಸಮೇತ ತಾಪಂ ಎದುರು ಸರದಿ ಉಪವಾಸ ಸತ್ಯಾಗ್ರಹ ಕೈಕೊಳ್ಳುವದಾಗಿ ನೊಂದ ರೈತ ಎಚ್ಚರಿಕೆ ನೀಡಿದ್ದಾರೆ.