ರೈತ ಬಡವನಲ್ಲ ಶ್ರೀಮಂತ: ಅಮೃತಾನಂದ ಸ್ವಾಮಿಗಳು
ಇಂಡಿ 17: ರೈತ ಅನ್ನದಾತ ಅನ್ನದಾನಕ್ಕಿಂತ ಇನ್ನೊಂದು ದಾನವಿಲ್ಲ ಹಾಗಾದರೆ ರೈತ ಬಡವನಾಗಲ್ಲೂ ಹೇಗೆ ಸಾಧ್ಯ ? ಎಂದು ಬಾಲಗಾಂವ -ಕಾತ್ರಳ ಗುರುದೇವ ಆಶ್ರಮದ ಅಮೃತಾನಂದ ಸ್ವಾಮಿಗಳು ಹೇಳಿದರು.ಅವರು ವಿಜಯಪೂರ ನಗರದ ವೀರಶೈವ ಲಿಂಗಾಯತ ಕಲ್ಯಾಣ ಮಂಟಪ ಆವರಣದಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತೀಯ ಕಿಸಾನ್ ಸಂಘದ ಪ್ರಾಂತ ರೈತ ಸಮ್ಮೇಳನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿ ಮಾತನಾಡಿದ ಅವರು ಭಾರತ ಕೃಷಿ ಪ್ರಧಾನ ದೇಶವಾದ ಇಲ್ಲಿ ರೈತರೇ ಮಾಲಿಕರು ರೈತರು ಕಷ್ಟಾ ಪಟ್ಟು ದುಡಿದು ಬೆಳೆದು ನಮ್ಮ ಎಲ್ಲರಿಗೂ ಅನ್ನ ನೀಡಿದಾಗ ಮಾತ್ರ ಉಣ್ಣುವುದು. ದುಡ್ಡು, ಬಂಗಾರ, ಆಸ್ತಿ, ಅಂತಸ್ತು ಇದ್ದವರು ಆರ್ಥಿಕವಾಗಿ ಶ್ರೀಮಂತ ಇರಬಹುದು, ಹಸಿದಾಗ ಅನ್ನ ನೀಡುವವನೇ ಶ್ರೀಮಂತ, ರೈತರು ಹಿಂದಿನ ಕಾಲದಿಂದಲೂ ವ್ಯವಸಾಯದ ಜೊತೆ ಗೋವುಗಳನ್ನು ಸಾಕುತ್ತಿದ್ದರು. ಗೋವುಗಳ ಹಾಲವನ್ನು ಉಣ್ಣುವುದರಿಂದ ಅವರು ಸದೃಢವಾಗಿ ಇದ್ದರೂ, ಅವರಿಗೆ ಶುಗರ್ ಬಿಪಿ ಏನು ಅವರ ಹತ್ತಿರ ಸುಳಿಯುತ್ತಿರಲಿಲ್ಲ, ಆದರೆ ಈಗ ಹತ್ತು ವರ್ಷ ಮಗುವಿಗೆ ಶುಗರ್ ಬಿಪಿ ಇದೆ. ರೈತರು ದಿನಕ್ಕೆ ಒಂದು ಬಾರಿ ಆಕಳು ಹಾಲು ಕುಡಿಯುವುದು ಹಾಗೂ ಉಣ್ಣುವುದರಿಂದ ನಿಮ್ಮಗೆ ಯಾವ ರೋಗವೂ ಬರುವುದಿಲ್ಲ ಮತ್ತು ಕೈ ಕಾಲು ಹಿಡಿಯುವುದಿಲ್ಲ ಹಾಗೂ ಮನುಷ್ಯ ಸದೃಢವಾಗಿ ಇರಲು ಸಾಧ್ಯ ಆದ್ದರಿಂದ ತಾವುಗಳು ಎಲ್ಲರೂ ಗೋವುಗಳನ್ನು ಸಾಕಬೇಕು, ಹಾಗೂ ಯಾರು ಹಸುಗಳನ್ನು ಕಸಾಯಿಖಾನೆಗೆ ಕೊಡಬೇಡಿ, ಅವುಗಳನ್ನು ನಮ್ಮ ಗೋವು ಶಾಲೆಗಳಿಗೆ ತಂದು ಬಿಡಿ ಆದರೆ ಖಟ್ಟಗರಿಗೆ ಕೊಡಬೇಡಿ ಎಂದು ಹೇಳಿದರು.
ಶಾಂತೇಶ್ವರ ವಿವಿಧ ಉದ್ದೇಶಗಳ ಸಹಕಾರಿ ಸಂಘದ ಉಪಾಧ್ಯಕ್ಷ ಶ್ರೀಮಂತ ಇಂಡಿ, ಅಖಿಲ ಭಾರತೀಯ ಕಿಸಾನ್ ಸಂಘದ ರಾಜ್ಯ ಅಧ್ಯಕ್ಷರಾದ ಬೀಮಸೇನ ಕೊಕರೆ, ದೀನೀಶ್ ಕುಲಕರ್ಣಿ, ವಿವೇಕ ಮೊರೆ ಪುಟ್ಟಸ್ವಾಮಿ, ನಾನಾಗೌಡ ಪಾಟೀಲ (ಡೋಮನಾಳ) ವೀಣಾ ಸತೀಶ್ ಗುರುನಾಥ್ ಬಗಲಿ, ಮಲ್ಲನಗೌಡ ಪಾಟೀಲ ಸೇರಿದಂತೆ ಅನೇಕರು ಮಾತನಾಡಿದರು.
ನಂತರ ವಿಜಯಪೂರ ಸಿದ್ದೇಶ್ವರ ದೇವಾಲಯದಿಂದ ಸಾವಿರಾರು ರೈತರು ಜೈಕಾರ ಹಾಕುತ್ತಾ ಬಸವೇಶ್ವರ ವೃತ್ತ ಹಾಗೂ ಅಂಬೇಡ್ಕರ್ ವೃತ್ತ ಮೂಲಕ ಸಾಗಿ ಅಲ್ಲಿ ಕೆಲ ಹೊತ್ತು ಧರಣಿ ನಡೆಸಿದರು, ರೈತರು ತಮ್ಮ ಹತ್ತು ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮುಂಜಾಗೃತ ಕ್ರಮವಾಗಿ ಪೋಲಿಸ್ ಇಲಾಖೆಯಿಂದ ಪೋಲಿಸ್ ಬಂದೋಬಸ್ತ ಕೈಗೊಳ್ಳಲಾಯಿತು.