ಘಟಪ್ರಭಾ 29: ಯಾವುದೇ ಸಹಕಾರಿ ಸಂಘವು ಅಭಿವೃದ್ದಿ ಹೊಂದಬೇಕಾದರೆ ರೈತರ ಮತ್ತು ಸಿಬ್ಬಂದಿ ಸಹಕಾರ ಅಗತ್ಯವಾಗಿದೆ ಎಂದು ಸಂಘದ ಅಧ್ಯಕ್ಷ ಮಂಜುನಾಥ ಗುಡಕೇತ್ರ ಹೇಳಿದರು.
ಅವರು ಸಮೀಪದ ಶಿಂದಿಕುರಬೇಟ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸನ್ 2018-19ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘವು ಈ ವರ್ಷ ಲಾಭದಲ್ಲಿದ್ದು, ಸಂಘದ ಸರ್ವತೋಮುಖ ಏಳ್ಗೆಗೆ ಶ್ರಮಿಸಿದ ಎಲ್ಲ ರೈತ ಬಾಂಧವರ ಸಹಕಾರ ಮುಖ್ಯವಾಗಿದೆ. ಸಂಘವು ಇನ್ನೂ ಹಲವಾರು ಅಭಿವೃದ್ದಿ ಯೋಜನೆಗಳನ್ನು ರೂಪಿಸಿದ್ದು ಅವುಗಳನ್ನು ಮುಂಬರುವ ದಿನಗಳಲ್ಲಿ ಜಾರಿಗೆ ತರಲಾಗುತ್ತದೆ. ಅಲ್ಲದೇ ಈ ಸಂಘಕ್ಕೆ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿ ದೊರೆತ್ತಿರುವುದು ರೈತರ ಮತ್ತು ಸಿಬ್ಬಂದಿಯ ಪರಿಶ್ರಮ ಅಂತಾ ಹೇಳಬಹುದು. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಘವು ಕಾರ್ಯನಿರ್ವಹಿಸುತ್ತಾ ಬಂದಿದೆ. ಸಂಘವು ಇನ್ನಷ್ಟು ಹೆಸರುವಾಸಿಯಾಗಿ ಜಿಲ್ಲೆ,ರಾಜ್ಯ ಮಟ್ಟದಲ್ಲಿ ಕೀರ್ತಿ ಸಾಧಿಸಲಿ ಎಂದರು.
ಸಹಕಾರಿ ಸಂಘದ ಉಪಾಧ್ಯಕ್ಷ ಬಡಪ್ಪ ಬಂಡಿವಡ್ಡರ, ಸದಸ್ಯರುಗಳಾದ ಶ್ರೀಶೈಲ ಮಾನೆಪ್ಪಗೊಳ, ಗಂಗಪ್ಪ ಖಂಡುಗೋಳ, ದಿನೇಶ ಕಡೇಲಿ, ಸಿದ್ದಲಿಂಗ ನೇಲರ್ಿ, ಸಿದ್ದಪ್ಪ ಸತ್ತಿಗೇರಿ, ವಿಠ್ಠಲ ಜೋತೆನ್ನವರ, ಪರಸಪ್ಪ ಪಾಟೀಲ, ಇಂದಿರಾ ಕಬ್ಬೂರ, ಕಸ್ತೂರಿ ಮನೆಪ್ಪಗೋಳ, ಕೆಂಪಣ್ಣಾ ದೇವರಮನಿ, ಬ್ಯಾಂಕ ನಿರೀಕ್ಷಕ ಸನ್ನಿ ಪಾಟೀಲ, ಸಿಬ್ಬಂದಿಗಳಾದ ರಮೇಶ ಪರಕನಟ್ಟಿ, ಮಂಜುನಾಥ ಮಾನೆಪ್ಪಗೋಳ, ದುಂಡಪ್ಪ ಮಾನೆಪ್ಪಗೋಳ, ಬಸವರಾಜ ಹೊಸಪೇಟಿ, ರಮೇಶ ಜಾಧವ, ಸುರೇಶ ಜೋತೆನ್ನವರ ಇದ್ದರು.
ಮುಖ್ಯ ಕಾರ್ಯ ನಿವರ್ಾಹಕ ರಮೇಶ ಪರಕನಟ್ಟಿ ಅವರು ವರದಿವಾಚನ ಗೈದು ಸ್ವಾಗತಿಸಿ, ವಂದಿಸಿದರು.