ಲೋಕದರ್ಶನ ವರದಿ
ಗದಗ 16: ಕೃಷಿ ಇಲಾಖೆಯ ಆತ್ಮ ಯೋಜನೆಯಡಿ 2018-19ನೇ ಸಾಲಿನ ಜಿಲ್ಲಾ ಮಟ್ಟದ ರೈತ ಮಹಿಳೆಯರ ಹಾಗೂ ವಿಶ್ವ ಆಹಾರ ದಿನಾಚರಣೆಯ ಕಾರ್ಯಕ್ರಮವನ್ನು ದಿನಾಂಕ 15-10-2018 ರಂದು ಜಿಲ್ಲಾ ಕನ್ನಡ ಸಾಹಿತ್ಯ ಭವನ, ಗದಗದಲ್ಲಿ ಜರುಗಿತು. ಕೃಷಿ ಇಲಾಖೆ, ಗದಗ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ಹೇಮಾ ಪಟ್ಟಣಶೆಟ್ಟಿ, ಖ್ಯಾತ ಸಾಹಿತಿಗಳು, ಧಾರವಾಡ ಇವರು ಮಹಿಳೆಯು ಸಾಮಾಜಿಕವಾಗಿ, ಭೌತಿಕವಾಗಿ ಹಾಗೂ ಆಥರ್ಿಕವಾಗಿ ಸಬಲೀಕರಣವಾಗಬೇಕು. ಮಹಿಳೆಯೆಂದರೆ ಕೇವಲ ಅಡುಗೆ ತಯಾರಿಸುವುದು, ಮಕ್ಕಳ ಲಾಲನೆ, ಪಾಲನೆ ಮಾತ್ರವಲ್ಲ, ಕೃಷಿ ಚಟುವಟಿಕೆಗಳ ಕೆಲಸಗಳನ್ನು ಮಾಡುವದರ ಜೊತೆಗೆ ವಿವಿದ ರಂಗಗಳಲ್ಲಿ ಸಾಧನೆಗೈದು ಸಮಾಜದ ಮುಖ್ಯ ವಾಹಿನಿಗೆ ಬರಲು ಪ್ರಯತ್ನಿಸಬೇಕು. ಮನೆಯಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳೆಂಬ ಲಿಂಗ ತಾರತಮ್ಯ ಮಾಡದೇ ಇಬ್ಬರನ್ನೂ ಬೆಳೆಸಲು ಕರೆ ನೀಡಿದರು. ಗುಣಮಟ್ಟದ ಆಹಾರ ಉತ್ಪಾದನೆ ಮಾಡಬೇಕು, ಬಳಸಬೇಕು ಮತ್ತು ಬಡಸಬೆಕು ಜೊತೆಗೆ ಶುಚಿತ್ವದ ಬಗ್ಗೆ ಗಮನಹರಿಸಬೇಕು ಎಂದು ಹೇಳಿದರು. ತರಕಾರಿ, ಹಣ್ಣು ಹಂಪಲುಗಳನ್ನು ಅಧಿಕವಾಗಿ ಸೇವಿಸಿ ಆರೋಗ್ಯದಿಂದ ಇರಲು ತಿಳಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಅಲ್ಲಾಗಿರಿ ರಾಜ, ಸಾಹಿತಿಗಳು, ಕನಕಗಿರಿ ಇವರು ಮಾತನಾಡಿ ಮಹಿಳೆಯರು ಭಾರತ ದೇಶದಲ್ಲಿ ಶೇ. 70 ರಷ್ಟು ಕೃಷಿ ಅವಲಂಬಿಸಿದ್ದಾರೆ. ಭಾರತದ ಒಬ್ಬ ಮಹಿಳೆ ಅಮೇರಿಕ ದೇಶದ ವಿಶ್ವ ವಿದ್ಯಾಲಯಕ್ಕೆ ಸರಿಸಮ ಎಂದು ಪಾಶ್ಚಿಮಾತ್ಯ ದೇಶದವರು ಬಣ್ಣಿಸಿದ್ದಾರೆ. ಭಾರತ ದೇಶದ ಮಹಿಳೆರನ್ನು ಪೂಜ್ಯ ಭಾವನೆಯಿಂದ ಕಾಣಲಾಗುತ್ತಿದೆ. ಕೇವಲ ಇವತ್ತು ಒಂದೇ ದಿನ ಮಾತ್ರ ಮಹಿಳೆಯರ ದಿನಾಚರಣೆ ಆಗಬಾರದು, ಅದು ದಿನವೂ ಮಹಿಳೆಯ ರಕ್ಷಣೆ ಮತ್ತು ಅವಳ ಸಮಸ್ಯಗಳ ಬಗ್ಗೆ ಚಚರ್ೆ ನಡೆಯಬೇಕು ಎಂದರು. ಕೃಷಿಯು ವ್ಯವಸಾಯವಾಗಿರದೇ, ಉದ್ಯಮವಾಗಿದ್ದರೂ ಮಹಿಳೆ ಒಡತಿಯಾಗದೆ ಕೂಲಿ ಆಳಿನಂತೆ ದುಡಿಯುತ್ತಿದ್ದಾಳೆ. ಮುಂದಿನ ನಮ್ಮ ಪೀಳಿಗೆಗ ಉತ್ತಮವಾದಂತಹ ಭೂಮಿಯನ್ನು ಬಳುವಳಿಯಾಗಿ ಬಿಟ್ಟು ಹೋಗಲು ನಾವು ಚಿಂತನೆಯನ್ನು ಮಾಡಬೇಕಿದೆ. ಭೂಮಿಯ ಮೇಲಿನ ಪ್ರತಿಯೊಂದು ಜೀವಿಗೂ ಅನ್ನವನ್ನು ನೀಡುವ ರೈತನ ಜೀವನವು ಇವತ್ತು ಸಮಸ್ಯೆಯಲ್ಲಿ ಸಿಲುಕಿ, ಅನೇಕ ರೈತರು ಆತ್ಮಹತ್ಯೆಯಂತಹ ದಾರಿಗಳನ್ನು ನೋಡಿದ್ದಾರೆ. ಆದರೆ, ಅನ್ನವನ್ನಿಕ್ಕುವ ರೈತನಿಗೆ ಅನ್ಯಾಯವಾಗುತ್ತಿದೆ. ಈ ಅನ್ಯಾಯವನ್ನು ತಪ್ಪಿಸಿ ಅವನ ಸಮಸ್ಯೆಗಳನ್ನು ಸರಿಪಡಿಸಬೇಕಿದೆ. ಆ ಮಾರ್ಗದಲ್ಲಿ ನಾವು ಚಿಂತನೆಗಳನ್ನು ಮಾಡಬೇಕಿದೆ. ಪ್ರತಿಯೊಬ್ಬರೂ ಭೂಮಾತೆ ಮತ್ತು ಗೋಮಾತೆ ಗಳನ್ನು ಉಳಿಸಿಕೊಂಡು ಹೋಗಲು ಕೋರುತ್ತಾ ಒಕ್ಕಲುತನವನ್ನು ಮರೆಯಬಾರದು. ಅತಿವೃಷ್ಠಿ ಹಾಗೂ ಅನಾವೃಷ್ಠಿಯ ಸನ್ನಿವೇಶಗಳನ್ನು ಎದುರಿಸುವ ಕೃಷಿ ಪದ್ಧತಿಗಳನ್ನು ಅನುಸರಿಸಿ ಉತ್ತಮ ಜೀವನವನ್ನು ನಡೆಸಲು ತಿಳಿಸಿದರು.
ಆತ್ಮ ಯೋಜನಾ ನಿದರ್ೇಶಕ ಸಹದೇವ ಯರಗೊಪ್ಪ, ಉಪಕೃಷಿ ನಿದರ್ೇಶಕರು-1, ಗದಗ ರವರು ಮಾತನಾಡಿ ಮಹಿಳೆಯ ಪಾತ್ರವು ಗ್ರಾಮೀಣ ಮಟ್ಟದಲ್ಲಿ ಶೇ. 70 ರಿಂದ 75 ರಷ್ಟು ಕೃಷಿಯಲ್ಲಿ ತೊಡಗಿದ್ದು, ಬಿತ್ತನೆಯ ಪೂರ್ವದಿಂದ ಹಿಡಿದು ಕಟಾವಿನ ನಂತರದಲ್ಲಿಯೂ ಅವಳ ಪಾತ್ರ ಹಿರಿದುದಾಗಿದೆ. ಆಹಾರ ಉತ್ಪಾದನೆ, ಬಳಕೆ ಹಾಗೂ ಉಳಿಕೆಯಲ್ಲಿ ಹಾಗೂ ಮಕ್ಕಳ ಲಾಲನೆ, ಪಾಲನೆ ಮತ್ತು ಪೋಷಣೆಗಳಲ್ಲಿ ಮುಖ್ಯ ಪಾತ್ರವಹಿಸುತ್ತಿದ್ದಾಳೆ. ನಿಸರ್ಗವು ಒಂದು ದೇವರ ಮನೆ ಇದ್ದ ಹಾಗೆ. ನಾವು ಅತಿಥಿಗಳಾಗಿ ಇದ್ದು ಅತಿಥಿಗಳಂತೆ ಹೋಗಬೇಕಾಗುತ್ತದೆ. ಜಾಗತಿಕ ತಾಪಮಾಣ ಕೃಷಿಯ ಮೇಲೆ ವ್ಯತರಿಕ್ತ ಪರಿಣಾಮ ಬೀರುತ್ತಿದೆ, ಹೀಗೆ ಮುಂದುವರಿದರೆ ಕೃಷಿ ಅಳಿವಿನ ಅಂಚಿಗೆ ಸಿಲಕುತ್ತದೆ ಎಂದು ವಿಷಾದವ್ಯಕ್ತಪಡಿಸಿದರು. ಹಲವಾರು ವರ್ಷಗಳ ಹಿಂದೆ ಸಂತ ಶಿಶುನಾಳ ಷರೀಫರು ಅಂದು ಹೇಳಿದ ತತ್ವ ಪದಗಳು ಇಂದಿನ ಜಾಗತಿಕ ತಾಪಮಾನ ಪರಿಸ್ಥಿತಿಗೆ ಹೊಂದುವಂತೆ ಇರುವದು ಸತ್ಯವಾಗಿದೆ ಎಂದು ವಿವರಿಸದರು. ಕಾರಣ ನಿಸರ್ಗ ಮಾಡಿದಾಗ ಮಾತ್ರ ಕೃಷಿ ರಕ್ಷಣೆ ಎಂದು ಕರೆ ನೀಡಿದರು.
ಸಹಾಯಕ ಕೃಷಿ ನಿದರ್ೇಶಕ, ಚನ್ನಪ್ಪ ಅಂಗಡಿ ಮಾತನಾಡಿ ಕೇವಲ ಇವತ್ತು ಒಂದೇ ದಿನ ನಾವು ಮಹಿಳೆಯರ ದಿನ ಹಾಗೂ ವಿಶ್ವ ಆರೋಗ್ಯ ದಿನವನ್ನು ಆಚರಣೆ ಮಾಡಿದರೆ ಸಾಲದು, ರೈತರು ಬೆಳೆಯುವ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗಬೇಕಾಗಿದೆ. ರೈತರ ಉತ್ತನ್ನಗಳಾದ ತರಕಾರಿಗಳನ್ನು ರಸ್ತೆ ಬದಿಯಲ್ಲಿ ಇಟ್ಟು ಮಾರುತ್ತಾರೆ, ಅದೇ ಚಪ್ಪಲಿ ಹಾಗೂ ಶೂ ಗಳನ್ನು ಹವಾನಿಯಂತ್ರಿತ ಕೊಠಡಿಗಳಲ್ಲಿ ಮಾರುವುದನ್ನು ನೋಡುತ್ತಿದ್ದೇವೆ. ಈ ರೀತಿಯ ವ್ಯವಸ್ಥೆಯನ್ನು ತಪ್ಪಿಸಿ ರೈತರು ಬೆಳೆದ ಮಾಲುಗಳನ್ನು ಉತ್ತಮ ಸ್ಥಳದಲ್ಲಿ ಸಂಗ್ರಹಿಸಿ ಉತ್ತಮ ಬೆಲೆ ದೊರಕುವಂತಾಗಬೇಕಾಗಿದೆ ಎಂದು ಹೇಳಿದರು.
ವಿವಿಧ ಗುಡಿ ಕೈಗಾರಿಕೆಗಳಲ್ಲಿ ಸಾಧನೆಗೈದ ಶ್ರೀಮತಿ ಜಯಶ್ರೀ ಹಿರೇಮಠ ಮತ್ತು ಶ್ರೀಮತಿ ಜಯಮ್ಮ ಬೆಣ್ಣಿ ಇವರು ಮಾತನಾಡಿ, ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲು ಕೃಷಿ ಇಲಾಖೆ ಅನೇಕ ರೀತಿಯ ತರಬೇತಿಗಳನ್ನು ಮತ್ತು ಮಾರ್ಗದರ್ಶನ ನೀಡಿದೆ. ಮಹಿಳೆಯರು ಆಹಾರ ಸಂಸ್ಕರಣೆಯಂತಹ ತರಬೇತಿಗಳನ್ನು ಪಡೆದು ಸ್ವಾವಲಂಬಿಗಳಾಗಿ ಬದುಕಲು ಕರೆ ನೀಡಿದರು. ನವ್ಹೆಂಬರ 22 ರಿಂದ 26 ರವರೆಗೆ ಐದು ದಿನಗಳ ಕಾಲ ತೋಂದಾರ್ಯ ಕಲ್ಯಾಣ ಮಂಟಪ, ಗದಗದಲ್ಲಿ ಆಹಾರ ಸಾಮಗ್ರಿಗಳ ವಸ್ತು ಪ್ರದರ್ಶನ ಏರ್ಪಡಿಸಿದ್ದು ಅದರ ಉಪಯೋಗವನ್ನು ಪಡೆದುಕೊಳ್ಳಲು ಸಲಹೆ ನೀಡಿದರು.
ಬಸವರಾಜ ನಾವಿ, ಪ್ರಗತಿಪರ ರೈತರು ಮಾತನಾಡಿ ಸಮಗ್ರ ಕೃಷಿ ಹಾಗೂ ಸಾವಯವ ಕೃಷಿ ಒತ್ತು ನೀಡಿ. ಮಹಿಳೆಯರು ಇವತ್ತು ಕೃಷಿ ಚಟುವಟಿಕೆಗಳನ್ನು ಸ್ವತಃ ತಾವೇ ಮಾಡಿಕೊಂಡು ಉತ್ತಮ ಬದುಕನ್ನು ನಡೆಸುತ್ತಿದ್ದ ಹಲವಾರು ಉದಾಹರಣೆಗಳು ನೋಡಬಹುದೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ಸಿ ಬಿ ಬಾಲರೆಡ್ಡಿ, ಜಂಟಿ ಕೃಷಿ ನಿದರ್ೇಶಕರು, ಗದಗ ರವರು ಮಾತನಾಡಿ ಜಗತ್ತಿನಲ್ಲಿ ಯಾರು ಹಸಿವಿನಿಂದ ಬಳಲಬಾರದು ಹಾಗೂ ಸಾಯಬಾರದು. ಅಂದರೇ, ಎಲ್ಲರಿಗೂ ಸರಿಸಮನಾಗಿ ಪೌಷ್ಠಿಕಾಂಶಗಳುಳ್ಳ ಆಹಾರ ದೊರಕುವಂತಾಗಬೇಕು. ಮಹಿಳೆಯರು ಸ್ತ್ರೀ ಶಕ್ತಿ ಗುಂಪುಗಳನ್ನು ರಚನೆ ಮಾಡಿ ವಿವಿಧ ಕೌಶಲ್ಯಾಭಿವೃದ್ಧ ಕಾರ್ಯಗಳನ್ನು ಮಾಡಿ ಮುಖ್ಯವಾಹಿನಿಗೆ ಬರಲು ತಿಳಿಸುತ್ತಾ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಅನೇಕ ಸೌಲಬ್ಯಗಳಿದ್ದು, ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಕರೆ ನೀಡಿದರು.
ಕಾರ್ಯಕ್ರಮವನ್ನು ನಿಶಾಂತ ಬಂಕಾಪೂರ, ಉಪಯೋಜನಾ ನಿದರ್ೇಶಕರು, ಆತ್ಮ ಯೋಜನೆ, ಗದಗ ಇವರು ನಿರೂಪಣೆ ಮಾಡಿದರು ಹಾಗೂ ಬಸವಂತಪ್ಪ ಹಾಲವರ, ತಾಲೂಕು ತಾಂತ್ರಿಕ ವ್ಯವಸ್ಥಾಪಕರು, ನರಗುಂದ ಇವರು ವಂದನಾರ್ಪಣೆಯನ್ನು ಮಾಡಿದರು. ಕಾರ್ಯಕ್ರಮದಲ್ಲಿ ಗದಗ ಜಿಲ್ಲೆಯ ಎಲ್ಲ ತಾಲೂಕುಗಳಿಂದ ನೂರಾರು ರೈತ/ರೈತ ಮಹಿಳೆಯರು ಭಾಗವಹಿಸಿದ್ದರು.