ಬಳ್ಳಾರಿ,ಜು.18: ಬಳ್ಳಾರಿ ತಾಲ್ಲೂಕಿನಲ್ಲಿ ಕನರ್ಾಟಕ ರೈತ ಸುರಕ್ಷ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ರೈತರ ಬೆಳೆಯುವ ಮುಂಗಾರು ಹಂಗಾಮಿನಲ್ಲಿ ಗ್ರಾಮ ಪಂಚಾಯತಿ ಮಟ್ಟಕ್ಕೆ ಭತ್ತ, ಹೋಬಳಿ ಮಟ್ಟಕ್ಕೆ ಜೋಳ, ತೊಗರಿ, ನವಣೆ, ನೆಲಗಡಲೆ, ಸೂರ್ಯಕಾಂತಿ, ಹತ್ತಿ, ಹುರಳಿ, ಕೆಂಪು ಮೆಣಸಿನಕಾಯಿ, ಸಜ್ಜೆ, ಬೆಳೆಗಳನ್ನು ವಿಮೆಗೆ ಒಳಪಡಿಸಲಾಗಿದ್ದು ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಬೇಕು ಎಂದು ಸಹಾಯಕ ಕೃಷಿ ನಿದರ್ೇಶಕ ಹುಸೇನ್ಸಾಬ್ ಅವರು ಕೋರಿದ್ದಾರೆ. ಇದರಿಂದ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ವಿಮೆ ಮಾಡಿಸಿದ ಬೆಳೆಗಳಿಗೆ ಸುರಕ್ಷತೆಯನ್ನು ಒದಗಿಸಿ, ರೈತರು ಕಟ್ಟಿದ ಬೆಳೆ ವಿಮೆಯಾನುಸಾರವಾಗಿ ಪರಿಹಾರವನ್ನು ನೀಡಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ಈ ಯೋಜನೆಯು ಬೆಳೆ ಸಾಲ ಪಡೆದ ರೈತರಿಗೆ ಕಡ್ಡಾಯವಾಗಿದ್ದು, ಬೆಳೆ ಸಾಲ ಪಡೆಯದ ರೈತರು ಸ್ವಇಚ್ಛೆಯಿಂದ ಸಂಬಂಧಿಸಿದ ಬ್ಯಾಂಕುಗಳಲ್ಲಿ ಅಜರ್ಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿಯನ್ನು ನೀಡತಕ್ಕದ್ದು ಎಂದು ಅವರು ತಿಳಿಸಿದ್ದಾರೆ.
ಬೆಳೆ ವಿಮೆ ಯೋಜನೆಯನ್ನು ಬಳ್ಳಾರಿ ಜಿಲ್ಲೆಯಲ್ಲಿ ರಿಲಾಯನ್ಸ್ ಜನರಲ್ ಇನ್ಸುರೆನ್ಸ್ ವಿಮಾ ಸಂಸ್ಥೆ ಅನುಷ್ಠಾನಗೊಳಿಸುತ್ತಿದೆ ಎಂದು ತಿಳಿಸಿರುವ ಅವರು ಹೆಚ್ಚಿನ ಮಾಹಿತಿಗಾಗಿ ರೈತರು ಸಮೀಪದ ಬ್ಯಾಂಕ್/ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪಕರ್ಿಸಬಹುದು ಎಂದು ಹೇಳಿದ್ದಾರೆ. ಬೆಳೆ ವಿಮೆ ಮಾಡಿಸಲು ವಿವಿಧ ಬೆಳೆಗಳಿಗೆ ಕೊನೆಯ ದಿನಾಂಕಗಳು ಇಂತಿವೆ: ಆಗಸ್ಟ್ 14-ಭತ್ತ,ಹುರಳಿ,ತೊಗರಿ(ಮ.ಅ)ಮತ್ತು ಸಜ್ಜೆ, ಜು.31-ಮುಸುಕಿನ ಜೋಳ, ತೊಗರಿ(ನೀ),ಕೆಂಪು ಮೆಣಸಿನಕಾಯಿ,ಹತ್ತಿ ಮತ್ತು ಸೂರ್ಯಕಾಂತಿ. ಪ್ರತಿ ಎಕರೆಗೆ ರೈತರು ಕಟ್ಟಬೇಕಾದ ವಿಮಾ ಕಂತಿನ ವಿವರ: ಭತ್ತ 696 ರೂ, ಮುಸುಕಿನ ಜೋಳ (ನೀರಾವರಿ) 478, ಮುಸುಕಿನ ಜೋಳ (ಮಳೆ ಆಶ್ರಿತ) 405, ಜೋಳ (ನೀರಾವರಿ) 324, ಜೋಳ (ಮಳೆ ಆಶ್ರಿತ) 275, ಸಜ್ಜೆ (ನೀರಾವರಿ) 308, ಸಜ್ಜೆ (ಮಳೆ ಅಶ್ರಿತ) 235, ನವಣೆ (ಮಳೆ ಅಶ್ರಿತ) 219, ತೊಗರಿ (ನೀರಾವರಿ) 340, ತೊಗರಿ (ಮಳೆ ಆಶ್ರಿತ) 340, ಹುರಳಿ (ಮಳೆ ಆಶ್ರಿತಾ) 146, ಸೂರ್ಯಕಾಂತಿ (ನೀರಾವರಿ) 340, ಸೂರ್ಯಕಾಂತಿ (ಮಳೆ ಆಶ್ರಿತ) 283, ಶೇಂಗಾ (ನೀರಾವರಿ) 461, ಶೇಂಗಾ (ಮಳೆ ಆಶ್ರಿತ) 372, ಹತ್ತಿ (ನೀರಾವರಿ) 542, ಹತ್ತಿ (ಮಳೆ ಆಶ್ರಿತ) 248, ಕೆಂಪು ಮೆಣಸಿನಕಾಯಿ (ನೀರಾವರಿ) 777, ಕೆಂಪು ಮೆಣಸಿನಕಾಯಿ (ಮಳೆ ಆಶ್ರಿತ) 583.