ಲೋಕದರ್ಶನ ವರದಿ
ಅಥಣಿ 11: ವಿದ್ಯಾಥರ್ಿಗಳಿಂದು ಮೊಬೈಲ್ ಗೀಳನ್ನು ಅತಿಯಾಗಿಸಿಕೊಂಡು ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಿರುವುದು ಶ್ರೇಯಸ್ಕರವಲ್ಲ. ಅವರು ಪುಸ್ತಕದ ವಿದ್ಯೆಯನ್ನು ಮಸ್ತಕಕ್ಕೆ ತುಂಬಿಕೊಂಡು ತಮ್ಮ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕೆಂದು ಹಾಸ್ಯ ಸಾಹಿತಿ ರವಿ ಭಜಂತ್ರಿ ಹೇಳಿದರು.
ಅವರು ಕೆ.ಎಲ್.ಇ. ಸಂಸ್ಥೆಯ ಎಸ್.ಎಸ್.ಎಮ್.ಎಸ್. ಪದವಿ ಪೂರ್ವ ಮಹಾವಿದ್ಯಾಲಯದ 2019-20ನೇ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಮತ್ತು ದ್ವಿತೀಯ ಪದವಿ ಪೂರ್ವ ವಿದ್ಯಾಥರ್ಿಗಳ ಬೀಳ್ಕೊಡುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು ಮನಸ್ಸನ್ನು ಮೃಗಿಯವಾಗಿಸಿಕೊಳ್ಳದೇ ಹದಿಹರೆಯದ ವಯಸ್ಸನ್ನು ಹದವಾಗಿಸಿಕೊಂಡು ವಿವೇಕಾನಂದ, ಅಬ್ದುಲ್ ಕಲಾಮರಂತೆ ದೇಶ ಸೇವೆ ಮಾಡಿ ಸಾರ್ಥಕತೆಯ ಬದುಕನ್ನು ಬಾಳಬೇಕೆಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯ ನ್ಯಾಯವಾದಿ ಎಚ್.ಆರ್. ಚಮಕೇರಿ ಮಾತನಾಡಿ, ವಿದ್ಯಾಥರ್ಿಗಳು ವಿದ್ಯಾಭ್ಯಾಸ ಹಾಗೂ ಜೀವನವನ್ನು ತಪಸ್ಸನ್ನಾಗಿಸಿಕೊಳ್ಳಬೇಕು, ತಪಸ್ಸೇ ಸಾಧನೆಗೆ ಮೂಲ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸ್ಪಧರ್ೆಗಳಲ್ಲಿ ವಿಜೇತರಾದ ವಿದ್ಯಾಥರ್ಿಗಳಿಗೆ ಬಹುಮಾನ ವಿತರಿಸಲಾಯಿತು. 2018-19ನೇ ವಾಷರ್ಿಕ ಪರೀಕ್ಷೆಯಲ್ಲಿ ಕನ್ನಡ ವಿಷಯಕ್ಕೆ 100 ಕ್ಕೆ 98 ಅಂಕ ಗಳಿಸಿದ ಅಮೀತ ಪಾಟೀಲ, ವ್ಯವಹಾರ ಅಧ್ಯಯನ ವಿಷಯದಲ್ಲಿ 100 ಕ್ಕೆ 100 ಅಂಕ ಗಳಿಸಿದ ಪವಾಡಿ ಹವಾಲ್ದಾರ, ರಾಜ್ಯಶಾಸ್ತ್ರ ವಿಷಯದಲ್ಲಿ 100 ಕ್ಕೆ 100 ಅಂಕ ಗಳಿಸಿದ ಅಂಜಲಿ ಜಂಬಗಿ ಇವರನ್ನು ಸನ್ಮಾನಿಸಲಾಯಿತು. ವಿದ್ಯಾಥರ್ಿಗಳು ತಮ್ಮ ಅನಿಸಿಕೆ ಹಂಚಿಕೊಂಡರು. ವೇದಿಕೆಯ ಮೇಲೆ ಕನ್ನಡ ಅಧ್ಯಾಪಕರಾದ ಡಾ. ಎಸ್.ಎಮ್. ಜನಗೌಡ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ವಿದ್ಯಾಥರ್ಿನಿಯರು ಸ್ವಾಗತ ಗೀತೆ ಹಾಡಿದರು, ಪ್ರಾಚಾರ್ಯ ಡಾ. ಆರ್.ಎಫ್. ಇಂಚಲ ಸ್ವಾಗತಿಸಿ ಪರಿಚಯಿಸಿದರು. ಡಾ. ವಿಜಯ ಕಾಂಬಳೆ ವರದಿ ವಾಚಿಸಿದರು. ಪ್ರೊ. ಸ್ಮಿತಾ ಪಾಟೀಲ, ಪ್ರೊ. ಸಂಜೋತಾ ಜನಜ ಬಹುಮಾನ ವಿತರಣೆ ನಡೆಸಿಕೊಟ್ಟರು. ಡಾ. ಶ್ರೀಮತಿ ಆರ್.ಎನ್. ಇನಾಮದಾರ ನಿರೂಪಿಸಿದರು. ಪ್ರೊ. ಕೆ.ಎಸ್. ಚಂಡಿ ವಂದಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಎಲ್ಲ ಬೋಧಕ/ಬೋಧಕೇತರ ಸಿಬ್ಬಂದಿ ವಿದ್ಯಾಥರ್ಿ/ನಿಯರು ಉಪಸ್ಥಿತರಿದ್ದರು.