ಮಹಾಲಿಂಗಪುರ 05: ಸೋಮವಾರ ಸ್ಥಳೀಯ ಡಾ.ಎಚ್.ಆರ್.ಎಚ್.ಎಂ.ಪಿ ಸಂಸ್ಥೆಯ ಗಾಯತ್ರಿ ದೇವಿ ಪ.ಪೂ.ಕಾಲೇಜಿನಲ್ಲಿ ಹಮ್ಮಿಕೊಂಡ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಡಾ.ಯು.ಎಸ್. ವನಹಳ್ಳಿ ಮಾತನಾಡಿ, ಗುರು ಒಬ್ಬನೆ ಇದ್ದರೂ ಶಿಷ್ಯರ ಗುಣಧರ್ಮಗಳು ಬೇರೆ-ಬೇರೆಯಾಗಿರುತ್ತವೆ. ಶಿಕ್ಷಣವೆಂದರೆ ಕಲಿಕೆಯ ಇತಿಹಾಸದ ನೋವು ನಲಿವು ಅರಿತುಕೊಂಡು ಭವಿಷ್ಯತ್ತಿನಲ್ಲಿ ಸಚ್ಚಾರಿತ್ರಿಕ ನಡವಳಿಕೆಗಳನ್ನು ಅಳವಡಿಸಿಕೊಂಡಾಗ ಮಾತ್ರ ವಿದ್ಯಾರ್ಥಿ ಕಾಲದ ಹಾಗೂ ವರ್ತಮಾನದ ಜೀವನ ಸಾರ್ಥಕವಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬನಹಟ್ಟಿಯ ಎಸ್ ಟಿ ಸಿ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಪ್ರೊ.ವ್ಹಿ ವೈ ಪಾಟೀಲ ಮಾತನಾಡಿ ವಿದ್ಯಾರ್ಥಿಗಳ ಓದು,ಬರಹ ಕೇವಲ ಪುಸ್ತಕದಲ್ಲಿ ದಾಖಲಾಗದೆ ಮಸ್ತಕದಲ್ಲಾದರೆ ಅತ್ಯುತ್ತಮ ವಿದ್ಯಾಥರ್ಿಯಾಗಲು ಸಾಧ್ಯ. ನಿರಂತರ ಪ್ರಯತ್ನಗಳಿಂದ ಸಾಧಕನಾಗಿ ನರನು ನಾರಾಯಣ ಆಗಬಹುದು. ವಿದ್ಯೆಯು ಸಾಧಕನ ಸ್ವತ್ತಾಗಿದೆ ಎಂದು ಹೇಳಿದರು.
ಪ್ರಾಚಾರ್ಯ ಪ್ರೊ ಬಿ ಎಸ್ ನೇಗಿನಾಳ ಪ್ರಾಸ್ತಾವಿಕವಾಗಿ ಹಾಗೂ ಉಪನ್ಯಾಸಕ ಆರ್.ಎಸ್.ಪೂಜಾರಿ ಮಾತನಾಡಿದರು. ವ್ಹಿ ಎಂ ಕಡ್ಲಿ,ಎಚ್.ಬಿ.ಕರೋಶಿ ಉಪಸ್ಥಿತರಿದ್ದು ಸಿ ಆರ್ ಜಂಬಗಿ ಪ್ರಾಥರ್ಿಸಿ ಎಮ್.ಜಿ.ಮೇಟಿ ಸ್ವಾಗತಿಸುವುದರೊಂದಿಗೆ ಎಚ್.ಎಮ್.ಕುಂಬಾರ ನಿರೂಪಿಸಿದರು. ವಿದ್ಯಾಥರ್ಿ ಗೋವಿಂದ ಹಡಪದ ವಂದಿಸಿದರು.