10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ

ಲೋಕದರ್ಶನ ವರದಿ

ಕಾಗವಾಡ 01: ವಿದ್ಯಾರ್ಥಿಗಳು ಪಾಠದೊಂದಿಗೆ ಆಟದಲ್ಲಿಯೂ ಆಸಕ್ತಿ ವಹಿಸಬೇಕು. ಶೇಡಬಾಳದ ಸನ್ಮತಿ ವಿದ್ಯಾಲಯದ ಮರಾಠಿ ವಿಭಾಗದಲ್ಲಿ 9ನೇ ತರಗತಿ ಓದುತ್ತಿರುವ ಪವನ್ ಪಾಂಡುರಂಗ ಗುರವ್ ಈ ವಿದ್ಯಾರ್ಥಿ  ದೇಶದ ಪ್ರಧಾನಿ ಘೋಷಣೆ ಮಾಡಿದ "ಖೆಲೋ ಇಂಡಿಯಾ ಖೆಲೋ" ಇದರಲ್ಲಿ ಗ್ರೀಕೋ ರೋಮನ್ ಕುಸ್ತಿ ತರಬೇತಿ ಪಡೆಯಲು ಆಯ್ಕೆಯಾಗಿದ್ದಾನೆ. 

ಪ್ರತಿವರ್ಷ 8 ಲಕ್ಷ ರೂ.ಗಳಂತೆ 5 ವರ್ಷಗಳಲ್ಲಿ 40 ಲಕ್ಷ ರೂ. ಅನುದಾನ ಪಡೆಯಲು ಅರ್ಹವಾಗಿದ್ದಾನೆ. ಇದು ಈ ಸಂಸ್ಥೆಗೆ ಅಷ್ಟೇ ಅಲ್ಲಾ. ನಮ್ಮ ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆಯೆಂದು ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎಸ್.ಜೋಡಗೇರಿ ಹೇಳಿದರು.

ಶನಿವಾರ ರಂದು ಸನ್ಮತಿ ಶಿಕ್ಷಣ ಸಂಸ್ಥೆಯ 10ನೇ ತರಗತಿ ವಿದ್ಯಾಥರ್ಿಗಳ ಬಿಳ್ಕೋಡುವ ಸಮಾರಂಭ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮ ನಿಮಿತ್ಯ ಬಿಇಒ ಎ.ಎಸ್.ಜೋಡಗೇರಿಗಳು ಆಗಮಿಸಿ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವಾಗ ಹೇಳಿದರು.

ಪವನ್ ಪಾಂಡುರಂಗ ಗುರವ್ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದು. ಇನ್ನೊಬ್ಬ ಅಂಗವಿಕಲ ವಿದ್ಯಾರ್ಥಿ  ಶಿವಾಂಗ್ ಚೌಗುಲೆ ಈ ವಿದ್ಯಾಥರ್ಿ ರಾಜ್ಯ ಮಟ್ಟದ ಉದ್ದು ಜಿಗೀತ ಹಾಗೂ ಓಟದ ಸ್ಪಧರ್ೆಯಲ್ಲಿ 2ನೇ ಸ್ಥಾನ ಪಡೆದಿದ್ದಾನೆ. ರಾಜ್ಯದ ಮಟ್ಟದ ಪ್ರಬಂಧ ಸ್ಪಧರ್ೆಯಲ್ಲಿ ಶಾಲೆಯ ಶಿಕ್ಷಕ ಎಚ್.ಪಿ.ನಾಯಿಕ ಭಾಗವಹಿಸಿದ್ದರು. ರಾಜ್ಯದ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಶಾಲೆಯ ವಿದ್ಯಾರ್ಥಿ  ಸೃಷ್ಠಿ ಶಿವಕುಮಾರ ಅನ್ನಿಗೇರಿ ಇವಳ ಭಾಷಣ, ತನುಜಾ ಈರಾಜ್ ಭಜನ್ ಗಾಯಣ, ಪ್ರಾಚಿ ನರಸಗೌಡರ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ಕೀರ್ತಿ  ತಂದಿದ್ದಾರೆ ಎಂದು ಗಣಿತ ವಿಷಯದ ಶಿಕ್ಷಕರಾದ ಎಸ್.ಡಿ.ಮುತಾಲಿಕ ವರ್ಷದ ವರದಿಯಲ್ಲಿ ಮಾಹಿತಿ ನೀಡಿದರು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೃತಿಕಾ ಗಣೆ 98.5, ಲಕ್ಷ್ಮೀ ವಸಂತ ಖೋತ ಮತ್ತು ಶಿಲ್ಪಾ ಬಡಿಗೇರಿ 97ರಷ್ಟು ಅಂಕ ಪಡೆದು ತಾಲೂಕಾ ಮತ್ತು ಜಿಲ್ಲಾ ಮಟ್ಟದಲ್ಲಿ ಸ್ಥಾನ ಪಡೆದುಕೊಂಡಿದ್ದರು. 

ಶಾಲೆಯ ಮುಖ್ಯಾಧ್ಯಾಪಿಕೆ ಎಂ.ಎನ್.ಕಾಳೆನಟ್ಟಿ ಇವರನ್ನು ಶಾಲೆಯ ಅತ್ಯುತ್ತಮ ಬೆಳೆವಣಿಗೆಗಾಗಿ ಸಕರ್ಾರದ ಜಿಲ್ಲಾ ಆದರ್ಶ ಪ್ರಶಸ್ತಿ ಜಿಲ್ಲಾ ಶಿಕ್ಷಣಾಧಿಕಾರಿಗಳು ನೀಡಿ ಗೌರವಿಸಿದ್ದಾರೆ. ಇದೇ ರೀತಿ ಅಭಿಯಂತ ಮಂದಾರ ಕುಂದರ್ಗಿ  ಇವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಿದರು.

ಇಂತಹ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶಿಕ್ಷಣಾಧಿಕಾರಿ ಎ.ಎಸ್.ಜೋಡಗೇರಿ, ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಆರ್.ವ್ಹಿ.ಸಂಗೋರಾಮ, ಬೆಂಗಳೂರಿನ ಅಭಿಯಂತ ಮಂದಾರ ಕುಂದಗರ್ಿ, ಎಸ್.ಎಸ್.ಎಲ್.ಸಿ. ವಿಭಾಗದ ನೋಡಲ ಅಧಿಕಾರಿ ಎಸ್.ಬಿ.ಪಾಟೀಲ, ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ವಿನೋದ ಬರಗಾಲೆ, ಬಿ.ಡಿ.ಮಾಲಗಾಂವೆ, ನೇಮಗೊಂಡಾ ಘೇನಾಪ್ಪಗೊಳ, ಅಜೀತ ಸವದತ್ತಿ, ಅಣ್ಣಾಗೌಡಾ ಪಾಟೀಲ, ಮಹಾವೀರ ಪಾಟೀಲ, ಅಜೀತ ನಾಂದ್ರೆ, ಮಾಜಿ ಜಿಪಂ ಸದಸ್ಯ ಮಾಕನ್ನವರ, ಸಹ ಶಿಕ್ಷಕರು ಉಪಸ್ಥಿತರಿದ್ದರು.