ಬೆಂಗಳೂರು/ಚೆನ್ನೈ, ಜ 09 , ತಮಿಳು ಚಿತ್ರರಂಗದ ಸೂಪರ್‍ಸ್ಟಾರ್ ರಜನಿಕಾಂತ್ ಅಭಿನಯದ ‘ದರ್ಬಾರ್’ ತೆರೆಕಂಡಿದ್ದು, ಅಭಿಮಾನಿಗಳು ಸಂಭ್ರಮಿಸಿದ್ದಾರೆಗುರುವಾರ ಬೆಳಗಿನ ಜಾವ 4 ಗಂಟೆಯಿಂದಲೇ ಬಹುತೇಕ ಥಿಯೇಟರ್ ಗಳು, ಮಲ್ಟಿಪ್ಲೆಕ್ಸ್ ಗಳು ಭರ್ತಿಯಾಗಿ, ತಲೈವಾ ದರ್ಬಾರ್ ವೀಕ್ಷಿಸಿರುವ ಪ್ರೇಕ್ಷಕರು ಫಿದಾ ಆಗಿದ್ದಾರೆ.-:7 ಸಾವಿರ ಸ್ಕ್ರೀನ್‍ಗಳಲ್ಲಿ ಪ್ರದರ್ಶನ:- ಎ ಆರ್ ಮುರುಗದಾಸ್ ನಿರ್ದೇಶನದ ಈ ಚಿತ್ರದಲ್ಲಿ ರಜನಿ ಪೊಲೀಸ್ ಆಫೀಸರ್ ಆಗಿ ಅಭಿನಯಿಸಿದ್ದು, ಎರಡು ದಶಕದ ಬಳಿಕ ಖಾಕಿ ತೊಟ್ಟಿದ್ದಾರೆ. ಬಿಡುಗಡೆ ವಿಚಾರದಲ್ಲಿ ವಿಶೇಷವಾದ ದಾಖಲೆ ಬರೆದಿರುವ ಚಿತ್ರ ಅತಿ ಹೆಚ್ಚು ಸ್ಕ್ರೀನ್ ನಲ್ಲಿ ಪ್ರದರ್ಶನಗೊಳ್ಳುತ್ತಿದೆ 7000 ಸಾವಿರ ಸ್ಕ್ರೀನ್ ನಲ್ಲಿ ದರ್ಬಾರ್ ಇದೇ ಮೊದಲ ಸಲ ರಜನಿಕಾಂತ್ ಸಿನಿಮಾ 7 ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ತೆರೆಕಾಣುತ್ತಿದೆ. ಇದಕ್ಕೂ ಮೊದಲು ಯಾವ ಚಿತ್ರವೂ ಇಷ್ಟು ದೊಡ್ಡ ಮಟ್ಟದ ಬಿಡುಗಡೆ ಕಂಡಿರಲಿಲ್ಲ. ಜಗತ್ತಿನಾದ್ಯಂತ 7 ಸಾವಿರ ಸ್ಕ್ರೀನ್, ನಮ್ಮ ದೇಶದಲ್ಲಿ 4 ಸಾವಿರ ಸ್ಕ್ರೀನ್ ಗಳಲ್ಲಿ ಬರ್ತಿದೆ.
ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ತೆರೆಕಂಡಿದ್ದು, ತಮಿಳುನಾಡು, ಕರ್ನಾಟಕ, ಆಂಧ್ರ-ತೆಲಂಗಾಣ ಹಾಗೂ ಮುಂಬೈನಲ್ಲಿ ಕ್ರೇಜ್ ಸೃಷ್ಟಿಸಿದೆ. ಚೆನ್ನೈನ ಮಾಯಾಜಾಲ್ ಮಲ್ಟಿಪ್ಲೆಕ್ಸ್ ನಲ್ಲಿ ಮೊದಲ ದಿನವಾದ ಇಂದು 87 ಶೋ ನಡೆಯುತ್ತಿದೆ. ಪ್ರತಿ 5 ನಿಮಿಷ ಹಾಗೂ 10 ನಿಮಿಷಕ್ಕೂ ಒಂದೊಂದು ಶೋ ಇದೆ. ಮಾಯಾಜಾಲ್ ಮಲ್ಟಿಪ್ಲೆಕ್ಸ್ ನಲ್ಲಿ ಒಟ್ಟು 16 ಸ್ಕ್ರೀನ್ ಗಳಿದ್ದು, ಎಲ್ಲ ಸ್ಕ್ರೀನ್ ಗಳಲ್ಲೂ ದರ್ಬಾರ್ ಸಿನಿಮಾ ಪ್ರದರ್ಶನವಾಗುತ್ತಿದೆ. ಸಿನಿಮಾ ವೀಕ್ಷಿಸಿರುವ ಪ್ರೇಕ್ಷಕರು ಸಂಕ್ರಾಂತಿ ಹಬ್ಬಕ್ಕೂ ಮೊದಲೇ ಸುಗ್ಗಿಯ ಸವಿಯುಂಡಂತೆ ಖುಷಿ ಪಟ್ಟಿದ್ದಾರೆ.