ರನ್ನ ಬೆಳಗಲಿ 02: ಪಟ್ಟಣದ ಮಹಾಕವಿ ರನ್ನ ವೃತ್ತದಲ್ಲಿ ಶರವೇಗದ ಸರದಾರ, ಮಹಾರಾಷ್ಟ್ರ ರಾಜ್ಯದ ರಾಜ್ಯಮಟ್ಟದ ನಿಮಿಷದ ಬಂಡಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿಕೊಂಡು ಹಿಂದ್ ಕೇಸರಿ ರಾಜಾ ಬಿರುದು ಪಡೆದು, ಎಲ್ಲಾ ಸ್ಪರ್ಧೆಳಲ್ಲೂ ಕೂಡ ಪ್ರಥಮ ದ್ವಿತೀಯ ಸ್ಥಾನ ಪಡೆಯುತ್ತಾ ಕೋಟಿ ಮೊತ್ತದ ಬಹುಮಾನ ಗೆದ್ದು ಕೊಟ್ಟ ಹಿಂದ್ ಕೇಸರಿ ರಾಜಾ ಎಂಬ ನಿಮಿಷ ಬಂಡಿಯ ಷರತ್ತಿನ ಎತ್ತು ಇತ್ತೀಚಿಗೆ ಅನಾರೋಗ್ಯ ದಿಂದ ಮರಣ ಹೊಂದಿದರ ಪ್ರಯುಕ್ತ ಷರತ್ತಿನ ಗೆಳೆಯರ ಬಳಗ ರನ್ನ ಬೆಳಗಲಿ ಆಶ್ರಯದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಜರಗಿತು.
ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಯೋಗ ಶಿಕ್ಷಕ ರಾಘವೇಂದ್ರ ನೀಲಣ್ಣವರ ನಮ್ಮ ಪಟ್ಟಣದಲ್ಲಿ ನಿಮಿಷ ಬಂಡಿಯ ಎತ್ತಿನಗಾಡಿ ಷರತ್ತಿಗೆ ಮನೆ ಮಾತಾಗಿರುವ ಶೇಖರ ಕಂಕಣವಾಡಿ ಅವರು ಮತ್ತು ಅವರ ಕುಟುಂಬದ ಸದಸ್ಯರು ವಿಶೇಷವಾಗಿ ಎತ್ತುಗಳ ಮೇಲೆ ಬಹಳಷ್ಟು ಕಾಳಜಿ ಉಳ್ಳವರು, ಕುದುರೆಗಳನ್ನು ಸಾಕುವುದರ ಜೊತೆಗೆ ಸ್ಪರ್ಧೆಯ ಎತ್ತುಗಳಿಗೆ ಉತ್ತಮ ತರಬೇತಿಯನ್ನು ನೀಡುವುದರ ಜೊತೆಗೆ ಊರಿನ ಘನತೆಯನ್ನು ಗ್ರಾಮೀಣ ಕ್ರೀಡೆಯಲ್ಲಿ ಹೆಚ್ಚಿಸಿದ್ದಾರೆ. ಅವರಿಗೆ ಊರಿನ ಪರವಾಗಿ ಅಭಿನಂದನೆ ಸಲ್ಲಿಸುವುದರ ಜೊತೆಗೆ ಸಾಂತ್ವಾನ ಹೇಳುವ ಸಮಯ ಇದಾಗಿದೆ ಪ್ರತಿ ಸ್ಪರ್ಧಾ ಕಣದಲ್ಲಿ ಕೂಡಾ ಪ್ರಥಮ ಸ್ಥಾನ, ದ್ವಿತೀಯ ಸ್ಥಾನ ಪಡೆದುಕೊಳ್ಳುತ್ತಾ ಕೋಟಿಗಿಂತಲೂ ಹೆಚ್ಚು ಬೆಲೆ ಬಾಳುವ ಬಹುಮಾನಗಳನ್ನು ಯಜಮಾನನಿಗೆ ನೀಡಿದ ಹಿಂದ್ ಕೇಸರಿ ರಾಜಾ ಇಂದು ಅನಾರೋಗ್ಯದಿಂದ ಮರಣ ಹೊಂದಿದೆ. ಕಂಕಣವಾಡಿ ಕುಟುಂಬ ಪರಿವಾರದ ಜೊತೆಗೆ ಷರತ್ತಿನ ಗೆಳೆಯರ ಬಳಗಕ್ಕೂ ಕೂಡಾ ಅತಿವ ದುಃಖ ಉಂಟಾಗಿದೆ. ಆ ದುಃಖವನ್ನು ಬರಿಸುವ ಶಕ್ತಿ ಭಗವಂತ ನೀಡಲಿ. ಮತ್ತೊಮ್ಮೆ ಹಿಂದ್ ಕೇಸರಿ ರಾಜಾ ಹುಟ್ಟಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾ, ಶ್ರದ್ಧಾಂಜಲಿ ಸಲ್ಲಿಸೋಣ ಎಂದು ತಿಳಿಸಿದರು.
ಸ್ಥಳೀಯರಾದ ಪ್ರವೀಣ ಪಾಟೀಲ, ಕರೆಪ್ಪ ಕುಂಬಾಳಿ, ಶ್ರೀಶೈಲ ದೊಡಹಟ್ಟಿ, ಮಂಜುನಾಥ ಗಾಣಿಗೇರ, ಬಸು ಕುಂಬಾಳಿ, ಕರೆಪ್ಪ ಹೊರಗಿನಮನಿ, ಲಕ್ಷ್ಮಣ ಹಂಚಿನಾಳ, ಶ್ರೀಶೈಲ ಒಂಟಗೋಡಿ, ಸತೀಶ ಕೊರಡ್ಡಿ, ಈರಣ್ಣ ಗಾಣಿಗೇರ, ಚನ್ನಪ್ಪ ಹೇಗಾಡಿ, ಮುತ್ತಪ್ಪ ದೊಡಹಟ್ಟಿ, ಶಂಕರ ಅಮಾತಿ ಮತ್ತು ಇನ್ನಿತರರು ಹಾಜರಿದ್ದರು.