ಖ್ಯಾತ ಸಂಗೀತಗಾರ ಪದ್ಮಶ್ರೀ ಡಾ ಆರ್ ಎ ಸತ್ಯನಾರಾಯಣ ನಿಧನ

ಮೈಸೂರು, ಜ 17:       ಖ್ಯಾತ ಸಂಗೀತಗಾರರಾದ, ಪದ್ಮಶ್ರೀ ಡಾ ಆರ್ ಎ ಸತ್ಯನಾರಾಯಣ ಅವರು ಗುರುವಾರ ರಾತ್ರಿ ನಗರದ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು. ಅವರು ಪುತ್ರ ಮತ್ತು ಮಗಳನ್ನು ಅಗಲಿದ್ದಾರೆ. ರಾಜ ಮನೆತನದ ಜಯಚಾಮರಾಜೇಂದ್ರ ಒಡೆಯರ್ ಅವರ ಆಸ್ಥಾನದಲ್ಲಿ ಕರ್ನಾಟಕ ಸಂಗೀತಗಾರರಾಗಿದ್ದ ರಾಮಯ್ಯ ಅವರ ಪುತ್ರ ಡಾ. ಸತ್ಯನಾರಾಯಣ ಅವರು ಸಂಗೀತಗಾರರ ಪರಂಪರೆಯನ್ನು ಮುಂದುವರೆಸಿದ್ದರು. ಪ್ರತಿಷ್ಠಿತ ಮಹಮಹೊಪಾದ್ಯಾಯ ಪ್ರಶಸ್ತಿ, ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ರತ್ನ ಪ್ರಶಸ್ತಿ, ವೀಣಾ ರಾಜಾರಾವ್ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳಿಗೆ ಸತ್ಯನಾರಾಯಣ್ ಅವರು ಭಾಜನರಾಗಿದ್ದರು. ಕೊನೆಯ ದಿನಗಳ ವರೆಗೂ ‘ಸಂಗೀತ ಸುಧಾಕರ’ ಎಂಬ ಪುಸ್ತಕವನ್ನು ಬರೆಯುತ್ತಿದ್ದ ತಮ್ಮ ತಂದೆಯವರು, ಅದನ್ನು ಪೂರ್ಣಗೊಳಿಸುವಂತೆ ನನಗೆ ಹೇಳಿದ್ದರು ಎಂದು ಸತ್ಯನಾರಾಯಣ್ ಅವರ ಪುತ್ರ ನಂದಕುಮಾರ್ ಹೇಳಿದ್ದಾರೆ. ಬೆಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕೆಂಗಲ್ ಗ್ರಾಮದ ಆಶ್ರಮದಲ್ಲಿ ಸತ್ಯನಾರಾಯಣ್ ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ನಡೆಯಲಿದೆ.