ಘಟಪ್ರಭಾ 26: ಸ್ಥಳೀಯ ಜೆಂಟ್ಸ್ ಗ್ರುಪ್ ಹಾಗೂ ಗೋಕಾಕದ ಗುಂಪು ಕಲಾವಿದರ ಬಳಗದ ಸಹಯೋಗದಲ್ಲಿ ಹಿಂದಿ ಚಿತ್ರ ರಂಗದ ಖ್ಯಾತ ಹಿನ್ನಲೆ ಗಾಯಕ ಮೊಹಮ್ಮದರಫಿ ಅವರ 95ನೇ ಜನ್ಮ ದಿನಾಚರಣೆ ನಿಮಿತ್ತ ಮಹಮ್ಮದರಫಿ ಅವರು ಹಾಡಿದ ಮದುರ ಗೀತೆಗಳ ಕಾರ್ಯಕ್ರಮ ಜರುಗಿತು.
ಇಲ್ಲಿನ ಮೃತ್ಯುಂಜಯ ಸಭಾ ಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಖ್ಯಾತ ಹಿನ್ನಲೆ ಗಾಯಕ ಮೊಹಮ್ಮದರಫಿ ಅವರು ಹಾಡಿದ ಮಧುರ ಗೀತೆಗಳನ್ನು ಗೋಕಾಕ ಗುಂಪು ಕಲಾವಿದರ ಬಳಗದ ಮುಖ್ಯಸ್ಥರಾದ ಕಾಡೇಶಕುಮಾರ ತಮ್ಮ ಸುಮಧುರ ಕಂಠದಿಂದ ಅನೇಕ ಹಾಡಿಗಳನ್ನು ಹಾಡಿ ಸಭಿಕರ ಮನ ತಣಿಸಿದರು.
ಜೆಂಟ್ಸ್ ಗ್ರುಪ್ ಅಧ್ಯಕ್ಷರಾದ ಡಾ. ವಿಲಾಸ ನಾಯಿಕವಾಡಿ ಮಾತನಾಡಿ, ಖ್ಯಾತ ಹಿನ್ನಲೆ ಗಾಯಕ ಮೊಹಮ್ಮದರಫೀ ಅವರು ನಮ್ಮ ದೇಶದ ಹೆಮ್ಮೆಯ ಗಾಯಕರಾಗಿದ್ದರು. ಇದೊಂದು ಅಪೂರ್ವ ಕಾರ್ಯಕ್ರಮ ಇಂತಹ ಕಾರ್ಯಕ್ರಮ ಜರಗುವದರಿಂದ ನಮ್ಮ ದೇಶದ ಕಲಾವಿದರ ಬಗ್ಗೆ ಮತ್ತು ಅವರ ಹಾಡು, ಜೀವನದ ಬಗ್ಗೆ ಯುವ ಪೀಳಿಗೆ ತಿಳಿಸಲು ಸಹಕಾರಿಯಾಗುತ್ತದೆ ಎಂದರು
ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು ಕಾರ್ಯಕ್ರಮ ಮಾಡಿದ್ದ ನಿಮಿತ್ಯ ಜೆಂಟ್ಸ್ ಗ್ರುಪ್ ಘಟಪ್ರಭಾ ಅಧ್ಯಕ್ಷರಾದ ಡಾ.ವಿಲಾಸ ನಾಯಿಕವಾಡಿಯವರಿಗೆ ಹಾಗೂ ಖಜಾಂಚಿ ಭೂಪಾಲ ಖೆಮಲಾಪೂರೆ ಅವರಿಗೆ ಅವಾರ್ಡ ಲಭಿಸಿದ್ದರಿಂದ ಅವರನ್ನು ಗ್ರುಪ್ ವತಿಯಿಂದ ಸತ್ಕರಿಸಲಾಯಿತು.
ಉಮಾ ದೊಡಮನಿ ಕಾರ್ಯಕ್ರಮ ನಿರೂಪಸಿ ವಂದಿಸಿದರು.