ಲೋಕದರ್ಶನ ವರದಿ
ಬಳ್ಳಾರಿ.25: ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ 69ನೇ ಸಂಸ್ಥಾಪನೆಯ ದಿನಾಚರಣೆಯನ್ನು ನಗರದ ಕೆ.ಎಸ್.ಆರ್.ಟಿ.ಸಿ. ಬಸ್ನಿಲ್ದಾಣದ ಹತ್ತಿರವಿರುವ ಶಾಖಾ ಕಚೇರಿಯಲ್ಲಿ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಡಾ.ಬಿ.ಕೆ.ಶ್ರೀನಿವಾಸಮೂತರ್ಿ ಅವರು ಮಾತನಾಡಿ ಕಳೆದ ಮೂರು-ನಾಲ್ಕು ದಶಕಗಳಿಂದ ಜಿಲ್ಲೆಯಲ್ಲಿ ಗಣನೀಯ ಸೇವೆಯನ್ನು ಸಲ್ಲಿಸುತ್ತಿದೆ ಎಂದು ಶ್ಲಾಘಿಸಿದರು ಮತ್ತು ಯುವಜನತೆಗೆ ಉತ್ತಮ ಸಮಾಜ ನಿಮರ್ಿಸಲು ದೈಹಿಕವಾಗಿ, ಮಾನಸಿಕವಾಗಿ ಹಾಗೂ ನೈತಿಕವಾಗಿ ಸದೃಢರಾಗಲು ಕರೆ ನೀಡಿದರು.
ಎಫ್.ಪಿ.ಎ.ಐ ಸಂಸ್ಥೆಯ ಕಾರ್ಯದಶರ್ಿಯಾದ ಟಿ.ಜಿ.ವಿಠ್ಠಲ್ ಇವರು ಮಾತನಾಡಿ, ಧನ್ವಂತರಿ ರಾಮರಾವ್ ಹಾಗೂ ಅವ್ವಾಬಾಯಿ ವಾಡಿಯಾ ಇವರ ಪರಿಶ್ರಮದ ಫಲವಾಗಿ 1949ರಲ್ಲಿ ಎಫ್.ಪಿ.ಎ.ಐ ಸಂಸ್ಥೆಯ ಸಂಸ್ಥಾಪನೆಗೊಂಡಿತು. ದೇಶಾದ್ಯಂತ 45 ಶಾಖೆಗಳನ್ನು ಹೊಂದಿದ್ದು, ಲೈಗಿಂಕ ಹಾಗೂ ಪ್ರಜನನ ಆರೋಗ್ಯ ಮತ್ತು ಹಕ್ಕುಗಳು ನಿಲುವಿನಲ್ಲಿ ಪ್ರತಿಪಾದಿಸುತ್ತ ಬಂದಿದೆ ಎಂದರು.
ಈ ಸಂದರ್ಭದಲ್ಲಿ ಶಾಖೆಯ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿದ ಹಾಗೂ ವಿವಿಧ ಹಂತಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಶ್ರೀಮತಿ ಮಾಯಾ ಪಿ.ಪಾಂಡುರಂಗರಾವ್ ಹಾಗೂ ಹಿರಿಯ ವೈದ್ಯಾಧಿಕಾರಿಗಳಾದ ಸೇವೆ ಸಲ್ಲಿಸಿದ ಡಾ.ಜಲಜಾಕ್ಷಿ ಮತ್ತು ಹಿರಿಯ ಸಿಬ್ಬಂದಿ ರತಿ ಕಪಾಡಿಯ ಅವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಯುವ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಹಾಗೂ ಎಫ್.ಪಿ.ಎ.ಐ ಸಂಸ್ಥೆಯ ಸಿಬ್ಬಂದಿ ವರ್ಗದವರು ಇದ್ದರು.