ಫಕ್ಕೀರಪ್ಪ ಗೋಡಿ ನಿವೃತ್ತಿ

ಧಾರವಾಡ.01: ಜಿಲ್ಲಾಧಿಕಾರಿಗಳ ವಸತಿಗೃಹದಲ್ಲಿ ತೋಟಗಾರನಾಗಿ ಸುಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸಿದ ಫಕ್ಕೀರಪ್ಪ ಗೋಡಿ ಸೇವಾ ನಿವೃತ್ತಿ ಹೊಂದಿದರು.. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಅವರನ್ನು ಸನ್ಮಾನಿಸಿದ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಫಕ್ಕೀರಪ್ಪ ಗೋಡಿ ಅವರು ಓರ್ವ ನಿಷ್ಠಾವಂತ ಮತ್ತು ಪ್ರಾಮಾಣಿಕ ನೌಕರರಾಗಿದ್ದಾರೆ. ಗಿಡ ಮರಗಳನ್ನು ತಮ್ಮ ಮಕ್ಕಳಂತೆ ಕಾಳಜಿ ವಹಿಸಿ ಪೋಷಿಸಿ ಬೆಳೆಸುವ ಅವರ ಗುಣದಿಂದಾಗಿ ಸುಮಾರು 17 ಎಕರೆ ವಿಸ್ತಾರವಿರುವ ಜಿಲ್ಲಾಧಿಕಾರಿಗಳ ವಸತಿ ಗೃಹದ ಆವರಣದಲ್ಲಿನ ಎಲ್ಲ ಗಿಡ ಮರಗಳು ನಳನಳಿಸುತ್ತಿವೆ. ಇವರ ನಿವೃತ್ತಿ  ಜೀವನ ಸುಖ ಸಂತೋಷದಾಯಕವಾಗಿರಲಿ ಎಂದು ಹಾರೈಸಿದರು. ತೋಟಗಾರಿಕೆ ಇಲಾಖೆಯ ಉಪನಿದರ್ೆಶಕ ಡಾ: ರಾಮಚಂದ್ರ ಮಡಿವಾಳರ ಇದ್ದರು.