ಕೊಪ್ಪಳ 04: ಯುವಕರಲ್ಲಿನ ಜಾನಪದ ಸಂಸ್ಕೃತಿಯನ್ನು ಉಳಿಸಲು ಇಂತಹ ಯುವ ಜನ ಮೇಳಗಳು ಸಹಕಾರಿಯಾಗಲಿವೆ ಎಂದು ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಚಂಡೂರು ಹನುಮಂತಗೌಡ ಪಾಟೀಲ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕೊಪ್ಪಳ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಇವರ ಸಂಯುಕ್ತಾಶ್ರಯದಲ್ಲಿ ಇಂದು (ಜ.04) ನಗರದ ಜಿಲ್ಲಾ ಕ್ರೀಡಾಂಗಣ ಆವರಣದಲ್ಲಿ ಹಮ್ಮಿಕೊಳ್ಳಲಾದ 2019-20ನೇಸಾಲಿನ ಕೊಪ್ಪಳ ಜಿಲ್ಲಾ ಮಟ್ಟದ ಯುವಜನಮೇಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂದಿನ ಯುವ ಜನತೆ ಜಾನಪದಗಳಂತಹ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಯುವಕರಲ್ಲಿನ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಯುವಜನಮೇಳ ಮುಖ್ಯ ವೇದಿಕೆಯಾಗಿದೆ. ಆದ್ದರಿಂದ ಇಂತಹ ಮೇಳಗಳು ಹೆಚ್ಚು-ಹೆಚ್ಚಾಗಿ ಹಮ್ಮಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಸದಸ್ಯ ಬಾಲಚಂದ್ರ ನಾಯಕ, ಖ್ಯಾತ ಭರತನಾಟ್ಯ ನೃತ್ಯಗಾತರ್ಿ ಅವನಿ ಗಂಗಾವತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿದರ್ೇಶಕ ಆರ್.ಜಿ.ನಾಡಗೀರ, ನಿವೃತ್ತ ಪ್ರಾಚಾರ್ಯರಾದ ಸಿ.ವಿ.ಜಡಿ, ಸಂಗೀತ ಶಿಕ್ಷಕ ಸದಾಶಿವ ಪಾಟೀಲ, ಹಿರಿಯ ಜಾನಪದ ಕಲಾವಿದ ಶರಣಪ್ಪ ವಡಗೇರಿ, ಯುವ ಪ್ರಶಸ್ತಿ ಪುರಸ್ಕೃತರಾದ ಮಂಜುನಾಥ ಗೊಂಡಬಾಳ, ಜಗದಯ್ಯ ಹಿರೇಮಠ, ರಾಕೇಶ ಕಾಂಬ್ಳೇಕರ್, ಶ್ರೀನಿವಾಸ ಕಂಟ್ಲಿ, ಬಸಯ್ಯ ಅಬ್ಬಿಗೇರಿಮಠ, ಲಲಿತಮ್ಮ ಹಿರೇಮಠ, ತಾಲೂಕು ಕ್ರೀಡಾಧಿಕಾರಿ ಶರಣಬಸವ ಬಂಡಿಹಾಳ, ಮಹಾಂತೇಶ ಜಾಲಿಗಿಡದ, ರಂಗನಾಥ ಕೋಳೂರು, ರಂಗಸ್ವಾಮಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ತಾಲೂಕುಗಳಿಂದ ಬಂದಂತಹ ಸ್ಪಧರ್ಾಳುಗಳು ಉಪಸ್ಥಿತರಿದ್ದರು, ಕಾರ್ಯಕ್ರಮದ ನಿರೂಪಣೆಯ್ನನು ಬಸವರಾಜ ಹನುಮಸಾಗರ ನಿರೂಪಿಸಿದರು. ಜಗದಯ್ಯ ಸಾಲಿಮಠ ವಂದಿಸಿದರು.