ಜಾತ್ರೆಗಳು ಸಾಮರಸ್ಯದ ಸಂಕೇತ: ಡಾ.ಪ್ರಭುಗೌಡ
Fairs are a symbol of harmony: Dr. Prabhugowda
ಜಾತ್ರೆಗಳು ಸಾಮರಸ್ಯದ ಸಂಕೇತ: ಡಾ.ಪ್ರಭುಗೌಡ
ದೇವರಹಿಪ್ಪರಗಿ 11: ಜಾತ್ರೆಗಳು ನಾಗರಿಕರಲ್ಲಿ ಭಾವನಾತ್ಮಕ ಗುಣಗಳನ್ನು ಬೆಳೆಸುತ್ತವೆ. ಯಾವುದೇ ಭೇದ ಭಾವವಿಲ್ಲದೆ ಎಲ್ಲರೂ ಒಂದಡೆ ಸೇರಿ ಹಬ್ಬ ಆಚರಿಸುವುದು ಸಾಮರಸ್ಯದ ಸಂಕೇತವಾಗಿದೆ ಎಂದು ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರು ಹಾಗೂ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಪ್ರಭುಗೌಡ ಲಿಂಗದಳ್ಳಿ (ಚಬನೂರ) ಹೇಳಿದರು.
ಪಟ್ಟಣದ ಮಲ್ಲಯ್ಯ ದೇವಸ್ಥಾನದ ಆವರಣದಲ್ಲಿ ಶುಕ್ರವಾರದಂದು ಹಮ್ಮಿಕೊಂಡ ಜಾತ್ರಾ ಕಮಿಟಿ ಸದಸ್ಯರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಾತ್ರೆಯಲ್ಲಿ ಜಾತಿ, ವರ್ಗ ಇತ್ಯಾದಿ ಭೇದವಿಲ್ಲದೆ ಜನರು ಒಂದೆಡೆ ಸೇರಿ ಸಂಭ್ರಮಿಸುವ ಪರಿಯೇ ಅನನ್ಯ. ಮಲ್ಲಯ್ಯ ರಾವುತರಾಯ ಜಾತ್ರಾ ಮಹೋತ್ಸವ ಯಾವುದೇ ಸಮಸ್ಯೆಯಿಲ್ಲದೆ ಯಶಸ್ವಿಯಾಗಿದೆ ಇದಕ್ಕೆ ಭಕ್ತರು, ತಾಲೂಕು ಆಡಳಿತ ಹಾಗೂ ದೇವಸ್ಥಾನದ ಆಡಳಿತ ಮಂಡಳಿಮುಖಂಡರುಗಳಾದ ಕಾಶಿನಾಥ ಸಾಲಕ್ಕಿ ಹಾಗೂ ಚಿನ್ಮಯಿ(ಅಪ್ಪು).ಎಸ್.ಕೋರಿ ಅವರು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರನ್ನು ಸನ್ಮಾನಿಸುವ ಮೂಲಕ ದೇವಸ್ಥಾನದ ಅಭಿವೃದ್ಧಿ ಹಾಗೂ ಜಾತ್ರೆ ಯಶಸ್ವಿಗೆ ಬೆಂಬಲ ಸೂಚಿಸಿದ್ದು ಉತ್ತಮ ಕಾರ್ಯವಾಗಿದೆ. ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆದರೆ ಮಾತ್ರ ನಮ್ಮ ಬದುಕಿಗೆ ನಿಜ ಅರ್ಥ ಲಭಿಸುತ್ತದೆ ಎಂದರು.
ನಿವೃತ್ತ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಕೆ.ಕುದರಿ, ಚೈತನ್ಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಗುರುರಾಜ ಕುಲಕರ್ಣಿ, ಕಮಿಟಿಯ ಖಜಾಂಚಿ ಕಾಶೀನಾಥ ತಳಕೇರಿ, ಸದಸ್ಯ ಪ್ರಕಾಶ ಮಲ್ಲಾರಿ, ಉಪಾಧ್ಯಕ್ಷ ಶ್ರೀಧರ ನಾಡಗೌಡ ಅಧ್ಯಕ್ಷ ವಿನೋದಗೌಡ ಪಾಟೀಲ ಮಾತನಾಡಿದರು.
ದೇವಸ್ಥಾನ ಸಮಿತಿಯ ಎಲ್ಲ ಸದಸ್ಯರನ್ನು ಕಾಶಿನಾಥ ಸಾಲಕ್ಕಿ ಹಾಗೂ ಚಿನ್ಮಯಿ(ಅಪ್ಪು).ಎಸ್.ಕೋರಿ ಸನ್ಮಾನಿಸಿದ್ದು ವಿಶೇಷವಾಗಿತ್ತು.
ಪಿಎಸ್‌ಐ ಸಚೀನ ಆಲಮೇಲಕರ, ಪ.ಪಂ ಸದಸ್ಯರಾದ ಕಾಸುಗೌಡ ಬಿರಾದಾರ(ಜಲಕತ್ತಿ), ಮುಖಂಡರುಗಳಾದ ಪಿ.ಎಸ್.ಮಿಂಚನಾಳ, ಬಾಬುಗೌಡ ಪಾಟೀಲ, ಯಲಗೂರೇಶ ದೇವೂರ, ಗುಂಡು ಕೋರಿ, ಸಂಗಪ್ಪಣ್ಣ ತಡವಲ್, ಮಲ್ಲು ಕೋರಿ, ಶಿವನಗೌಡ ಪಾಟೀಲ, ಸಿದ್ಧನಗೌಡ ಪಾಟೀಲ, ವ್ಹಿ.ಜಿ.ಕೋರಿ, ಶಶಿಧರ ತಾಳಿಕೋಟಿ, ಶರಣಗೌಡ ಅಂಗಡಿ, ಎಸ್.ಎಮ್.ಬೆನಕನಹಳ್ಳಿ, ಶಾಂತಪ್ಪ ಪಡನೂರ ಎಸ್.ಕೆ.ಸುರುಪೂರ ವಿನೋದ ನಾಡಗೌಡ, ಈರಣ್ಣ ವಸ್ತೊದ, ಶಂಕರ ಜಮಾದಾರ, ರವಿ ವಡ್ಡೋಡಗಿ, ಸಂತೋಷ ಸಾಲಕ್ಕಿ, ಕಾಸು ಮೇಲಿನಮನಿ, ಅನೀಲ ಪಾಟೀಲ, ರಾಜು ಮೆಟಗಾರ, ಶ್ರೀನಿವಾಸ ಕುಲಕರ್ಣಿ, ಬಾಬುಗೌಡ ಏಳಕೋಟಿ ಸಹಿತ ಕಮಿಟಿಯ ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 