ಕೇಸರಾಳ ತಾಂಡಾದಲ್ಲಿ ಸೆ.28ರಂದು ಜಾತ್ರಾ ಮಹೋತ್ಸವ

ಕೇಸರಾಳ ತಾಂಡಾದಲ್ಲಿ ಸೆ.28ರಂದು ಜಾತ್ರಾ ಮಹೋತ್ಸವ  Fair festival at Kesarala Tanda on September 28


ಇಂಡಿ 24: ತಾಲ್ಲೂಕಿನ ಕೇಸರಾಳ ತಾಂಡಾದ ಶಂಕರ ಚಾಂದುಬಾಯಿ ಕಾಲೋನಿಯಲ್ಲಿ ಸೆ.28ರಂದು ಮಧ್ಯಾಹ್ನ 3 ಗಂಟೆಗೆ ದಿವಂಗತ ಶ್ರೀಶಂಕರ ಬಿ. ರಾಠೋಡ ಹಾಗೂ ದಿವಂಗತ  ಚಾಂದುಬಾಯಿ ಶಂ. ರಾಠೋಡ ಅವರ ಜಾತ್ರಾ ಮಹೋತ್ಸವ ಹಾಗೂ ತಾಲ್ಲೂಕಾ ಬಂಜಾರ ಸಮಾಜದ ವತಿಯಿಂದ ಸಚಿವ ರುದ್ರ​‍್ಪ ಲಮಾಣಿ ಅವರಿಗೆ ಅದ್ದೂರಿ ಪಾಕ್ಷಿಕೇತರ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ ಎಂದು ಸೋಮದೇವರಹಟ್ಟಿಯ  ಜಗನ್ ಮಹಾರಾಜರು ತಿಳಿಸಿದರು.  

ಕೇಸರಾಳ ಎಲ್‌.ಟಿ.ಐ.ಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ರಾ ಮಹೋತ್ಸವ ಹಾಗೂ ಸನ್ಮಾನ ಕಾರ್ಯಕ್ರಮವು ಬಂಜಾರ ಸಮುದಾಯದ ಒಗ್ಗಟ್ಟಿನ ಪ್ರದರ್ಶನವಾಗಲಿದೆ. ಬಂಜಾರ ಸಮುದಾಯದ ಹೆಮ್ಮೆಯ ನಾಯಕರಾದ ಸಚಿವ ರುದ್ರ​‍್ಪ ಲಮಾಣಿ ಅವರನ್ನು ಗೌರವಿಸುವ ಮೂಲಕ ಸಮುದಾಯದಲ್ಲಿ ನಾವೆಲ್ಲರೂ ಒಂದೇ ಕುಟುಂಬ ಎಂಬ ಭಾವನೆ ಮೂಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು. ಅಂದು ರಾತ್ರಿ ಸೋನು ಡೈಮಂಡ್ ಮೆಲೋಡಿಸ್ ತಂಡದಿಂದ ಜಾನಪದ ಗಾಯನ ಹಾಗೂ ಗೀತಾಂಜಲಿಬಾಯಿ ಮತ್ತು ಫುಲಸಿಂಗ್ ರಾಠೋಡ ಅವರಿಂದ ಹಾಸ್ಯ ಕಾರ್ಯಕ್ರಮ ನಡೆಯಲಿದೆ.

ಬಂಜಾರ ಸಂಘದ ಸಂಜು ಚವಾಣ್, ಲಿಂಬಾಜಿ ರಾಠೋಡ, ವಿಜಯಕುಮಾರ ರಾಠೋಡ, ಗಣಪತಿ ರಾಠೋಡ ಹಾಗೂ ಕಾಶೀನಾಥ ಪವಾರ್ ಮಾತನಾಡಿ, ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂಜಾರ ಬಂಧುಗಳು ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಧರ್ಮು ರಾಠೋಡ, ಸುಭಾಷ್ ತೋರತ್, ಅಪ್ಪು ಪವಾರ್ ಹಾಗೂ ಸಿದ್ದು ರಾಠೋಡ ಉಪಸ್ಥಿತರಿದ್ದರು.