ಎಸ್‌ಎಫ್‌ಐ ಮಧ್ಯಪ್ರವೇಶ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸೌಲಭ್ಯ
ರಾಣೆಬೇನ್ನೂರ 29: ನಗರದ ಶ್ರೀರಾಮ ನಗರದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳು ಮತ್ತು ಸ್ವಚ್ಚತೆ ನಿರ್ವಹಣೆ ಕುರಿತು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ರಾಣೆಬೇನ್ನೂರ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ದಿನಾಂಕ: 23.01.2025 ರಂದು ವಸತಿ ನಿಲಯದ ವಿದ್ಯಾರ್ಥಿಗಳು ಬಿಸಿಎಮ್ ಇಲಾಖೆಯ ಮಾನ್ಯ ಗ್ರೇಡ್-2 ತಾಲ್ಲೂಕು ವಿಸ್ತಾರಣಧಿಕಾರಿ ಪ್ರಸಾದ್ ಆಲದಕಟ್ಟಿ ಅವರಿಗೆ ಮನವಿ ಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ತಾಲ್ಲೂಕಾಧಿಕಾರಿ ಎಸ್.ವಿ.ಹಿರೇಮಠ ಹಾಗೂ ವಸತಿ ನಿಲಯದ ಮೇಲ್ವಿಚಾರಕ ಶಾಂತಪ್ಪ ಸಾಹುಕಾರ ಅವರು ವಿದ್ಯಾರ್ಥಿಗಳೊಂದಿಗೆ ಸಭೆ ನಡೆಸಿ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ.ವಿದ್ಯಾರ್ಥಿಗಳ ಪರವಾಗಿ ಎಸ್‌ಎಫ್‌ಐ ಮನವಿಗೆ ವಸತಿ ನಿಲಯದ ಮೇಲ್ವಿಚಾರಕರು ಸ್ಪಂದಿಸಿ ವಸತಿ ನಿಲಯದಲ್ಲಿ ನೀರು ಶೇಖರಣೆ ಮಾಡುವ ಎಲ್ಲಾ ಸಿಂಟೆಕ್ಸ್ ಗಳು, ಶೌಚಾಲಯ, ಸ್ನಾನದ ಕೊಠಡಿ,ಅಡುಗೆ ಕೊಠಡಿ, ವಸತಿ ಕೊಠಡಿಗಳನ್ನು ಸ್ವಚ್ಛತೆ ಮಾಡಿಸಿ ಎಲ್ಲಾ ವಿದ್ಯಾರ್ಥಿಗಳ ಪ್ರತಿ ರೂಮ್ ಗೂ ನೂತನ ಫ್ಯಾನ್ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಣೆ ಮಾಡಿದ್ದಾರೆ. ನಿಲಯದ ಸುತ್ತಲಿನ ಆವರಣ ಸ್ವಚ್ಛಗೊಳಿಸಲಾಗಿದ್ದು. ಪ್ರತಿ ಮಾಹೆಯಾನ ವಿದ್ಯಾರ್ಥಿಗಳಿಗೆ-ಸೋಪ್ ಕಿಟ್ಟಗಳನ್ನು ವಿತರಿಸಲಾಗಿದ್ದು ಹಾಗೂ ದಿನಾಲು ನಿಲಯವನ್ನು ಸ್ವಚ್ಛತೆ ಮಾಡುತ್ತಿದ್ದು ಇನ್ನೂಳಿದ ಸಣ್ಣಪುಟ್ಟ ರೀಪೆರಿಗಳನ್ನು ಮತ್ತು ಕಟ್ಟಡಕ್ಕೆ ಸುಣ್ಣ ಬಣ್ಣ ಈಗಾಗಲೆ ವಿದ್ಯಾರ್ಥಿನಿಲಯಕ್ಕೆ ಬಿಡುಗಡೆಯಾದ ಅನುದಾನದಲ್ಲಿ ಮಾಡಿಸಲಾಗುವದು. ಅಡುಗೆ ಸಿಬ್ಬಂದಿಗಳಿಗೆ ಕಟ್ಟುನಿಟ್ಟಾಗಿ ಹಾಸ್ಟೆಲ್ ವ್ಯವಸ್ಥೆ ಕಾಪಾಡಿಕೊಂಡು ಹೋಗುಬೇಕು ಎಂದು ಹೇಳಿದ್ದಾರೆ.ಇನ್ನೂ ಉಳಿದ ಎಲ್ಲಾ ಸಮಸ್ಯೆಗಳಿಗೂ ಮೇಲಾಧಿಕಾರಿಗಳು ಈತ ಗಮನ ಹರಿಸಬೇಕು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹಾಸ್ಟೆಲ್ ಮೇಲ್ದರ್ಜೆಗೆ ಏರಿಸಬೇಕು ಆದಷ್ಟು ಶೀಘ್ರವಾಗಿ ಗ್ರಂಥಾಲಯ, ಊಟದ ಹಾಲ್ ನಿರ್ಮಾಣಕ್ಕೆ ಮುಂದಾಗಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ರಾಣೆಬೇನ್ನೂರ ತಾಲ್ಲೂಕು ಸಮಿತಿ ಒತ್ತಾಯಿಸುತ್ತದೆ ಎಂದು ತಾಲ್ಲೂಕು ಅಧ್ಯಕ್ಷ ಗೌತಮ ಸಾವಕ್ಕನವರ ಹೇಳಿದರು.