ಲೋಕದರ್ಶನ ವರದಿ
ಬೆಳಗಾವಿ 01: ಭೋಧಲನಾ ವೃತ್ತಿಯು ನಾವು ನಂಬಿರುವಂತೆ ಇರುವುದಿಲ್ಲ. ಹಿಂದಿನ ಕಾಲಕ್ಕಿಂತಲೂ ಇಂದು ಬಹಳಷ್ಟು ಆವ್ಹಾನ್ನಮಯ ಹಾಗೂ ಭಾವೋದ್ವೇಗಕಾರಿಯಾಗಿದೆ. ಪ್ರತಿಯೋರ್ವ ಶಿಕ್ಷಕನೂ ತನ್ನ ಸಮುದಾಯ ಶಿಕ್ಷಕರುಗಳ ಮಧ್ಯದಲ್ಲಿನ ಸದಸ್ಯನಾಗಿದ್ದು, ಸಾಮಥ್ರ್ಯ ಹಾಗೂ ಸಂಪನ್ಮೂಲಗಳನ್ನು ತನ್ನ ವಿದ್ಯಾಥರ್ಿಗಳಿಗಾಗಿ ಹಾಗೂ ಮುಂಬರಲಿರುವ ಇಡಿಯಾದ ತಲೆಮಾರಿಗೆ ಬೇಕಿರುವಂತೆ ಹೊಂದಬೇಕಿದೆ.
ಜೈನ ಹೆರಿಟೇಜ ಸ್ಕೂಲನಲ್ಲಿ ಪರಿಣಾಮಕಾರಿ ವಾತಾವರಣದ ಪ್ರಕ್ರಿಯೆಯು ನಿರಂತರವಾಗಿದ್ದು, ಶಿಕ್ಷಕರು ಸಬಲೀಕರಣ ಹೊಂದುವಂತೆ ಹಿತಕರ ಸ್ಥಿತಿ ನಿರ್ಮಿಸಿ ಅವರು ವಿದ್ಯಾಥರ್ಿಗಳಿಗೆ ಅಪೂರ್ವ ಸಲಹಾಕಾರನ್ನಾಗಿಸುವ ಪ್ರಯತ್ನ ನಡೆಯುತಿದೆ.
ಟಾಟಾ ಎಡ್ಜ್ ಕ್ಲಾಸರೂಮ ಪದ್ಧತಿಯಂತೆ ಶಿಕ್ಷಕರಿಗೆ 2019-2020ನೇ ಶೈಕ್ಷಣಿಕ ವರ್ಷದಲ್ಲಿ ತರಬೇತಿ ಯೋಜನೆಯೊಂದನ್ನು ಆಯೋಜಿಸಲಾಗಿದೆ. ಈ ಯೋಜನೆ ಶ್ರೀಮತಿ. ಮೃಘ್ಯಾ ಇವರ ನೇತೃತ್ವದಲ್ಲ ನಡೆಯಲಿದ್ದು, ವರ್ಗ ಭೋಧನೆ ಪರಿಣಾಮಕಾರಿಯಾಗುವಂತೆ ಹಾಗೂ ಸಂತೋಷಕರ ಅನುಭವವಾಗುವಂತೆ ಮಾರ್ಗದರ್ಶನ ಮಾಡಲಿದ್ದಾರೆ.
ಶ್ರೀಮತಿ. ಸಂಧ್ಯಾ, ಸಾಮಥ್ರ್ಯ ನಿಮರ್ಾಣ ಯೋಜನೆಯನ್ನು ಉಧ್ಘಾಟಿಸುತ್ತ ಆಂಗ್ಲಭಾಷೆ ಹೆಚ್ಚು ಸಂತೋಷಮಯವಾಗಿರುವಂತೆ ಒತ್ತು ಕೊಟ್ಟು ಹೇಳಿದರು.
ಶಿಕ್ಷಕರ ಉನ್ನತೀಕರಣ ಕೇವಲ ಕಾರ್ಯ ನಿರ್ವಹಣೆಗೆ ಮಾತ್ರ ಸೀಮೀತವಾಗಿರದೇ ಸ್ಟಾಫ್ ಪಿಕ್ನಿಕ್ನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು. ಜೈನ ಹೆರಿಟೇಜ ಶಾಲೆಯ ಎಲ್ಲ ಸದಸ್ಯರು ಇದರಲ್ಲಿ ಭಾಗಿಯಾಗಿ, ಹೊಸ ಸದಸ್ಯರುಗಳೊಂದಿಗೆ ಹೊಂದಿಕೊಂಡು ಹೋಗುವ ರೀತಿಯಲ್ಲಿ ಆಯೋಜಿಸಲಾಗಿತ್ತು. ರೆಡ್ ವ್ಯಾಲಿ ರಿಸಾರ್ಟಗೆ ಶಾಲೆಯ ಭೋಧಕ ಹಾಗೂ ಭೋಧಕೇತರ ಸಿಬ್ಬಂದಿ ಈ ಪ್ರವಾಸದಲ್ಲಿ ಭಾಗಿಯಾಗಿದ್ದರು. ನಿರಂತರ ರಭಸದ ಕೆಲಸಗಳಲ್ಲಿ ಬಿಡುವು ನೀಡಲು ಈ ಪ್ರವಾಸ ಬಹಳೇ ಸಹಕಾರಿಯಾಗಿತ್ತು. ಚಿಕ್ಕಲಿ ಜಲಪಾತಕ್ಕೆ ಭೇಟಿ ನೀಡಿ, ರೆಡ್ ವ್ಯಾಲಿ ರಿಸಾರ್ಟನಲ್ಲಿ ಮನರಂಜನಾತ್ಮಕ ಆಟಗಳನ್ನು ಏರ್ಪಡಿಸಲಾಗಿತ್ತು. ಸಣ್ಣ ಕೆಲಸಗಳನ್ನು ಮಾಡುವಾಗ ದೊಡ್ಡ ಕನಸುಗಳನ್ನು ಹೊಂದಿರಬೇಕೆಂಬುದೇ ಈ ಪ್ರಯತ್ನದ ಭಾವವಾಗಿತ್ತು.