ಮುಂಬೈ ರಾಸಾಯನಿಕ ತಯಾರಿಕಾ ಘಟಕದಲ್ಲಿ ಭಾರಿ ಬೆಂಕಿ, ಅನೇಕ ಸ್ಪೋಟ

ಮುಂಬೈ  ಫೆ 19, ಮುಂಬೈನಿಂದ 31 ಕಿಲೋಮೀಟರ್ ದೂರದಲ್ಲಿರುವ ಡೊಂಬಿವ್ಲಿಯಲ್ಲಿರುವ ರಾಸಾಯನಿಕ ತಯಾರಿಕಾ ಘಟಕದಲ್ಲಿ  ಬುಧವಾರ ಮುಂಜಾನೆ   ಬೆಂಕಿ ದುರಂತ ಸಂಭವಿಸಿದೆ. ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮದಲ್ಲಿ (ಎಂಐಡಿಸಿ) ಮೆಟ್ರೋಪಾಲಿಟನ್ ಎಕ್ಸಿಮ್ಚೆಮ್ ಖಾಸಗಿ ಕಂಪನಿಯಲ್ಲಿ  ಸಂಭವಿಸಿದ ಬೆಂಕಿಯಿಂದ  100 ಕ್ಕೂ ಹೆಚ್ಚು ಸ್ಫೋಟಗಳಿಗೂ  ಕಾರಣವಾಗಿದೆ.  18 ವಿಧದ ದ್ರಾವಕಗಳನ್ನು ತಯಾರಿಸುವ ಕಂಪನಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆಅಗ್ನಿಶಾಮಕ ಯಂತ್ರಗಳು ಸಸತವಾಗಿ ಶ್ರಮಿಸಿ ಬೆಂಕಿ ನಂದಿಸಿವೆ .  ಆದರೆ ಈ ಪ್ರದೇಶ  ಇನ್ನೂ ಹೊಗೆಯಿಂದ ಕೂಡಿದೆ. ನಾಲ್ಕು ಅಗ್ನಿಶಾಮಕಯಂತ್ರಗಳು  ರಾತ್ರಿಯಿಡೀ ಸ್ಥಳದಲ್ಲಿ ಕಾರ್ಯಚರಣೆ ನಡೆಸಿವೆ ಎಂದು  ಡೊಂಬಿವ್ಲಿ ಮುನ್ಸಿಪಲ್ ಕಾಪರ್ೊರೇಶನ್ನ ಮುಖ್ಯ ಅಗ್ನಿಶಾಮಕ ಅಧಿಕಾರಿ ದಿಲೀಪ್ ಗುಂಡ್ ಹೇಳಿದ್ದು ಈ ಘಟನೆಯಲ್ಲಿ . ಯಾವುದೇ ಸಾವು- ನೋವು  ವರದಿಯಾಗಿಲ್ಲ. 18 ವಿಧದ ದ್ರಾವಕಗಳನ್ನು ತಯಾರಿಸುವ ಕಂಪನಿಯಲ್ಲಿ  ಬೆಂಕಿ ಕಾಣಿಸಿಕೊಂಡಿದೆ.  ಕಟ್ಟಡದಲ್ಲಿ ಸುಡುವ ರಾಸಾಯನಿಕಗಳು ಇದ್ದ ಕಾರಣ  ಅನೇಕ ಸ್ಫೋಟಗಳು ಸಂಭವಿಸಿವೆ.   ಬೆಂಕಿಯ ಕಾರಣ 500 ಮೀಟರ್ ವ್ಯಾಪ್ತಿಯಲ್ಲಿರುವ ಕಚೇರಿಗಳು, ಶಾಲೆಗಳು ಮತ್ತು ಇತರ ಕಟ್ಟಡಗಳಲ್ಲಿರುವ ಜನರನ್ನು ಸ್ಥಳಾಂತರಿಸಲಾಗಿದೆ.