ಅಗ್ನಿ ಅವಘಡ: ದಂಪತಿ ಹಾಗೂ ಪುತ್ರಿ ಜೀವಂತ ಸಾವು

ಶ್ರೀನಗರ, ಮಾ 07, ಜಮ್ಮು ಕಾಶ್ಮೀರ ರಾಜಧಾನಿ ಶ್ರೀನಗರದ ಮನೆಯೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ದಂಪತಿ ಹಾಗೂ ಅವರ ಪುತ್ರಿಯೊಬ್ಬರು ಜೀವಂತ ಬೆಂದು ಹೋಗಿರುವ ಹೃದಯವಿದ್ರಾವಕ ಘಟನೆ ಶನಿವಾರ ಮುಂಜಾನೆ ನಡೆದಿದೆ.  ಶೇಷಗಿರಿ ಮೊಹಲ್ಲಾದ ಮನೆತಲ್ಲಿಲ್ಲಿ ದುರಂತ ಸಂಭವಿಸಿದೆ.  ಅಗ್ನಿ ಇಡೀ ಮನೆಯನ್ನು ವ್ಯಾಪಿಸಿದ್ದು, ಜಾವೆದ್ ಅಹ್ಮದ್, ಪತ್ನಿ ಸೋಫಿಯಾ ಜಾವೆದ್ ಹಾಗೂ ಪುತ್ರಿ ಹಫ್ಸಾ ಹೊರಬರಲು ಸಾಧ್ಯವಾಗದೆ ಬೆಂದು ಹೋಗಿದ್ದಾರೆ.  ಬೆಂಕಿಯಲ್ಲಿ ತಂದೆ, ತಾಯಿ, ಮಗಳು ಮೂವರೂ ಸುಟ್ಟುಹೋಗಿದ್ದಾರೆ.  ಅವಘಡಕ್ಕೆ ಖಚಿತ ಕಾರಣ ತಿಳಿದುಬಂದಿಲ್ಲ.  ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.