ಫಿಲಂ ಸಿಟಿ ನಿರ್ಮಾಣ’ ಉತ್ತಮ ನಿರ್ಧಾರ: ನಾಗಾಭರಣ

ಬೆಂಗಳೂರು, ಮಾ 05, ರಾಜ್ಯದಲ್ಲಿ ಫಿಲಂ   ಸಿಟಿ ನಿರ್ಮಾಣವಾಗಬೇಕೆಂಬ ಕನ್ನಡ ಚಿತ್ರರಂಗದ ಬೇಡಿಕೆಗೆ ಮತ್ತೆ ಗರಿ ಮೂಡಿದೆ  500 ಕೋಟಿ ರೂಪಾಯಿ ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದೊಡನೆ     ಫಿಲ್ಮ್ ಸಿಟಿ ನಿರ್ಮಾಣ ಮಾಡುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದು ಮಂಡಿಸಿದ ರಾಜ್ಯ   ಬಜೆಟ್ ನಲ್ಲಿ ಘೋಷಿಸಿದ್ದಾರೆ   ಈ ಕುರಿತು ಹಿರಿಯ ನಟ, ನಿರ್ದೇಶಕ ಟಿ ಎಸ್ ನಾಗಾಭರಣ,   ಸರ್ಕಾರದ ನಿರ್ಮಾಣ ಒಳ್ಳೆಯದು  ಇದು ಬಹುದಿನಗಳ  ಬೇಡಿಕೆಯಾಗಿದ್ದು, ನೀಡಿರುವ ಭರವಸೆ ಬೇಗನೆ ಕಾರ್ಯಗತವಾಗಲಿ ಎಂದು ಯುಎನ್ಐ ಸುದ್ದಿ ಸಂಸ್ಥೆಗೆ   ಪ್ರತಿಕ್ರಿಯಿಸಿದ್ದಾರೆ   ಫಿಲಂ ಸಿಟಿ ನಿರ್ಮಾಣದ ಕುರಿತು ಎಲ್ಲ ಮುಖ್ಯಮಂತ್ರಿಗಳೂ   ತಮ್ಮ ಅವಧಿಯಲ್ಲಿ ಪ್ರಸ್ತಾಪಿಸಿ ಭರವಸೆ ನೀಡುತ್ತಲೇ ಇದ್ದಾರೆ  ಈ ಬಾರಿಯಾದರೂ ಅದು ಅನುಷ್ಠಾನಗೊಳ್ಳಲಿ ಎಂದು ಹೇಳಿದ್ದಾರೆ.  ಈ ಹಿಂದೆ ಕನಕಪುರ ರಸ್ತೆಯಲ್ಲಿರುವ ರೋರಿಚ್ ಎಸ್ಟೇಟ್ನಲ್ಲಿ ಫಿಲ್ಮ್ ಸಿಟಿ ನಿರ್ಮಿಸುವ ಬಗ್ಗೆ ಚಿಂತಿಸಲಾಗಿತ್ತು.

     ಆದರೆ ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲೇ ಮತ್ತೊಂದು ಹೊಸ ಜಾಗವನ್ನು ಸರಕಾರ ಹುಡುಕಲು ಮುಂದಾಗಿದೆ. 'ನಾನಾ   ಕಾರಣಗಳಿಂದ ರೋರಿಕ್ ಎಸ್ಟೇಟ್ನಲ್ಲಿ ಆಗಬೇಕಿದ್ದ ಫಿಲ್ಮ್ ಸಿಟಿ ನಿರ್ಮಾಣ ಪ್ರಸ್ತಾವನೆಯನ್ನು ಕೈಬಿಡಲಾಗಿದೆ. ಬೇರೆ ಜಾಗವನ್ನು ಬೆಂಗಳೂರಿನಲ್ಲೇ ಹುಡುಕಲಾಗುತ್ತಿದೆ.   ಅದಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಗಳ ಜತೆ ಕೈ ಜೋಡಿಸುವ ಪ್ರಸ್ತಾಪವೂ ಇದೆ' ಎಂದು ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ತಿಳಿಸಿದ್ದರು.     ಫಿಲ್ಮ್     ಸಿಟಿ ನಿರ್ಮಾಣಕ್ಕೆ ಒಟ್ಟು 200 ಎಕರೆ     ಜಾಗ ಗುರುತಿಸಬೇಕಿದ್ದು,    ಅ ಬೆಂಗಳೂರಿನಲ್ಲೇ ಮತ್ತೊಂದು ಜಾಗವನ್ನು ನೋಡುತ್ತಿರುವುದಾಗಿ ಇತ್ತೀಚೆಗೆ ನಡೆದ 'ಡಾ. ಬಿ. ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿ' ಪ್ರದಾನ ಸಮಾರಂಭದಲ್ಲಿ ಹೇಳಿದ್ದರು.    ಸಿದ್ದರಾಮಯ್ಯ ಸರಕಾರ ಮೈಸೂರಿನಲ್ಲಿ ಫಿಲ್ಮ್ ಸಿಟಿ ಮಾಡುವ ಪ್ರಸ್ತಾಪ ಮುಂದಿಟ್ಟಿತ್ತು. ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ರಾಮನಗರದಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಮಾಡಲು ನಿರ್ಧರಿಸಿತ್ತು.